ಪೆಟ್ರೋಲ್‌ ಬೆಲೆ ದಿನನಿತ್ಯ ಏರಿಕೆ: ಮೋದಿ ಸರ್ಕಾರದ ವಿರುದ್ಧ ಆಕ್ರೋಶ

ಕಳೆದ ಹತ್ತು ದಿನಗಳಿಂದ ಪೆಟ್ರೋಲ್ ಬೆಲೆ ಸತತವಾಗಿ ಒಂಭತ್ತು ಬಾರಿ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರಿಗೆ Rs 84.39 ರೂಗೆ ತಲುಪಿದೆ. ಹೀಗಾಗಿ ಬೆಲೆ ಏರಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ #petrolprice  ಟ್ರೆಂಡಿಂಗ್ ಆಗುತ್ತಿದೆ.

“ಯಾರಾದರೂ ಪೆಟ್ರೋಲ್ ಬೆಲೆ ಏರಿಕೆಯ ಕುರಿತು ಏನನ್ನಾದರೂ ಹೇಳುವುದು ಇದೆಯೇ? ಅಥವಾ ಅವರ ಮೇಲಿನ ಭಕ್ತಿಯಿಂದ ನಿಮ್ಮ ವಾಹನಗಳನ್ನು ಓಡಿಸುವುದನ್ನು ನಿಲ್ಲಿಸುತ್ತೀರೋ?” ಎಂದು ಗ್ರೀಷ್ಮಾ ಶುಕ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯನ್ನು ಖಂಡಿಸಿ ಬೀದಿಗಿಳಿದು ತೀವ್ರ ಪ್ರತಿಭಟನೆ ಮಾಡಿದ್ದ ಬಿಜೆಪಿಗರು ಇಂದು ಸಮ್ಮುನಿರುವುದೇಕೆ ಎಂದು ಹಲವರು ಸಾಮಾಜಿಕ ಮಾದ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆಸ್ ಬುಕ್ ನಲ್ಲಿ Gladson Almeida ಎನ್ನುವವರು ಪೆಟ್ರೋಲ್ ಬೆಲೆ ಏರಿಕೆಯ ಕುರಿತು ತಮ್ಮ ಬರಹವೊಂದನ್ನು ಹಂಚಿಕೊಂಡಿದ್ದರು. ಅದು ವೈರಲ್‌ ಆಗಿದೆ.

“ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲಿಗೆ ಇವತ್ತು 45 ಡಾಲರ್. ಅಂದರೆ ಭಾರತಕ್ಕೆ ಪ್ರತೀ ಲೀಟರ್ ಪೆಟ್ರೋಲ್ Rs 21 ಕ್ಕೆ ಸಿಗುತ್ತೆ. ಅದಕ್ಕೆ ಸಂಸ್ಕರಣಾ ಹಾಗೂ ವಿತರಣಾ ವೆಚ್ಚ ಸೇರಿ ಪ್ರತೀ ಲೀಟರ್ ಪೆಟ್ರೋಲ್ ಗೆ Rs 29-30 ಆಗಬಹುದು. ಮಿಕ್ಕ ಐವತ್ತು ರೂಪಾಯಿಗಿಂತ ಹೆಚ್ಚಿನದ್ದು ತೆರಿಗೆ. ಈ ಐವತ್ತೊಂದು ರೂಪಾಯಿ ತೆರಿಗೆಯಲ್ಲಿ ಕೇಂದ್ರ ಸರಕಾರದ ಅಬಕಾರಿ ತೆರಿಗೆ ಪ್ರತೀ ಲೀಟರ್ ಪೆಟ್ರೋಲ್ ಮೇಲೆ Rs 32.98.” ಎಂದು ಫೇಸ್ ಬುಕ್ ಬರಹದಲ್ಲಿ ಹೇಳಿದ್ದಾರೆ.

‘ಯುಪಿಎ ಸರಕಾರದ ಆಡಳಿತವಿದ್ದ ಹತ್ತು ವರುಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಚಾ ತೈಲದ ಬೆಲೆ ಸರಾಸರಿಯಾಗಿ 80-90 ಡಾಲರ್ ಇತ್ತು. ಅಂದರೆ ಈಗಿನ ಬೆಲೆಯ ದುಪ್ಪಟ್ಟು. ಕೆಲವೊಮ್ಮೆ ಪ್ರತೀ ಬ್ಯಾರೆಲಿಗೆ 120 ಡಾಲರ್ ತನಕ ಹೋಗಿತ್ತು. ಆದರೆ ಈ ಇಡೀ ಅವಧಿಯಲ್ಲಿ ಕೇಂದ್ರ ಸರಕಾರ ವಿಧಿಸಿದ ಅತೀ ಹೆಚ್ಚಿನ ಅಬಕಾರಿ ಸುಂಕ Rs 9.50. ಮಾತ್ರ’ ಎಂದು ಹೇಳಿದ್ದಾರೆ.

“ಅದಾಗ್ಯೂ ಅಬ್ಬಾ ಏನ್ ಪ್ರತಿಭಟನೆ, ಎಂಥಾ ಉಗ್ರ ಗಲಾಟೆ. ಸ್ಮ್ರತಿ ಇರಾನಿ, ಮಾಳವಿಕಾ ಅವಿನಾಶ್, ಶೃತಿ, ತಾರಾ, ಕೆನಡಾದ ವಲಸೆ ಕಾರ್ಮಿಕ ಅಕ್ಷಯ್ ಕುಮಾರು, ಅನುಪಮ್ ಖೇರ್, ಜೂಹಿ ಚಾವ್ಲಾ, ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಎಂಥಾ ವೈವಿಧ್ಯಮಯ ಪ್ರತಿಭಟನೆ, ಭಾರತ್ ಬಂದ್, ರಾಸ್ತಾ ರೋಕೋಗಳು!”

‘ಆದರೆ ಈ ಸರಕಾರ ಅಬಕಾರಿ ಸುಂಕವನ್ನು ಮುನ್ನೂರೈವತ್ತು ಪಟ್ಟು ಹೆಚ್ಚಿಸಿದರೂ ಒಬ್ಬನೇ ಒಬ್ಬ ಕಮಕ್-ಕಿಮಕ್ ಅನ್ನಲ್ಲ. ಬೇರೇ ದಿನಗಳಲ್ಲಿ ಹತ್ತು ರುಪಾಯಿ ಸುಂಕ ಕೊಡುತ್ತಿದ್ದವರು ಇವತ್ತು ಅಚ್ಚೆ ದಿನ್‍ ಕಾಲದಲ್ಲಿ ಮೂವತ್ತೆರಡು ರೂಪಾಯಿ ಸುಂಕ ಕೊಟ್ಟೂ ನವರಂಧ್ರಗಳಲ್ಲಿ ಬೆಣೆ ಹಾಕಿ ಕುಳಿತುಕೊಂಡಿದ್ದಾರೆ. ನಮ್ಮಾಚೆ ಶೋಭಾ ಕರಂದ್ಲಾಜೆ ಪರ ಪ್ರಚಾರ ಮಾಡುತ್ತಿದ್ದ ಕೆಲವರು ಮೋದಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಹದಿನೈದು ರೂಪಾಯಿ ಪ್ರತೀ ಲೀಟರ್ ನಂತೆ ಸಿಗುತ್ತೆ ಎಂದವರು ಇವತ್ತು ತಮ್ಮ ಬೈಕು, ರಿಕ್ಷಾ ಮಾರಿ ಜೈ ಮೋದಿ, ಜೈ ಮೋದಿ ಎಂದು ಎರಡು ರೂಪಾಯಿಗಾಗಿ ಹತ್ತಾರು ವಾಲ್‍ಗಳಲ್ಲಿ ಕಕ್ಕ ಮಾಡಿ ಬಂದ ದುಡ್ಡಲ್ಲಿ ಸಂಜೆಯಾದೊಡನೆ ಪಿಂಟ್ ಹಾಗೂ ಬೀಫ್/ಪೋರ್ಕ್ ಚಿಲ್ಲಿ ಮೆಲ್ಲುತ್ತಿದ್ದಾರೆ” ಎಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇನ್ನು ಟ್ವಿಟರ್ ನಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, #petrolprice ಎಂದು ಟ್ರೆಂಡಿಂಗ್ ಆಗುತ್ತಿದೆ. ನೂರಾರು ಟ್ವಿಟರ್ ಬಳಕೆದಾರರು ಈ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಾಗ ಬಿಜೆಪಿಗರು ಪ್ರತಿಭಟನೆ ಮಾಡಿದ್ದ ಫೋಟೋಗಳನ್ನು ಈಗ ಹಂಚಿಕೊಳ್ಳಿತ್ತಿದ್ದು, ಅಂದು ವಾಗ್ದಾಳಿ ನಡೆಸಿದ್ದವರು ಇಂದು ಮೌನವಾಗಿರುವುದನ್ನು ಟೀಕಿಸಿ, ಟ್ರೋಲ್ ಮಾಡುತ್ತಿದ್ದಾರೆ.


ಇದನ್ನೂ ಓದಿ:  ಭಾರತಕ್ಕೆ ಸಂಕಷ್ಟಗಳ ಹಾದಿ; ಕೊರೊನಾ, ಪೆಟ್ರೋಲ್‌ ಬೆಲೆ, ಮಿಡತೆ ಹಾವಳಿ! ಬಸವಳಿದ ಭಾರತೀಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights