“ಮೋದಿ ಹೇಳಿದಂತೆ ಜನ ಮೇಣದಬತ್ತಿ ತರಲು ಹೊರಹೋದರೆ ಗೂಸಾ ಬೀಳುತ್ತೆ” ಹೆಚ್ ಡಿ ರೇವಣ್ಣ

ಕೊರೊನಾ ಹರಡುವ ಭಿತಿಯಿಂದ ಜನ ಹೊರಬರಲು ಹೆದರುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅವರಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಿರ್ಗತಿಕರಿಗೆ ಸಹಾಯವಾಗುವಂತಹ ವಿಷಯಗಳು ಮಾತನಾಡು ತುಂಬಾ ಇದೆ. ಹೀಗಿರುವಾಗ ಪ್ರಧಾನಿ ಮೋದಿಯವರು ಮೇಣದ ಬತ್ತಿ ಹಚ್ಚಲು ಹೇಳುತ್ತಿದ್ದಾರೆ.

ಲಾಕ್ ಡೌನ್ ಮಾಡಿ ಮನೆಯಿಂದ ಹೊರಬಾರದಂತೆ ಕ್ರಮಗಳನ್ನು ತೆಗೆದುಕೊಳ್ಳುವವರು ಇವರೇ, ಮೇಣದಬತ್ತಿ ಹಚ್ಚಿ ಅಂತ ಹೇಳುವವರು ಇವರೇ. ಮೇಣದಬತ್ತಿ ತರಲು ಜನ ಆಚೆ ಬಂದರೆ ಗೂಸಾ ಬೀಳುತ್ತೆ ಅಂತ ಮೋದಿ ಮಾತಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಲೇವಾಡಿ ಮಾಡಿದ್ದಾರೆ.

ರಾಜ್ಯದಲ್ಲಿ ಜನರಿಗೆ ತಿನ್ನಲು ಅನ್ನ ಸಿಗುತ್ತಿಲ್ಲ. ಆದರೆ ಹಾಸನದಲ್ಲಿ ಎಣ್ಣೆ ಮಾರಾಟ ಜೋರಾಗಿದೆ.ಲ; ಲಾರಿಗಟ್ಟಲೇ ಎಣ್ಣೆಯನ್ನು ಬೇರೆ ಕಡೆಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯಸರ್ಕಾರಕ್ಕೆ ಬಡವರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ.ಯಾವುದೇ ಸೌಲಭ್ಯ ತಲುಪಿಸಿಲ್ಲ.

ಮೋದಿ ಮನೆಯಲ್ಲಿ ಯೋಗ ಮಾಡಿ ಅಂತಾರೆ ಆದರೆ ರೈತರು ಯಾವ ಯೋಗ ಮಾಡುತ್ತಾರೆ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ. ಏಪ್ರಿಲ್ 5 ಕ್ಕೆ ಮೇಣದ ಬತ್ತಿ ಹಚ್ಚಿ ಎಂದು ಮೋದಿ ಹೇಳುತ್ತಾರೆ ಆದರೆ ಒಂದು ಮೇಣದ ಬತ್ತಿ ಬೆಲೆ 10 ರೂಪಾಯಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಶೇ30 ರಷ್ಟು ಜನ ಊಟವಿಲ್ಲದೇ ಸಾಯುತ್ತಿದ್ದಾರೆ. ಮೇಣದ ಬತ್ತಿಗೆ 10 ರೂಪಾಯಿ ಎಲ್ಲಿಂದ ತರುತ್ತಾರೆಂದು ವ್ಯಂಗ್ಯವಾಡಿದ್ದಾರೆ.

ಹಳ್ಳಿಗಳಲ್ಲಿ ರಾತ್ರಿ ಹೊತ್ತು ಹೆಂಗಸರ ಸೀರೆ ಕತ್ತರಿಸಿ ಮಾಸ್ಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹಾಸನದಲ್ಲಿ ಅನ್ನ ಸಿಗುತ್ತಿಲ್ಲಾ. ಆದರೆ ಎಣ್ಣೆ ವ್ಯಾಪಾರ ಜೋರಾಗಿದೆ. ಲಾರಿಗಟ್ಟಲೇ ಎಣ್ಣೆಯನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಒಂದಕ್ಕೆ ಎರಡು ಪಟ್ಟು ಹೆಚ್ಚು ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಡಿಸಿ ಕೇಳಿದರೆ ಎಣ್ಣೆ ಅಂಗಡಿ ತೆರೆದಿರೋದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಅಂತಾರೆ. ಜಿಲ್ಲಾಧಿಕಾರಿ ಅಕೌಂಟ್​ನಲ್ಲಿ 2 ಕೋಟಿ ಹಣ ಇದೆಯಂತೆ. ಆದರೆ ಈಗ ಹಣ ಖರ್ಚು ಮಾಡೋಕೆ ಸರ್ಕಾರದಿಂದ ಗೈಡ್ ಲೈನ್ಸ್ ಕೊಟ್ಟಿಲ್ವಂತೆ. ನಮ್ಮ ಸರ್ಕಾರಕ್ಕೆ ಬರ ಬಂದಿದೆ ಅಂತಾ ಯಡಿಯೂರಪ್ಪ ಅವರು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights