ಮುಂದಿನ ಸಿಎಂ ಸಿದ್ದು, ಹೊಸ ಆಸ್ಪತ್ರೆಗಳು: ವೈರಲ್‌ ಆಗುತ್ತಿವೆ ಬಾಳೆಹಣ್ಣಿನ ಮೇಲೆ ವಿಭಿನ್ನ ಪ್ರಾರ್ಥನೆಗಳು!

ರಥೋತ್ಸವದ ಸಂದರ್ಭದಲ್ಲಿ ಬಾಳೆಹಣ್ಣುಗಳ ಮೇಲೆ ತಮ್ಮ ಬೇಡಿಕೆಯನ್ನು ಬರೆದು ಪ್ರಾರ್ಥನೆ ಸಲ್ಲಿಸುವುದು ರಾಜ್ಯಾದ್ಯಂತ ಹೊಸ ವಿದ್ಯಾಮಾನವಾಗಿ ಮಾರ್ಪಟ್ಟಿದೆ. ಇದೀಗ ಅಂತಹ ಪ್ರಾರ್ಥನೆ ಸಲ್ಲಿಸುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಾಜ್ಯಾದ್ಯಂತ ಹಲವಾರು ದೇವಾಲಯಗಳಲ್ಲಿ ವಾರ್ಷಿಕ ರಥೋತ್ಸವಗಳು ನಡೆಯುತ್ತಿವೆ. ಈ ವೇಳೆ, ಬಾಳೆಹಣ್ಣುಗಳ ಮೇಲೆ ತಮಗೆ ಇಚ್ಚಿಸಿದ್ದನ್ನು ಬರೆದು ರಥಕ್ಕೆ ಎಸೆಯುವ ಪ್ರಾರ್ಥನೆಯು ಒಂದು ವರ್ಷದೊಳಗೆ ನಿಜವಾಗಲಿದೆ ಎಂದು ಭಕ್ತರು ನಂಬುತ್ತಾರೆ. ಪ್ರಾರ್ಥನೆಗಳಲ್ಲಿ ಸಾಮಾನ್ಯವಾಗಿ ಮಕ್ಕಳು, ಮದುವೆ, ಮನೆ ಇತ್ಯಾದಿಗಳನ್ನು ಕೇಳುವುದು ಸೇರಿದೆ.

ಆದರೆ, ಈಗ ಹೊಸ ಪ್ರವೃತ್ತಿಯು ವಿಭಿನ್ನ ರೀತಿಯ ಪ್ರಾರ್ಥನೆಗಳನ್ನು ತೋರಿಸುತ್ತಿದೆ.  ಹೊಸ ಪಟ್ಟಿಯಲ್ಲಿ ಉತ್ತರಾ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಚಲನಚಿತ್ರಗಳ ಯಶಸ್ಸನ್ನು ಬಯಸಲಾಗುತ್ತಿದೆ.

ತುಮಕುರು, ಬಳ್ಳಾರಿ ಅಥವಾ ಹುಬ್ಬಳ್ಳಿಯಲ್ಲಿ ರಥ ಎಳೆಯುವ ಹಬ್ಬಗಳ ಸಂದರ್ಭದಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ. ಬಾಳೆಹಣ್ಣುಗಳ ಜೊತೆಗೆ ಭಕ್ತರು ರಥದ ಮೇಲೆ ಆಯಾ ದೇವರುಗಳ ಹೆಸರನ್ನು ಜಪಿಸುತ್ತಿದ್ದಾರೆ.

“ದೇವರನ್ನು ಪ್ರಾರ್ಥಿಸುವುದು ಅಥವಾ ಬಾಳೆಹಣ್ಣುಗಳ ಮೇಲೆ ಬರೆಯುವುದು ಕೆಲವು ವರ್ಷಗಳ ಹಿಂದೆ ಪ್ರಾರಂಭವಾಯಿತು. ಸೋಶಿಯಲ್ ಮೀಡಿಯಾದೊಂದಿಗೆ ಈ ಪ್ರವೃತ್ತಿ ಗಮನ ಸೆಳೆಯುತ್ತಿದೆ. ಹೀಗಾಗಿ ಜನರು ಗಮನ ಸೆಳೆಯಲು ವಿಭಿನ್ನ ಪ್ರಾರ್ಥನೆಗಳನ್ನು ಬರೆಯುತ್ತಿದ್ದಾರೆ. ಈ ವೇಳೆ, ಕೆಲವೊಮ್ಮೆ ಹಾಸ್ಯದ ಸಾಲುಗಳು ಮತ್ತು ಪ್ರಾರ್ಥನೆಗಳು ಸಹ ಜನಸಾಮಾನ್ಯರ ಗಮನ ಸೆಳೆಯುತ್ತವೆ. ಈ ಮಧ್ಯೆ, ಉತ್ತರದ ಕನ್ನಡ ಜಿಲ್ಲೆಯ ಜನರಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ಇರುವುದರಿಂದಾಗಿ ಆಸ್ಪತ್ರೆಗಾಗಿನ ಬೇಡಿಕೆ ಗೋಕರ್ಣ ಜಾತ್ರೆಯಲ್ಲಿ ಗಮನ ಸೆಳೆದಿದೆ

“ನಾವು ಎಲ್ಲಾ ವಾರ್ಷಿಕ ಉತ್ಸವಗಳಲ್ಲಿ ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆಯುತ್ತಿರುತ್ತೇವೆ. ಆದರೆ. ಈ ಮೊದಲು ಅದರ ಮೇಲೆ ಯಾವುದೇ ಬರಹಗಳು ಇರುತ್ತಿರಲಿಲ್ಲ. ಈಗ ಈ ಪ್ರವೃತ್ತಿ ಗಮನ ಸೆಳೆಯುತ್ತಿದೆ. ಭಕ್ತರು ಸಹ ಸೆಲ್ಫಿ ತೆಗೆದುಕೊಂಡು ಬಾಳೆ ಹಣ್ಣನ್ನು ರಥಕ್ಕೆ ಎಸೆಯುವ ಮೊದಲು ವಿಡಿಯೋಗಳನ್ನು ಸೆರೆಹಿಡಿಯುತ್ತಾರೆ ಎಂದು ಬಳ್ಳಾರಿ ಅರ್ಚಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಜಾರಕಿಹೊಳಿ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಪರ ವಕೀಲ ಜಗದೀಶ್‌ ವಿರುದ್ಧವೇ ದೂರು ನೀಡಿದ ಎಸ್‌ಐಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights