ಯಾವುದು ಸತ್ಯ..? ಯಾವುದು ಸುಳ್ಳು…? : ಕೊರೊನಾ ಅಸಲಿಯತ್ತು!
ಕಿಲ್ಲರ್ ಕೊರೊನಾಗೆ ಜಗತ್ತು ನಲುಗಿ ಹೋಗಿದೆ. ವಿಶ್ವಾದ್ಯಾಂತ ಕೊರೊನಾ ತನ್ನ ಕಂಬದ ಬಾಹುಗಳನ್ನು ಚಾಚುತ್ತಿದೆ. ಮನುಷ್ಯರ ಪ್ರಾಣವನ್ನ ರಕ್ಕಸನಂತೆ ಬಲಿಪಡೆಯುತ್ತಿದೆ. ಹೀಗಾಗಿ ಜನ ಆತಂಕಕ್ಕೆ ಒಳಗಾಗಿದ್ದು ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಕಿಡಿಗೇಡಿಗಳು ಕೊರೊನಾ ಬಗ್ಗೆ ತಪ್ಪು ಮಾಹಿತಿಗಳನ್ನು ಹರಿಬಿಡುತ್ತಿದ್ದಾರೆ. ಹಾಗಾದ್ರೆ ಕೊರೊನಾ ಬಗ್ಗೆ ಹರಡುತ್ತಿರುವ ಈ ವಂದತಿಗಳಲ್ಲಿ ಯಾವುದು ಸತ್ಯ ? ಯಾವುದು ಸುಳ್ಳು..? ಕೊರೊನಾ ಅಸಲಿಯತ್ತು ಏನು ಎನ್ನುವ ಬಗ್ಗೆ ತಿಳಿಯೋಣ.

ಚೀನಾದಲ್ಲಿ ಕಾಣಿಸಿಕೊಂಡು ಕೊರೊನಾ ಬೇರೇ ಬೇರೇ ಪ್ರದೇಶ ದೇಶಗಳನ್ನು ಹರಡದುತ್ತಿದೆ. ವಿಶ್ವಾದ್ಯಂತ ಕೊರೊನಾ ದಿಂದ ಸಾವಿಗೀಡಾದವರ ಸಂಖ್ಯೆ 10 ಸಾವಿರಕ್ಕೂ ದಾಟಿದೆ. ಹೀಗಾಗಿ ಎಲ್ಲರಲ್ಲೂ ಭಯದ ವಾತಾವರಣವನ್ನೇ ಸೃಷ್ಠಿಮಾಡಿಬಿಟ್ಟಿದೆ. ಈ ಸಮಯವನ್ನೇ ಬಳಸಿಕೊಳ್ಳುವ ಕೆಲ ಮಂದಿ ಕೊರೊನಾ ಬಗ್ಗೆ ಕೆಲ ವದಂತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುತ್ತಿದ್ದಾರೆ. ವದಂತಿಗಳು ಎಲ್ಲೆಡೆ ಹರಡಿ ಜನತೆ ಗೊಂದಲದಲ್ಲಿ ಸಿಲುಕಿದ್ದಾರೆ. ಬೇಕಾಬಿಟ್ಟಿ ಮಾಹಿತಿಗಳನ್ನು ನಂಬುವ ಮುನ್ನ ಯಾವುದು ಸತ್ಯಾ? ಯಾವುದು ಸುಳ್ಳು? ನೀವು ತಿಳಿದುಕೊಳ್ಳಲೇಬೇಕು.

ಚೈನೀಸ್ ಆಹಾರ ಸೇವಿಸಿದ್ರೆ ಕೊರೊನಾ ವಕ್ಕರಿಸುತ್ತಾ…?
ಚೀನಾದಿಂದ ತಯಾರಾಗಿ ಬಂದ ಎಲೆಕ್ಟ್ರಾನಿಕ್ ಐಟಮ್ಸ್ ಗಳು ನಮ್ಮಲ್ಲಿ ಅಧಿಕ ಮಾರಟವಾಗುತ್ತವೆ. ಪ್ರತಿಷ್ಠೆಗಾಗಿ ಏನೋ ಗೊತ್ತಿಲ್ಲ ಜನ ಕೂಡ ಇಂತಹ ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡ್ತಾರೆ. ಹೀಗಾಗಿ ಇಲ್ಲಿ ಚೈನೀಸ್ ಆಹಾರ ಕೂಡ ಫೇಮಸ್. ಚೀನಾದಲ್ಲಿ ಜನ ಸೇವಿಸುವ ಆಹಾರ ನಮ್ಮಲ್ಲಿ ತಯಾರಿಸಲಾಗುತ್ತದೆ. ಅದೆನ್ನೇ ಜನ ಪ್ರತಿಷ್ಠೆ ಎಂಬಂತೆ ಸೇವಿಸುತ್ತಾರೆ. ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಆಹಾರದ ಮೂಲಕ ನಮ್ಮ ದೇಶಕ್ಕೂ ಕಾಲಿಡುತ್ತೆ ಎನ್ನುವ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಹರಿಬಿಡುತ್ತಿದ್ದಾರೆ. ಹೀಗಾಗಿ ಚೈನೀಸ್ ಆಹಾರ ಸೇವಸಿದ್ರೆ ಕೊರೊನಾ ದೇಹ ಸೇರುತ್ತೆ ಅನ್ನೋ ವದಂತಿಗಳು ಹರಿದಾಡುತ್ತಿವೆ. ಹಾಗಾದ್ರೆ ಚೈನೀಸ್ ಫುಡ್ ಗೂ ಕೊರೊನಾಗೂ ಸಂಬಂಧ ಇದಿಯಾ..?

ಚೈನೀಸ್ ಆಹಾರ ಸೇವನೆಯಿಂದ ಕೊರೊನಾ ಸೋಂಕು ತಗಲುತ್ತದೆ ಎನ್ನುವುದು ಸುಳ್ಳು. ಯಾಕೆಂದ್ರೆ ಇದು ಇಂಡಿಯಾದಲ್ಲೇ ತಯಾರಾಗುತ್ತದೆ. ತಯಾರಿಸುವಾತ ಚೀನಾದಿಂದ ಬಂದವನಾಗಿದ್ದರೆ, ಆ ಮೂಲಕ ಸೋಂಕು ಹರಡಬಹುದೇ ವಿನ: ಚೈನೀಸ್ ಫುಡ್ ನಿಂದ ಕೊರೊನಾ ಹರಡುತ್ತದೆ ಎನ್ನುವುದು ದೃಢಪಟ್ಟಿಲ್ಲ. ಹೀಗಾಗಿ ಚೈನೀಸ್ ಫುಡ್ ಗೂ ಕೊರೊನಾಗೂ ಸಂಬಂಧವಿಲ್ಲ ಎಂದು ಡಾ ಸಂತೋಷ್ , ತಜ್ಞವೈದ್ಯ ತಿಳಿಸಿದ್ದಾರೆ.

ಜಾನುವಾರಗಳಿಂದ ಕೊರೊನಾ ಹರಡುತ್ತಾ..?
ಬಹುತೇಕ ಜನರಲ್ಲಿ ಜಾನುವಾರಗಳನ್ನ ಮುಟ್ಟಿದರೆ ಕೊರೊನಾ ಸೋಂಕು ಹರಡುತ್ತೆ ಎನ್ನುವ ಭಯವಿದೆ. ಇಂಹತ ಭಯ ಮನುಷ್ಯನಲ್ಲಿ ಹೆಚ್ಚಾಗಲು ಕಾರಣ ವದಂತಿಗಳ ಮೂಲಕ. ಆದರೆ ಇದು ಸುಳ್ಳು ವದಂತಿ. ಯಾಕೆಂದರೆ ಇಲ್ಲಿಯವರೆಗೂ ಯಾವುದೇ ಪ್ರಾಣಿಗೂ ಕೊರೊನಾ ಹರಡಿರುವುದು ಪತ್ತೆಯಾಗಿಲ್ಲ. ಚೀನಾದಲ್ಲಿ ಮಾತ್ರ ಇದು ಪ್ರಾಣಿಗಳ ಮೂಲಕ ಬಂದಿದೆ ಎನ್ನಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಸಾಕು ಪ್ರಾಣಿಗಳಿಗೆ ಜಾನುವಾರಗಳಿಗೆ ಸೋಂಕು ಇರುವುದು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ ವಂದತಿ. ಹೀಗಾಗಿ ಈ ಬಗ್ಗೆ ಹೆದರುವುದು ಬೇಡ. ಪ್ರಾಣಿಗಳನ್ನು ಮುಟ್ಟಿದ್ದಾಗ, ಅವುಗಳ ಬಳಿ ಹೋದಾಗ ಮುಖಕ್ಕೆ ಮಾಸ್ಕ್ ಧರಿಸಿ, ನಂತರ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಂಡರೆ ಕೊರೊನಾ ಹರಡುವುದನ್ನ ತಡೆಗಟ್ಟಬಹುದು.

ಗೋಮೂತ್ರ, ಸಗಣಿ ಕೊರೊನಾಗೆ ಮದ್ದಾಗುತ್ತಾ..?
ಗೋಮೂತ್ರವು ಹಲವಾರು ರೋಗಗಳಿಗೆ ರಾಮ ಬಾಣ . ಆದರೆ ಇದನ್ನು ಬಳಸವುದಕ್ಕೂ ಮುನ್ನ ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಲೇಬೇಕು . ಹೀಗಿರುವಾಗ ಮಹಾಮಾರಿ ಕೊರೊನಾ ತಡಗಟ್ಟಲು ಗೋಮುತ್ರ ಹಾಗೂ ಸಗಣಿ ಅತ್ಯುತ್ತಮ ಎನ್ನುವುದಕ್ಕೆ ಸಾಕಷ್ಟು ವದಂತಿಗಳು ಹಬ್ಬಿವೆ. “ಕಳೆದ ತಿಂಗಳು ವಿಧಾನಸಭಾ ಕಲಾಪದ ವೇಳೆ ಅಸ್ಸಾಂನ ಬಿಜೆಪಿ ಶಾಸಕಿ-ಗೋವಿನ ಸಗಣಿ ಸುಟ್ಟಾಗ, ಹೊರ ಬರುವ ಹೊಗೆಯು ಕೊರೊನಾ ವೈರಸ್ ನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಎನ್ನುವ ಹೇಳಿಕೆ ನೀಡಿದ್ದರು.” ಆದರೆ ಇದ್ಯಾವುದಕ್ಕೂ ಖಚಿತ ಮಾಹಿತಿ ಲಭ್ಯವಿಲ್ಲ. ಮೆಡಿಕಲಿ ಯಾವುದೇ ಎವಿಡೆನ್ಸ್ ಇಲ್ಲ. ಈ ಬಗ್ಗೆ ಪ್ರಯೋಗಗಳು ನಡೆದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುವವರೆಗೂ ಯಾವುದನ್ನೂ ನಂಬುವಂತಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.


ತುಳಸಿ ತಿಂದ್ರೆ ಕೊರೊನಾ ಹೋಗುತ್ತಾ..?
ಆಯುರ್ವೇದದಲ್ಲಿ ತುಳಸಿ ಗಿಡವನ್ನು ಔಷಧಿಯಾಗಿ ಪರಿಗಣಿಸಲಾಗಿದ್ದು, ಹಿಂದೂ ಧರ್ಮದಲ್ಲಿದೇವತೆಯಂತೆ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಒಂದು ತುಳಸಿ ಗಿಡ ಇದ್ದೇ ಇರುತ್ತದೆ. ಈ ಗಿಡವು ವಾತಾವರಣದಲ್ಲಿ ಹೆಚ್ಚು ಆಮ್ಲಜನಕ ಉತ್ಪನ್ನ ಮಾಡುವುದಲ್ಲದೆ, ಕ್ರಿಮಿಕೀಟಗಳನ್ನು ತಡೆಯುತ್ತದೆ. ತುಳಸಿ ದಳದಲ್ಲಿ ರೋಗನಿರೋಧಕ ಶಕ್ತಿ ಇದೆ. ಆದರೆ ಕೊರೊನಾ ಸೋಂಕು ಹರಡದಂತೆ ಮಾಡುವ ಅಥವಾ ಹರಡಿದ್ದನ್ನ ಕಡಿಮೆ ಮಾಡುವ ಶಕ್ತಿ ತುಳಸಿಗೆ ಇರುವುದರ ಬಗ್ಗೆ ಯಾವುದೇ ಪ್ರಯೋಗ ನಡೆದಿಲ್ಲ. ಹೀಗಾಗಿ ಇದು ಕೂಡ ಸತ್ಯಕ್ಕೆ ದೂರವಾದ ಮಾತು.

