ಮೇ.24ರಂದು ರಾಜ್ಯದಲ್ಲಿ ಕರ್ಫ್ಯೂ – ರಂಜಾನ್ ಆಚರಣೆಗೆ ಆಗುತ್ತಾ ತೊಂದರೆ..?
ಕೆಲವು ನಿಯಮಗಳ ಪರತ್ತುಬದ್ಧ ಸಡಿಲಿಕೆಯೊಂದಿಗೆ ಕೊರೊನಾ ವೈರಸ್ ಹರಡದಂತೆ ತಡೆಯಲು ರಾಜ್ಯದಲ್ಲಿ ಮೇ 31 ರವೆರೆಗೂ ಲಾಕ್ ಡೌನ್ 4.0 ಜಾರಿಯಲ್ಲಿದೆ. ಆದರೆ, ಭಾನುವಾರ ಮಾತ್ರ ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿ ಇರಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇದರಿಂದ ರಂಜಾನ್ ಆಚರಣೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಹೌದು… ಇದೇ ಭಾನುವಾರ ಅಥವಾ ಸೋಮವಾರ ಆಚರಿಸಲ್ಪಡುವ ರಂಜಾನ್ ಗೆ ನಾಳೆ ವಿಧಿಸಲಾಗಿರುವ ಕರ್ಪ್ಯೂ ಅಡಚಣೆ ಉಂಟುಮಾಡುವ ಸಾಧ್ಯತೆ ಇದೆ. ಯಾಕೆಂದರೆ ಇಂದು ಸಂಜೆಯಿಂದಲೇ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಹಿನ್ನೆಲೆಯಲ್ಲಿ ನಾಳೆ ಆಚರಿಸಲ್ಪಡುವ ರಂಜಾನ್ ಹಬ್ಬಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೆಲವು ಸಡಿಲಿಕೆಯೊಂದಿಗೆ 4.0 ಜಾರಿಯದ್ದು ರಂಜಾನ್ ಆಚರಣೆಗೆ ಕೊಂಚ ಕಳೆ ಬರುವ ಸಾಧ್ಯತೆ ಇತ್ತು. ಈಗಾಗಲೇ ಆರ್ಥಿಕ ಕಷ್ಟದಲ್ಲಿರುವ ಮುಸ್ಲಿಂ ಬಾಂಧವರು ತಕ್ಕಮಟ್ಟಿಗೆ ಹಬ್ಬ ಆಚರಿಸುವ ಆಸೆ ಸದ್ಯ ಕರ್ಫ್ಯೂ ನಿಂದಾಗಿ ಹುಸಿಯಾಗಿದೆ. ಗುಂಪು ಸೇರುವ ಅವಕಾಶ ಇಲ್ಲದೇ ಇರುವುದರಿಂದ ಮುಸ್ಲೀಂ ಬಾಂಧವರು ಒಂದೆಡೆ ಸೇರುವುದು, ಪಾರ್ಥನೆ ಮಾಡುವುದಕ್ಕೂ ಕಡಿವಾಣ ಬೀಳಲಿದೆ. ಹೀಗಾಗಿ ರಂಜಾನ್ ಆಚರಣೆ ವೇಳೆ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದು ಕೊಂಚ ನಿರಾಶೆಯನ್ನುಂಟು ಮಾಡಿದೆ.
ಇದೇ ಭಾನುವಾರ (24) ಅಂದರೆ ಇಂದು ಸಂಜೆ 7 ಗಂಟೆಯಿಂದ ಸೋಮವಾರ (26) ಬೆಳಗ್ಗೆ 7 ಗಂಟೆಯವರೆಗೂ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ. ಹಾಗಾದ್ರೆ ರಾಜ್ಯದಲ್ಲಿ ಏನೆಲ್ಲಾ ಇರಲಿದೆ…? ಏನಿಲ್ಲಾ..? ಇಲ್ಲಿದೆ ಮಾಹಿತಿ ಸುಖಾ ಸುಮ್ಮನೆ ಜನರು ಮನೆಬಿಟ್ಟು ರಸ್ತೆಗಿಳಿಯುವಂತಿಲ್ಲ. ಒಂದುವೇಳೆ ತುರ್ತು ಆರೋಗ್ಯ ಸಮಸ್ಯೆಗಳಿದ್ದರೆ ಆಸ್ಪತ್ರೆಗೆ ಓಡಾಡಬಹುದು. ಆಬ್ಯುಲೆನ್ಸ್ ಕೂಡ ಇರಲಿದೆ. ಮೆಡಿಸಿನ್ ಖರೀದಿ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿದೆ. ಜೊತೆಗೆ ತರಕಾರಿ, ಹಣ್ಣು, ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್, ಫಾರ್ಮಸಿ, ಆಸ್ಪತ್ರೆ, ನರ್ಸಿಂಗ್ ಹೋಮ್, ವೆಟರ್ನರಿ ಕ್ಲಿನಿಕ್ ಓಪನ್ ಇರಲಿವೆ.
ಭಾನುವಾರ ಕರ್ಫ್ಯೂ ಜಾರಿ ಇರುವುದರಿಂದ ಸಾರಿಗೆ ಬಸ್ (ಬಿಎಂಟಿಸಿ-ಕೆಎಸ್ ಆರ್ ಟಿಸಿ), ಆಟೋ, ಕ್ಯಾಬ್, ಖಾಸಗಿ ವಾಹನಗಳು ರಸ್ತೆಗಿಳಿಯುವುದಿಲ್ಲ.ಎಲ್ಲಾ ಫ್ಯಾಕ್ಟರಿಗಳು, ಕಂಪನಿಗಳು , ಚಿನ್ನ-ಬೆಳ್ಳಿ ಅಂಗಡಿಗಳು, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ ಕ್ಲೋಸ್ ಆಗಲಿವೆ. ಈ ಹಿಂದೆ ನಿಗಧಿಯಾಗಿದ್ದ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ನಿಯಮ ಮೀರಿ ಸುಖಾ ಸುಮ್ಮನೆ ರಸ್ತೆಗಿಳಿದ್ರೆ ಪೊಲೀಸರು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿದ್ದು, ಈಗಾಗಲೇ ನಾಳೆ ಕರ್ಫ್ಯೂ ಜಾರಿ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.