ಮದ್ಯದ ಮೇಲೆ ಸಬ್ಸಿಡಿ :ಅಗ್ಗದ ಮದ್ಯ ಕುಡಿಸಲು ಮುಂದಾದ BSY ಸರಕಾರ
ಮದ್ಯಪಾನ ನಿಷೇಧದ ಬಗ್ಗೆ ಸ್ವಯಂ ಸೇವಾ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಹೋರಾಟ ನಡೆಸುತ್ತಿರುವ ಹೊತ್ತಿನಲ್ಲಿಯೇ ಜನರಿಗೆ ಅಗ್ಗದ ಮದ್ಯ ಕುಡಿಸಲು ರಾಜ್ಯ ಸರಕಾರವು ಚಿಂತನೆ ನಡೆಸಿದೆ.
ಬಡವರು ಕುಡಿಯುವ ಮದ್ಯವನ್ನು ಸಬ್ಸಿಡಿ ರೂಪದಲ್ಲಿ ಅಗ್ಗದ ಬೆಲೆಗೆ ಕೈಗೆಟುಕುವಂತೆ ಮಾಡುವ ಉದಾತ್ತ ಚಿಂತನೆ ಅಬಕಾರಿ ಸಚಿವ ನಾಗೇಶ್ ಅವರಲ್ಲಿ ಮೂಡಿದೆ. ಬಡವರು ಹೆಚ್ಚಾಗಿ ಬಳಸುವ ಮದ್ಯ ಚೀಪಾಗಿ ಲಭ್ಯವಾಗಲು ಸರಕಾರವೇ ಸಬ್ಸಿಡಿ ನೀಡುವ ಚಿಂತನೆ ಇದೆ ಎಂದಿದ್ದಾರೆ ಸಚಿವರು.
ದರ ಇಳಿಸಿದರೆ ಗುಣಮಟ್ಟ ಕಡಿಮೆಯಾಗಬಹುದು. ಅದರಿಮದ ಜನರ ಸ್ವಾಸ್ಥ್ಯ ಹಾಳಾಗುತ್ತದೆ. ಅದನ್ನೆ ತಡೆಯಲು ಮತ್ತು ಬಡವರಿಗೆ ಅಗ್ಗದ ದರದಲ್ಲಿ ಮದ್ಯ ಸಿಗುವಂತಾಗಲು ಸಬ್ಸಿಡಿಯೂ ಸೇರಿದಂತೆ ಏನೆಲ್ಲ ಮಾಡಬಹುದು ಎಂಬ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ನಾಗೇಶ್ ಹೇಳಿದ್ದಾರೆ.
ಇದೇ ವೇಳೆ ಮದ್ಯ ಮಾರಾಟವನ್ನು ಮಧ್ಯರಾತ್ರಿ ನಂತರವೂ ಮುಂದುವರಿಸುವ ಸಾಧ್ಯತೆಯೂ ಇದೆ. ಬೆಂಗಳುರಿನಲ್ಲಿ ರಾತ್ರಿ 2ರ ತನಕ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.