ಮೃತದೇಹ ಪತ್ತೆಗೆ ಕ್ರಮಕೈಗೊಳ್ಳದ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು….!

ನಿನ್ನೆ ಯಗಚಿ ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತಪಟ್ಟ ಪ್ರಕರಣ ಹಿನ್ನೆಲೆ, ಮೃತದೇಹ ಪತ್ತೆಗೆ ಯಾವುದೇ ಕ್ರಮಕೈಗೊಳ್ಳದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್,ಕೆ,ಕುಮಾರಸ್ವಾಮಿಯನ್ನ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

ಹೆಚ್,ಕೆ,ಕುಮಾರಸ್ವಾಮಿ ಸ್ಥಳೀಯ ಶಾಸಕರು. ಇಂದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ, ಗ್ರಾಮಸ್ಥರು ಹೆಚ್,ಕೆ,ಕುಮಾರಸ್ವಾಮಿಯ ಮೇಲೆ ಹಲ್ಲೆಗೆ ಯತ್ನಿಸಲು ಮುಂದಾದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಹುಣಸೇನಹಳ್ಳಿಯಲ್ಲಿ ನಡೆದಿದೆ.

ಓಟು ಕೇಳೋಕೆ ಬರ್ತೀರಾ ನಿನ್ನೆ ಮೂವರು ಯುವಕರು ನೀರಿನಲ್ಲಿ ಮುಳುಗಿದ್ರು‌ ಸ್ಥಳಕ್ಕೆ ಆಗಮಿಸಿಲ್ಲಾ , ನಿನ್ನೆಯಿಂದಲೂ ಮೃತದೇಹ ಹುಡುಕಾಟ ನಡೆಸಿಲ್ಲಾ, ಜಿಲ್ಲಾಡಳಿತ ಯಾವ ಕ್ರಮಕೈಗೊಂಡಿಲ್ಲಾ ಎಂದು ಆಕ್ರೋಶಗೊಂಡಿದ್ದಾರೆ.

ಮಹಿಳೆಯರು ಮತ್ತು ಮಕ್ಕಳಿಂದಲೂ ಶಾಸಕ ಕುಮಾರಸ್ವಾಮಿಗೆ ತರಾಟೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಘೆರಾವ್ ಹಾಕಿ ಸ್ಥಳೀಯರು ಪ್ರತಿಭಟಿಸಿದ್ದಾರೆ. ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಮೃತದೇಹ ಪತ್ತೆಗೆ ಕ್ರಮಕೈಗೊಳ್ಳದ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು….!

  • October 3, 2020 at 11:13 pm
    Permalink

    Hi there mates, how is the whole thing, and what you desire to say about this article, in my
    view its in fact amazing for me.

    Reply

Leave a Reply

Your email address will not be published.

Verified by MonsterInsights