ಮದುವೆಗೆ ಮನೆಯವರ ವಿರೋಧ ಹಿನ್ನೆಲೆ, ಪ್ರೇಮಿಗಳು ಆತ್ಮಹತ್ಯೆ…!
ಮದುವೆಗೆ ಮನೆಯವರ ವಿರೋಧ ಹಿನ್ನೆಲೆ, ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.
ನೂತನ್(25), ಅಪೂರ್ವ(22) ಮೃತ ದುರ್ದೈವಿ ಗಳು. ಮೊನ್ನೆ ಚಿಕ್ಕಮಗಳೂರಿನಲ್ಲಿ ವಿಷ ಕುಡಿದಿದ್ದ ಪ್ರೇಮಿಗಳು, ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದ ಯುವಕ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.