ಫ್ಯಾಕ್ಟ್‌ಚೆಕ್ : ಸೌದಿ ಅರೇಬಿಯಾ ಶಾಲೆಗಳಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂಬ ವರದಿ ಸುಳ್ಳು

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತವನ್ನು ಬೋಧಿಸಲು ಅಲ್ಲಿನ ಸರ್ಕಾರ ಶಾಲಾ ಪಠ್ಯಗಳಲ್ಲಿ ಅವಳವಡಿಸಿಸೆ ಎಂದು ಸಾಮಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇಸ್ಲಾಂ ಹುಟ್ಟಿದ ದೇಶದಲ್ಲಿ ರಾಮಾಯಣ ಮತ್ತು ಮಹಾಭಾರತಗಳನ್ನು ಶಾಲಾ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಭಾರತದಲ್ಲಿ ಇದು ಮಾಡಿದರೆ ಕೇಸರಿಕರಣ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇತ್ತೀಚಿಗೆ ಹಲವಾರು ಭಾರತೀಯ ಮಾಧ್ಯಮಗಳು ಈ ವಿಷಯವನ್ನು ವರದಿ ಮಾಡಿದ್ದವು. ಹಲವು ಪತ್ರಕರ್ತರೂ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿfದರು. ಸೌದಿ ನಿವಾಸಿ, ಅರಬ್ ಯೋಗ ಪೌಂಡೇಷನ್ ಸ್ಥಾಪಕಿ ಹಾಗೂ 2018ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ನೌಫ್ ಅಲ್ ಮಾರ್ವಾಯಿ ಅವರೂ ಈ ಬಗ್ಗೆ X ನಲ್ಲಿ ಪೋಸ್ಟ್‌ ಕಂಚಿಕೊಂಡಿದ್ದರು. ಸೌದಿ ಅರೇಬಿಯಾದ ನ್ಯೂ ವಿಝನ್ 2030 ಶಾಲಾ ಪಠ್ಯಕ್ರಮದಲ್ಲಿ ಹಿಂದು ಸಾಹಿತ್ಯದ ಸೇರ್ಪಡೆಗೆ ಪೂರಕವಾಗಿದೆ ಎಂದೂ ಮಾಧ್ಯಮ ವರದಿಗಳು ಉಲ್ಲೇಖಿಸಿದ್ದವು.

ಹಾಗಿದ್ದರೆ ಸೌದಿ ಅರೇಬಿಯಾ ಶಾಲೆಗಳ ಪಠ್ಯಗಳಲ್ಲಿ ನಿಜವಾಗಿಯೂ ರಾಮಾಯಣ ಮತ್ತು ಮಹಾಭಾರತ ಪಾಠಗಳನ್ನು ಅಳಡಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸೌದಿ ಅರೇಬಿಯದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತವನ್ನು ಬೋಧಿಸಲಾಗುವುದು ಎಂಬ ಮಾಧ್ಯಮಗಳ ವರದಿ ಸುಳ್ಳು ಎನ್ನುವುದನ್ನು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ತಂಡ ವರದಿಯನ್ನು ಪ್ರಕಟಿಸಿದೆ.

ಸೌದಿಯ ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಬೋಧಿಸಲಾಗುವುದು ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಇದು ಮೊದಲ ಸಲವೇನಲ್ಲ. 2021ರ ಎಪ್ರಿಲ್ನಲ್ಲಿಯೂ ಸುದ್ದಿವಾಹಿನಿಗಳು ಸೇರಿದಂತೆ ಹಲವಾರು ಮಾಧ್ಯಮಗಳು ಸೌದಿ ವಿಶನ್ 2030ರ ಭಾಗವಾಗಿ ಇವೆರಡು ಮಹಾಕಾವ್ಯಗಳನ್ನು ಬೋಧಿಸಲಾಗುವುದು ಎಂದು ವರದಿ ಮಾಡಿದ್ದವು.

