ಮಲೆನಾಡು ಭಾಗದಲ್ಲಿ ಭಾರಿ ಮಳೆ : ಬಿರುಗಾಳಿಗೆ ಧರೆಗುರುಳಿದ ಬೃಹತ್ ಗಾತ್ರದ ಮರ – ಹಸು ಸಾವು
ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ಯಾರ್ ಚಂಡಮಾರುತದ ಎಫೆಕ್ಟ್ ಗೆ ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ.
ಬಿರುಗಾಳಿಗೆ ಬೃಹತ್ ಗಾತ್ರದ ಮರ ಧರೆಗುರುಳಿದರಿಂದ ಮರದ ಅಡಿ ಸಿಲುಕಿ ಹಸು ಸಾವನ್ನಪ್ಪಿದ ಘಟನೆ ಕೊಪ್ಪ ತಾಲೂಕಿನ ಬಾಳೆ ಖಾನ್ ಎಸ್ಟೇಟ್ ಬಳಿ ನಡೆದಿದೆ.
ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ವಾಹನ ಸವಾರರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಹಲವು ಗ್ರಾಮಗಳಲ್ಲಿ ರಾತ್ರಿಯಿಂದಲೇ ವಿದ್ಯುತ್ ಸ್ಥಗಿತಗೊಂಡಿದೆ. ಬಿರುಗಾಳಿ ಸಹಿತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
2 ತಿಂಗಳ ಹಿಂದಿನ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆ, ಹೇಮಾವತಿ ನದಿಯ ಹರಿವು ಹೆಚ್ಚಳವಾಗಿದ್ದರಿಂದ ಈಗ ಸ್ಥಳಿಯರೇ ನಿರ್ಮಿಸಿದ್ದ ಕಾಲುಸಂಕ ಹೇಮಾವತಿ ಪಾಲಾಗಿದೆ. ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇನ್ನೂ ಮಳೆ-ಗಾಳಿ ಅಬ್ಬರಕ್ಕೆ ಮೂಡಿಗೆರೆ ತಾಲೂಕಿನಲ್ಲಿ ಕಂಬ ಬಿದ್ದಿದೆ. ಈ ವೇಳೆ ಶಿಕ್ಷಕಿ ತಾರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ-ಗಾಳಿ ಕಂಡು ಮಲೆನಾಡಿಗರಲ್ಲಿ ಆತಂಕ ಸೃಷ್ಟಿಯಾಗಿದೆ.