ಮದುವೆ ಸಂಭ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಾ : ಸಾಂಸ್ಕೃತಿಕ ನಗರಿಯಲ್ಲಿ ಸಜ್ಜಾದ ವೇದಿಕೆ

ಬಿಗ್ ಬಾಸ್ ವಿನ್ನರ್ ಆದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಕ್ಯೂಟ್ ಡಾಲ್ ನಿವಚೇದಿತಾ ಗೌಡ ಅವರಿಗಿಂದು ಮದುವೆ ಸಂಭ್ರಮ.

ಇಂದು ನಾಳೆ ಚಂದನ್ ನಿವೇದಿತಾ ಮದುವೆ ನಡೆಯಲಿದ್ದು , ಚಂದನ್‌-ನಿವೇದಿತಾ ವೆಡ್ಡಿಂಗ್ ಗೆ ಸಾಂಸ್ಕೃತಿಕ ನಗರಿಯಲ್ಲಿ ವೇದಿಕೆ  ಸಜ್ಜಾಗಿದೆ. ಮೈಸೂರಿನ  ಹುಣಸೂರು ರಸ್ತೆಯ ಹಿನಕಲ್‌ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಬಿಗ್‌ಬಾಸ್‌ ಜೋಡಿಯ ಮದುವೆ ನಡೆಯುತ್ತಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ಪ್ರೇಮ ಪಕ್ಷಿಗಳ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಕುಟುಂಬಸ್ಥರು 3 ಸಾವಿರಕ್ಕೂ ಅಧಿಕ ಗಣ್ಯರ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ಶಾಸ್ತ್ರಗಳು ನಡೆಯಲಿದ್ದು, ಫೆಬ್ರವರಿ 25 ಸಂಜೆ 7 ಗಂಟೆಗೆ ಅರತಕ್ಷತೆ, ಫೆಬ್ರವರಿ 26 ಬೆಳಿಗ್ಗೆ 8.15 ರಿಂದ‌ 9 ಗಂಟೆಗೆ ಧಾರಾಮುಹೂರ್ತ ಇದೆ. ಮೀನ ಲಗ್ನದಲ್ಲಿ ಚಂದನ್‌ಶೆಟ್ಟಿ ನಿವೇದಿತಾಳನ್ನು ವರಿಸಲಿದ್ದಾರೆ.

ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್ ಹಾಗೂ ಚಂದನ್‌ಶೆಟ್ಟಿ ಪೋಷಕರಾದ ಪ್ರೇಮಲತಾ ಪರಮೇಶ್ ಸಮಾಕ್ಷಮದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಡಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights