ಮದ್ವೆಗೂ ಬಂತೂ ಈರುಳ್ಳಿ ಬೆಳ್ಳುಳ್ಳಿ – ಇದು ಗಿಫ್ಟ್ ಅಲ್ಲಾ ವಧುವರ ಬದಲಿಸಿಕೊಂಡ ಹಾರ
ಮದುವೆ ಸಮಾರಂಭದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾರ ವಧುವರರು ಬದಲಿಸಿಕೊಳ್ಳುವ ಮೂಲಕ ಬೆಲೆ ಏರಿಕೆ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದರು.
ಹೌದು… ಮದುವೆ ಸಮಾರಂಭದಲ್ಲಿ ವಧು ಮತ್ತು ವರ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಿಶೇಷ ಹಾರವನ್ನು ಪರಸ್ಪರ ಬದಲಾಯಿಸಿಕೊಂಡಿದ್ದು ವಾರಣಾಸಿಯಲ್ಲಿ ನಡೆದ ಈ ಮದುವೆ ಇದೇ ಕಾರಣಕ್ಕಾಗಿ ವಿಶೇಷ ಗಮನ ಸೆಳೆದಿದೆ.
ಈರುಳ್ಳಿ ಬೆಲೆ ಏರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಈರುಳ್ಳಿಯದ್ದೇ ಟ್ರೆಂಡ್ ಶುರುವಾಗಿದೆ. ಈರುಳ್ಳಿ ಟಿಕ್ ಟ್ಯಾಕ್, ಈರುಳ್ಳಿ ಮೆಸೆಜ್, ಈರುಳ್ಳಿ ಡೈಲಾಗ್ ಹೀಗೆ ಹೇಳ್ತಾ ಹೋದ್ರೆ ಒಂದು ದಿನ ಸಾಕಾಗಲ್ಲಾ ಬಿಡಿ. ಯಾಕೆಂದ್ರೆ ಈರುಳ್ಳಿ ಮಾಡಿದ್ದು ಅಂತಿಂಥಾ ದಾಖಲೆಯಲ್ಲ. ಗ್ರಾಹಕರಿಗೆ ಚಿನ್ನ, ಬೆಳ್ಳಿ, ಆಭರಣ, ಹಣಕ್ಕಿಂತ ಈರುಳ್ಳಿನೇ ಸಾಕಷ್ಟು ದುಬಾರಿಯಾಗಿದೆ.
ಬೆಲೆ ಏರಿಕೆಯನ್ನು ಈ ನವ ದಂಪತಿ ವಿನೂತನ ರೀತಿಯಲ್ಲಿ ಖಂಡಿಸಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಏರಿಕೆ ಚಿನ್ನ-ಬೆಳ್ಳಿಯಷ್ಟೇ ದುಬಾರಿಯಾಗಿದೆ ಎಂಬುದನ್ನು ಈ ವಧು-ವರರು ಸಾಂಕೇತಿಕವಾಗಿ ತೋರಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡರು ಹೇಳಿದ್ದಾರೆ.