ಮಂಗಳೂರು ಪೊಲೀಸರಿಂದ ಪ್ರತಿಭಟನೆ ವೇಳೆ ಕಲ್ಲು ತೂರಾಟದ ದೃಶ್ಯ ಬಿಡುಗಡೆ…!

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ಗೆ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಕಲ್ಲುತೂರಾಟ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

ಹೌದು.. ಮಂಗಳೂರಿನಲ್ಲಿ ಡಿ. 19ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟದಿಂದ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ವಿಚಾರಕ್ಕೆ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ನೀಡಿದರು. ಬಳಿಕ ಘಟನೆ ನಡೆದ ನೆಲ್ಲೆಕಾಯಿ ರಸ್ತೆಗೆ ಮತ್ತು ಠಾಣೆ ಬೇಟಿ ನೀಡಿ, ಅಲ್ಲಿ ಪ್ರತಿಭಟನಾಕಾರರು ಕಲ್ಲುತೂರಾಡಿದ ಯಾವುದೇ ಕುರುಹುಗಳಿಲ್ಲ. ಜೊತೆಗೆ ಠಾಣೆಗೂ ಯಾರು ದಾಳಿ ಮಾಡಿಲ್ಲ ಎನ್ನುವ ಹೇಳಿಕೆ ನೀಡಿದ್ದರು. ಜೊತೆಗೆ ಇದೊಂದು ವ್ಯವಸ್ಥಿತ ದಾಳಿ ಎನ್ನುವ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಸಮಗ್ರ ತನಿಖೆ ಆಗ್ಬೇಕು ಎಂದು ಆಗ್ರಹಿಸಿದ್ದರು.

ಈ ಹೇಳಿಕೆಗೆ ಪ್ರತಿಯಾಗಿ ಮಂಗಳೂರು ಪೊಲೀಸರು ಇಂದು ಘಟನೆ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದ್ದಾರೆ. ಈ ದೃಶ್ಯಗಳಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಹಾಗೂ ಕಲ್ಲು ತೂರಾಟ ನಡೆಸಲೆಂದೇ ವಾಹನದಲ್ಲಿ ಕಲ್ಲು ತಂದ ದೃಶ್ಯಗಳು ಕಂಡು ಬಂದಿವೆ. ಜೊತೆಗೆ ಪೊಲೀಸ್ ವಾಹನವನ್ನು ತಡೆ ಕಟ್ಟಿದ ದೃಶ್ಯ ಕೂಡ ಸೆರೆಯಾಗಿದ್ದು, ಪೊಲೀಸರು ಇಂತಹ ದೃಶ್ಯಗಳು ಸಾರ್ವಜನಿಕರ ಬಳಿ ಇದ್ದರೆ ಠಾಣೆಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

ಇದಲ್ಲದೇ ಕೆಲವು ಕಡೆ ನೆಲ್ಲಿಕಾಯಿ ರಸ್ತೆಯಲ್ಲಿ ನಡೆದ ಕಲ್ಲುತೂರಾಟದ ದೃಶ್ಯಗಳಲ್ಲಿ ಕೆಲವು ದುಷ್ಕರ್ಮಿಗಳು ಸಿಸಿಕ್ಯಾಮರಾ ದಿಕ್ಕನ್ನು ಬದಲಿಸುವುದು. ಹಾಗೂ ಸಿಸಿ ಕ್ಯಾಮರಾವನ್ನು ಒಡೆದು ಹಾಕುವ ದೃಶ್ಯಗಳನ್ನ ಪೊಲೀಸರು ಕಲೆ ಹಾಕಿ ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ಇಂತಹ ದೃಶ್ಯಗಳನ್ನು ಸಾರ್ವಜನಿಕರು ಕಳುಹಿಸಿ ಕೊಟ್ಟಿದ್ದಾರೆ. ಪ್ರತಿಭಟನಾಕಾರರು ಅಮಾಯಕರು ಕಲ್ಲು ತೂರಾಟ ನಡೆದೇ ಇಲ್ಲ ಎಂದು ಹೇಳಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ದೃಶ್ಯ ನೋಡಿ ಯಾವ ರೀತಿ ಪ್ರತಿಕ್ರಿಯೆ  ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights