ಮಂಗಳೂರು ಗೋಲಿಬಾರ್ : ಪರಿಹಾರ ವಾಪಾಸ್- ಸಿಎಂ ವಿರುದ್ದ ಕೆಎಚ್ಎಂ ವಾಗ್ದಾಳಿ

ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು. ಪರಿಹಾರ ಹಣ ಕೊಡ್ತೀವಿ ಎಂದು ವಾಪಾಸ್ ತಗೊಳ್ಳೋದು ಕೆಟ್ಟಕೆಲಸ. ಇದಕ್ಕಿಂತ ಕೆಟ್ಟಕೆಲಸ ಮತ್ತೊಂದಿಲ್ಲ. ಯಡಿಯೂರಪ್ಪ ಅವ್ರು ಇಂತಹ ನಿರ್ಧಾರ ತಗೊಂಡಿದ್ದು ದೇಶದ ದುರಾದೃಷ್ಟ ಎಂದು ಕೋಲಾರದಲ್ಲಿ ಸಿಎಂ ಬಿಎಸ್ ವೈ ವಿರುದ್ದ ಕೆಎಚ್ ಮುನಿಯಪ್ಪ ವಾಗ್ದಾಳಿ ಮಾಡಿದ್ದಾರೆ.

ಯಾರೇ ಆಗಲಿ ಪ್ರಾಣವನ್ನ ಕಳೆದುಕೊಂಡಲ್ಲಿ ಪರಿಹಾರ ಕೊಡೂದು ಧರ್ಮ. ಇದು ಸರ್ಕಾರಕ್ಕೆ ಒಳ್ಳೆ ಹೆಸರು ತರೋ ಕೆಲಸವಲ್ಲ. ಬೇರೇ ಸರ್ಕರದವ್ರು ಪರಿಹಾರ ಕೊಡಿ ಎಂದು ಹೇಳ್ತಿದ್ದಾರೆ, ಇದು ನಮಗೆ ನಾಚಿಕೆಯಾಗ್ತಿದೆ. ಯಡಿಯೂರಪ್ಪ ಅವ್ರೆ ಮೊದಲು ಪರಿಹಾರ ಕೊಡಿ, ವಚನಭ್ರಷ್ಟರಾಗಬೇಡಿ. ಹೇಳಿದ ಹಾಗೆ ನಡ್ಕೊಳ್ಳಿ, ಕೆಎಚ್ ಮುನಿಯಪ್ಪ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಬಿಜೆಪಿ ರಾಷ್ಟ್ರವನ್ನ ಹೊಡೆದು ರಾಜ್ಯವನ್ನ ಮಾಡಲು ಹೊರಟಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನ ನೀಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ದೇಶವನ್ನ ಅಭಿವೃದ್ಧಿ ವಂಚಿತವಾಗಿ ಮಾಡಿದ್ದು ಪ್ರಧಾನಿ ಮೋದಿ ಅವರ ನಾಯಕತ್ವದ ಪರಿಣಾಮ ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಶಾಂತಿಯಿಲ್ಲ ಕೋಮುಗಲಭೆ, ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣ.

ಕೆಪಿಸಿಸಿ ಅಧ್ಯಕ್ಷ್ಯ ಸ್ಥಾನಕ್ಕೆ ಕೆಎಚ್ ಮುನಿಯಪ್ಪ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ನಾನು ಅಧ್ಯಕ್ಷ್ಯ ಸ್ತಾನ ಪಡೀತೀನೆಂದು ಎಲ್ಲು ಶಪಥ ಮಾಡಿಲ್ಲ. ಅಧ್ಯಕ್ಷ್ಷರ ಆಯ್ಕೆ ವಿಚಾರ ಪಕ್ಷದ ಹೈ ಕಮಾಂಡ್ ಗೆ ಬಿಟ್ಟದ್ದು. ನನ್ನನ್ನ ಅಧ್ಯಕ್ಷ್ಯರಾಗಿ ಮಾಡಿ ಎಂದು ಹಿರಿಯ ಸಂಸದರು ಮನವಿ ನೀಡಿದ್ದಾರೆ. ಯಾರೇ ಅಧ್ಯಕ್ಷ್ಯರಾದರು ಒಗ್ಗಟ್ಟಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸ್ತೀವಿ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights