ಮೃತದೇಹವನ್ನು ತೆರೆದ ಟ್ರಕ್ನಲ್ಲಿ ಹಾಕಿ ಕಳುಹಿಸಿದ ಸರ್ಕಾರ!
ಉತ್ತರ ಪ್ರದೇಶ ಸರ್ಕಾರ ಟಾರ್ಪಾಲಿನ್ ಸುತ್ತಿದ ಮೃತ ದೇಹಗಳನ್ನು ಗಾಯಗೊಂಡ ವಲಸೆ ಕಾರ್ಮಿಕರ ಜೊತೆಗೆ ತೆರೆದ ಟ್ರಕ್ನಲ್ಲಿ ಹಾಕಿ ಕಳುಹಿಸಿದ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ ಲಖನೌದಿಂದ 200 ಕಿ.ಮೀ ದೂರದಲ್ಲಿರುವ ಔರಿಯಾದಲ್ಲಿ ಮೃತಪಟ್ಟ ವಲಸಿಗರ ಮೃತದೇಹಗಳನ್ನು ಹಾಗೂ ಗಾಯಗೊಂಡವರನ್ನು ಟ್ರಕ್ನಲ್ಲಿ ಹಾಕಿ ಸಾಗಿಸುತ್ತಿದ್ದ ದೃಶ್ಯಗಳು ವ್ಯಾಪಕವಾಗಿ ಪ್ರಸಾರವಾಗಿವೆ.
ಘಟನೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಅವರು ಇದನ್ನು “ಅಮಾನವೀಯ” ಕೃತ್ಯವೆಂದು ಕರೆದು, ಇಲ್ಲಿ ಜೀವಂತ ಮತ್ತು ಸತ್ತವರ ಘನತೆಯನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
“ನಮ್ಮ ವಲಸೆ ಕಾರ್ಮಿಕರನ್ನು ಈ ರೀತಿ ಅಮಾನವೀಯವಾಗಿ ನಡೆಸುವುದನ್ನು ಬಹುಶಃ ತಪ್ಪಿಸಬಹುದು. ಜಾರ್ಖಂಡ್ ಗಡಿಯವರೆಗೆ ಮೃತ ದೇಹಗಳನ್ನು ಸೂಕ್ತವಾಗಿ ಸಾಗಿಸಲು ವ್ಯವಸ್ಥೆ ಮಾಡುವಂತೆ ನಿತೀಶ್ ಕುಮಾರ್ ಮತ್ತು ಉತ್ತರ ಪ್ರದೇಶದ ಸರ್ಕಾರ ಮತ್ತು ಕಚೇರಿಯನ್ನು ನಾನು ವಿನಂತಿಸುತ್ತೇನೆ. ಬೊಕಾರೊದಲ್ಲಿನ ಅವರ ಮನೆಗಳಿಗೆ ನಾವು ಸಾಕಷ್ಟು ಗೌರವಾನ್ವಿತ ವ್ಯವಸ್ಥೆಗಳನ್ನು ಖಚಿತಪಡಿಸುತ್ತೇವೆ” ಎಂದು ಸೊರೆನ್ ಟ್ವೀಟ್ ಮಾಡಿದ್ದಾರೆ.
ಔರಿಯಾದಲ್ಲಿ ಶನಿವಾರ ಮುಂಜಾನೆ 3.30 ರ ಸುಮಾರಿಗೆ ನಡೆದ ಟ್ರಕ್ ಅಫಘಾತದಲ್ಲಿ 26 ಟ್ರಕ್ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡು ಟ್ರಕ್ಗಳಲ್ಲಿ, ಒಂದು ಪಂಜಾಬ್ನಿಂದ ಮತ್ತು ಇನ್ನೊಂದು ರಾಜಸ್ಥಾನದಿಂದ ಬಂದಿದ್ದು, ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದಿದೆ.
ಮೃತಪಟ್ಟವರಲ್ಲಿ 11 ಮಂದಿ ಜಾರ್ಖಂಡ್ ಮೂಲದವರಾಗಿದ್ದು ಒಬ್ಬರು ಪಲಮು ಮತ್ತು ಉಳಿದವರು ಬೊಕಾರೊ ಮತ್ತು ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.
ಅಫಘಾತದ ಒಂದು ದಿನದ ನಂತರ, ಅಧಿಕಾರಿಗಳು ಶವಗಳನ್ನು ಮತ್ತು ಬದುಕುಳಿದವರನ್ನು ಮೂರು ಟ್ರಕ್ಗಳಲ್ಲಿ ಜಾರ್ಖಂಡ್ನ ಬೊಕಾರೊ ಮತ್ತು ಪಶ್ಚಿಮ ಬಂಗಾಳದ ಪುರುಲಿಯಾಕ್ಕೆ ವಾಪಸ್ ಕಳುಹಿಸಿದ್ದರು.
ನಂತರ ಸೊರೆನ್ ಅವರು ಆಕ್ರೋಶ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ ನಂತರ ಪ್ರಯಾಗರಾಜ್ ಬಳಿಯ ಹೆದ್ದಾರಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಶವಗಳನ್ನು ಆಂಬುಲೆನ್ಸ್ಗೆ ತುಂಬಿಸಲಾಗಿದೆ.
UP sends dead bodies with migrants in open trucks, Jharkhand furious https://t.co/L3mT63wHnW pic.twitter.com/bso7HCZShF
— NDTV (@ndtv) May 19, 2020
ಪ್ರಯಾಣದ ಸಮಯದಲ್ಲಿ ದೇಹಗಳು ಕೊಳೆಯಲು ಪ್ರಾರಮಭಿಸಿವೆಎಂದು ಹಿರಿಯ ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ಗೆ ಆದ ಫೋಟೋಗಳ ಬಗ್ಗರ ತನಿಖೆ ನಡೆಸಲಾಗುವುದು ಎಂದು ಔರಿಯ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ಔರಿಯಾದಲ್ಲಿ ವಲಸೆ ಕಾರ್ಮಿಕರ ಸಾವು ಉತ್ತರಪ್ರದೇಶದಲ್ಲಿ ಪ್ರತಿಪಕ್ಷ ಮತ್ತು ಬಿಜೆಪಿ ಸರ್ಕಾರದ ನಡುವೆ ರಾಜಕೀಯ ಯುದ್ಧಕ್ಕೆ ನಾಂದಿ ಹಾಡಿದೆ.
ಕಾಂಗ್ರೆಸ್ ಆಡಳಿತದಲ್ಲಿರುವ ಎರಡು ರಾಜ್ಯಗಳಿಂದ ಲಾರಿಗಳು ಅಕ್ರಮವಾಗಿ ಓಡುತ್ತಿವೆ ಎಂದು ಸೂಚಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತಕ್ಕೆ ಕಾಂಗ್ರೆಸ್ ಪಕ್ಷವನ್ನು ದೂಷಿಸಿದ್ದಾರೆ.