ಫ್ಯಾಕ್ಟ್‌ಚೆಕ್ : ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ಪ್ಲಾಸ್ಟಿಕ್ ಗೋಧಿ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು ಪ್ಲಾಸ್ಟಿಕ್ ಗೋಧಿಯನ್ನು ತಯಾರಿಸುತ್ತಿರುವ ಜಾಲ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಪ್ಲಾಸ್ಟಿಕ್ ಹಾಳೆಗಳನ್ನು ಗೋಧಿ ಧಾನ್ಯಗಳ ಆಕಾರದಲ್ಲಿ ಸಣ್ಣ ಪ್ಲಾಸ್ಟಿಕ್ ಉಂಡೆಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ಕಾಣಬಹುದು. ಹಾಗಿದ್ದರೆ ನಿಜವಾಗಿಯೂ ಪ್ಲಾಸ್ಟಿಕ್ ಗೋಧಿಯನ್ನು ತಯಾರಿಸುವ ಜಾಲ ಹುಟ್ಟಿಕೊಂಡಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ, ವಿಡಿಯೋದ ಕೆಳಭಾಗದ ಮಧ್ಯದಲ್ಲಿ “ಸ್ಮಾರ್ಟೆಸ್ಟ್ ವರ್ಕರ್ಸ್” ಎಂಬ ಪಠ್ಯದೊಂದಿಗೆ ವಾಟರ್‌ಮಾರ್ಕ್ ಅನ್ನು ನೋಡಬಹುದು. ಕೀವರ್ಡ್‌ಗಳನ್ನು ಬಳಸಿಕೊಂಡು ವಿಡಿಯೋದ ವಿವರಗಳನ್ನು ಸರ್ಚ್ ಮಾಡಿದಾಗ, 24 ಸೆಪ್ಟೆಂಬರ್ 2023 ರಂದು ಸ್ಮಾರ್ಟೆಸ್ಟ್ ವರ್ಕರ್ಸ್ ಹೆಸರಿನ YouTube ಚಾನಲ್‌ನಲ್ಲಿ ಪ್ರಕಟಿಸಲಾದ ಅದೇ ವಿಡಿಯೋ ಲಭ್ಯವಾಗಿದೆ. ಈ YouTube ಚಾನಲ್ ಉದ್ದೇಶ: ಪ್ಲಾಸ್ಟಿಕ್‌ನ ಮರುಬಳಕೆಯ ಪ್ರಯಾಣವನ್ನು ಅನಾವರಣಗೊಳಿಸುವುದು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪ್ರಕಟಿಸಿದೆ.

ಕೈಗಾರಿಕೆಗಳಲ್ಲಿ ಪ್ಲಾಸ್ಟಿಕ್ ಮರುಬಳಕೆ ಪ್ರಕ್ರಿಯೆಯನ್ನು ತೋರಿಸುವ ಅನೇಕ ರೀತಿಯ ವಿಡಿಯೋಗಳು ಲಭ್ಯವಾಗಿವೆ. ‘ಮ್ಯಾನುಫ್ಯಾಕ್ಚರಿಂಗ್ ಸ್ಕಿಲ್ಸ್’ ಹೆಸರಿನ ಯೂಟ್ಯೂಬ್ ಚಾನೆಲ್ ಒಂದು ಉದ್ಯಮದಲ್ಲಿ ಪ್ಲಾಸ್ಟಿಕ್ ಗ್ರ್ಯಾನ್ಯೂಲ್‌ಗಳ ತಯಾರಿಕೆಯ ದೃಶ್ಯಗಳನ್ನು ತೋರಿಸುವ ವೀಡಿಯೊವನ್ನು ಪ್ರಕಟಿಸಿದೆ. ಈ ಯೂಟ್ಯೂಬ್ ಚಾನೆಲ್, “ಆಟೋಮೊಬೈಲ್ ಉದ್ಯಮಗಳಿಗೆ ಮರುಬಳಕೆಯ ಪ್ಲಾಸ್ಟಿಕ್ ಕಣಗಳನ್ನು ಹೇಗೆ ತಯಾರಿಸಲಾಗುತ್ತದೆ” ಎಂಬ ವಿವರಣೆಯೊಂದಿಗೆ ವಿಡಿಯೋವನ್ನು ಪ್ರಕಟಿಸಿದೆ. ಈ ಎಲ್ಲಾ ಆಧಾರಗಳಿಂದ ಹೇಳುವುದಾದರೆ ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪ್ಲಾಸ್ಟಿಕ್ ಗೋಧಿ ಉತ್ಪಾದನೆಯನ್ನು ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ, ಕೈಗಾರಿಕೆಗಳಲ್ಲಿ ಪ್ಲಾಸ್ಟಿಕ್ ಮರುಬಳಕೆ ಪ್ರಕ್ರಿಯೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ಲಾಸ್ಟಿಕ್ ಗೋಧಿಯನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ವಿಡಿಯೋ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸೌದಿ ಅರೇಬಿಯಾ ಶಾಲೆಗಳಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂಬ ವರದಿ ಸುಳ್ಳು