“ಸೌದಿ ಅರೇಬಿಯಾದ ನ್ಯೂ ವಿಷನ್-2030 ಮತ್ತು ಪಠ್ಯಕ್ರಮವು ಸಹಿಷ್ಣತೆ, ಒಳ್ಳಗೊಳ್ಳುವಿಕೆ ಮತ್ತು ಉದಾರವಾದದಿಂದಾಗಿ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಸಾಮಾಜಿಕ ಅಧ್ಯಯನಗಳ ಪುಸ್ತಕದಲ್ಲಿ ನನ್ನ ಮಗನ ಶಾಲಾ ಪರೀಕ್ಷೆಯ ಸ್ಕ್ರೀನ್ಶಾಟ್. ಹಿಂದೂ ಧರ್ಮ, ಬೌದ್ಧ ಧರ್ಮ, ರಾಮಾಯಣ, ಕರ್ಮ, ಮಹಾಭಾರತ ಮತ್ತು ಧರ್ಮದ ಪರಿಕಲ್ಪನೆಗಳು ಮತ್ತು ಇತಿಹಾಸವನ್ನು ಒಳಗೊಂಡಿದೆ. ನಾನು ಅವನಿಗೆ ಅಧ್ಯಯನ ಮಾಡಲು ಸಹಾಯ ಮಾಡುವುದನ್ನು ಆನಂದಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಆಧರಿಸಿ ಹಲವಾರು ಮಾಧ್ಯಮಗಳು ಸೌದಿಯಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂದು ವರದಿ ಮಾಡಿವೆ.

ಸೌದಿ ವಿಷನ್ 2030 ರ ಅಧಿಕೃತ ವೆಬ್ಸೈಟ್ ನೋಡಿದಾಗ ಅದರಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆಲ್ಟ್ ನ್ಯೂಸ್ ಸೌದಿ ಅರೇಬಿಯಾ ಮೂಲದ ಹಿರಿಯ ಸಂಪಾದಕರೊಂದಿಗೆ ಮಾತನಾಡಿದೆ. ಅವರು “ರಾಮಾಯಣ ಅಥವಾ ಮಹಾಭಾರತವನ್ನು ಕಲಿಸಲಾಗುವುದು ಎಂದು ಸರ್ಕಾರದಿಂದ ಅಧಿಕೃತ ಹೇಳಿಕೆ ಎಂದಿಗೂ ಬಂದಿಲ್ಲ. ಸೌದಿ ಸಾರ್ವಜನಿಕ/ಸರ್ಕಾರಿ ಶಾಲೆಗಳಲ್ಲಿ ಬೋಧನಾ ಮಾಧ್ಯಮವು ಅರೇಬಿಕ್ ಆಗಿದೆ. ನೌಫ್ ಮರ್ವಾಯಿ ಅವರು ಹಂಚಿಕೊಂಡಿರುವ ಸಮಾಜ ವಿಜ್ಞಾನ ಪರೀಕ್ಷೆಯ ಪತ್ರಿಕೆಯ ಸ್ಕ್ರೀನ್ಶಾಟ್ಗಳು ಇಂಗ್ಲಿಷ್ನಲ್ಲಿವೆ. ಆದ್ದರಿಂದ, ಇದು ಹೆಚ್ಚಾಗಿ ಸರ್ಕಾರೇತರ ಶಾಲಾ ಪಠ್ಯಕ್ರಮವಾಗಿದೆ” ಎಂದಿದ್ದಾರೆ.

ಅರಬ್ ನ್ಯೂಸ್ ವರದಿಗಾರ ನೈಮತ್ ಖಾನ್ ರವರು ಆ ರೀತಿಯ ಯಾವುದೇ ನಿರ್ಣಯವನ್ನು ಸೌದಿ ಸರ್ಕಾರ ತೆಗೆದುಕೊಂಡಿಲ್ಲ ಎಂದು 2021ರಲ್ಲೆ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಧ್ಯಮಗಳು 2021ರಲ್ಲಿ ಮಾಡಿದ ಹಳೆಯ ಸುಳ್ಳು ವರದಿಗಳನ್ನು 2023ರಲ್ಲಿ ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಾ, ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವ್ಯಕ್ತಿಯೊಬ್ಬ ಬಾಲಕನಿಗೆ ಅಮಾನವೀಯವಾಗಿ ಥಳಿಸುತ್ತಿರುವ ಘಟನೆ ಎಲ್ಲಿಯದು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights