ಮೈಸೂರಿನಲ್ಲಿ ಹಾರುವ ಹಾವು ಪತ್ತೆ! ಏನಿದರ ವಿಶೇಷ?

ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಮನೆಯೊಂದರ ಬಳಿ ಹಾರುವ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ.

ಎರಡು ದಿನಗಳ ಹಿಂದೆ ರಾಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಎಂಬುವರ ಮನೆ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಹಾರಿ ನೆಲಕ್ಕೆ ಬಿದ್ದು ಮತ್ತೆ ನೆಲದಿಂದ ಹಾರಿ ಮನೆಯ ಬಾಗಿಲಿಗೆ ಹಾವು ಜೋತು ಹಾಕಿಕೊಂಡಿದೆ. ಹಾರುವ ಹಾವನ್ನು ಕಂಡು‌ ಮನೆ ಮಂದಿ ಚಕಿತರಾಗಿದ್ದರು. ಬಳಿಕ ಹಾವು ಮನೆಯ ಪಕ್ಕದಲ್ಲಿ ಗಿಡಗಳ ಬಳಿಗೆ ಹೋಗಿದೆ.

ಕುಟುಂಬದವರು ಈ ಹಾವು ನೋಡಿ ‘ಸ್ನೇಕ್‌’ ಶಿವು ಎಂಬುವವರಿಗೆ ಮಾಹಿತಿ ನೀಡಿದ್ದಾರೆ. ಅವರು ಬರುವಷ್ಟರಲ್ಲಿ ಈ ಹಾವು ಮರೆಯಾಗಿತ್ತು

ಸಹಜವಾಗಿ ಪಶ್ವಿಮಘಟ್ಟದ ಕಾಡಿನಲ್ಲಿ ಆರ್ನೇಟ್‌ ಪ್ರಭೇದದ ಹಾರುವ ಹಾವುಗಳು ಜೀವಿಸುತ್ತವೆ. ಎತ್ತರದ ಮರಗಳಿಂದ ಚಿಕ್ಕಮರಗಳಿಗೆ ಈ ಹಾವುಗಳು ಹಾರುತ್ತವೆ.  ಗಾಳಿಯಲ್ಲಿ ಈಜುವಂತೆ ಕಾಣುತ್ತದೆ. ಇದಕ್ಕೇನೂ ರೆಕ್ಕೆ ಇರುವುದಿಲ್ಲ. ವಿಷಪೂರಿತವಲ್ಲದ ಹಾರುವ ಹಾವು ಅಪರೂಪದ ಪ್ರಭೇದಕ್ಕೆ ಸೇರಿದೆ. ಕಾಡಿನ ಹಾದಿಯಲ್ಲಿ ಸಾಗುವ ಸರಕು ವಾಹನಗಳಲ್ಲಿ ಸಿಲುಕಿಕೊಂಡು ನಗರಕ್ಕೆ ಬಂದಿರಬಹುದು’ ಎಂದು ‘ಸ್ನೇಕ್‌’ ಶಿವು ತಿಳಿಸಿದರು.

ಈ ಹಿಂದೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ ಒಮ್ಮೆ ಹಾರುವ ಹಾವು ಕಾಣಿಸಿಕೊಂಡಿತ್ತು. ಇದೀಗ ನಗರದ ಹೃದಯ ಭಾಗದ ಮನೆಯೊಂದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 4,313 ಕೋಟಿ ರೂ ಜಿಎಸ್‌ಟಿ ಪರಿಹಾರ ಬಿಡುಗಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights