ನಾಲ್ಕೇ ದಿನಕ್ಕೆ ಚಳಿಗಾಲದ ಅಧಿವೇಶನ ಅಂತ್ಯ : ಕಾರಣ ಏನು ಗೊತ್ತಾ..?

ಸೋಮವಾರವಷ್ಟೇ ಆರಂಭವಾದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಅಕಾಲಿಕ ಅಂತ್ಯ ಕಾಣಲಿದೆ. ಇದೇ 15ರವರೆಗೆ ಅಧಿವೇಶನ ಕರೆಯಲಾಗಿತ್ತಾದರೂ ಅದನ್ನು ನಾಲ್ಕೇ ದಿನಕ್ಕೆ ಮುಗಿಸಲು ತೀರ್ಮಾನಿಸಲಾಗಿದೆ.

ಕಲಾಪ ಸಲಹಾ ಸಮಿತಿ ಸಭೆಯ ತೀರ್ಮಾನದ ಪ್ರಕಾರ ಗುರುವಾರ ಚಳಿಗಾಲದ ಅಧಿವೇಶನ ಅಂತ್ಯಗೊಳ್ಳಲಿದೆ. ಕೇವಲ ನಾಲ್ಕು ದಿನಕ್ಕೆ ಅಧಿವೇಶನ ಮುಗಿಸಲು ಗ್ರಾಮ ಪಂಚಾಯ್ತಿ ಚುನಾವಣೆ ಕಾರಣ ಎನ್ನಲಾಗುತ್ತಿದೆ.

ಚುಣಾವಣಾ ಕಾರ್‍ಯದಲ್ಲಿ ಪರೋಕ್ಷವಾಗಿಯಾದರೂ ಶಾಸಕರು ತೊಡಗಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕಲಾಪ ಬಲಿ ಕೊಡಲು ತೀರ್ಮಾನಿಸಲಾಗಿದೆ. ಈ ದಿಢೀರ್‍ ತೀರ್ಮಾನದ ಹಿನ್ನೆಲೆಯಲ್ಲಿ ಗೋಹತ್ಯೆಸೇರಿದಂತೆ ಅನೇಕ ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳುವ ಬಿಜೆಪಿಯ ಹುನ್ನಾರಕ್ಕೂ ಅಡ್ಡಿ ಉಂಟಾಗಲಿದೆ.

ರಾಜ್ಯದ ಸುಮಾರು 5800 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಮೊದಲ ಹಂತದ ಚುನಾವನೆಗೆ ಅಧಿಸೂಚನೆ ಪ್ರಕಟವಾಗಿದೆ.

ಅದರಂತೆ ನಾಮಪತ್ರ ಸಲ್ಲಿಕೆ ಕಾರ್‍ಯ ಅದಾಗಲೇ ಶುರುವಾಗಿದೆ. ಈ ಚುನಾವಣೆ ಪಕ್ಷಗಳ ಚಿಹ್ನೆಯಡಿ ನಡೆಯದಿದ್ದರೂ ಅವುಗಳ ಕಾರ್‍ಯಕರ್ತರೇ ಹೆಚ್ಚಾಗಿ ಕಣಕ್ಕಿಳಿಯಲಿರುವುದರಿಂದ ಎಲ್ಲ ಪಕ್ಷಗಳೂ ಈ ಚುನಾವಣೆಯನ್ನು ಗಂಭೀರವಾಗಿಯೇ ಪರಿಗಣನೆಮ ಮಾಡಲಿವೆ.

Spread the love

Leave a Reply

Your email address will not be published. Required fields are marked *