ಮದ್ಯಪಾನ-ಗಾಂಜ ಸೇವನೆ ಕೊರೊನಾಗೆ ರಾಮಬಾಣ..?
ಮದ್ಯಪಾನ-ಗಾಂಜಾ ಸೇವನೆಯಿಂದ ಕೊರೊನಾ ರಾಮಬಾಣದಂತೆ ಕೆಲಸ ಮಾಡುತ್ತದೆ ಎನ್ನುವ ಸುಳ್ಳು ವದಂತಿಯಿಂದ ಇರಾನ್ ನಲ್ಲಿ ಕಳ್ಳಪಡ್ಡಿ ಸರಾಯಿ ಕುಡಿದು 30 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಸೇವನೆ ಅತೀಯಾದ್ರೆ ದೇಹಕ್ಕೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಕೊರೊನಾ ತಡೆಯಲು ಸಾಧ್ಯವಿಲ್ಲ. ಇಂತಹ ವದಂತಿಗಳಿಗೆ ಯಾವುದು ಸಾಕ್ಷಿಗಳಿಲ್ಲ.

ವಾಕಿಂಗ್ ಮಾಡಬೇಕಾ..?
ಕೊರೊನಾ ಸುದ್ದಿ ಹಬ್ಬಿದಾಗಿನಿಂದಾ ವಯಸ್ಕರು ವಾಕಿಂಗ್, ಜಾಗಿಂಗ್ ಗಾಗಿ ಪಾರ್ಕ್ ಗಳಿಗೆ ಹೋಗುವುದನ್ನ ನಿಲ್ಲಿಸಿಬಿಟ್ಟಿದ್ದಾರೆ. ಕಾರಣ ತಮಗೂ ಕೊರೊನಾ ವಕ್ಕರಿಸುತ್ತಾ ಎನ್ನುವ ಭಯದಿಂದ. ಆದರೆ ತಜ್ಞರ ಪ್ರಕಾರ ವಯಸ್ಕರಲ್ಲಿ ಬಹುಬೇಗ ಸೋಂಕು ಹರಡುತ್ತದೆ ಜೊತೆಗೆ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಪ್ರಾಣಕ್ಕೆ ಆಪತ್ತು ಬಹುತೇಕ ಖಚಿತವಾಗಿರುತ್ತದೆ. ಹೀಗಾಗಿ ವಯಸ್ಕರು ವಾಕಿಂಗ್ ಜಾಗಿಂಗ್ ಹೋಗದೇ ಇರುವುದು ಒಳಿತು. ಒಂದು ವೇಳೆ ಹೋದರೂ ಮನೆ ಅಂಗಳದಲ್ಲಿ ಹೋಗಿ. ಇಲ್ಲವಾದರೆ ಪಾರ್ಕ್ ನಂತಹ ಸ್ಥಳಗಳಿಗೆ ಹೋದಾಗ ಗುಂಪಾಗಿ ಹೋಗುವುದು ಬೇಡ. ಪಾರ್ಕ್ ಗಳಲ್ಲಿ ಕುಳಿತುಕೊಳ್ಳುವುದು, ನೀರು ಕುಡಿಯುವುದು, ಶೌಚಾಲಯಕ್ಕೆ ಹೋಗುವುದು ಇದೆಲ್ಲಾವೂ ಸೋಂಕು ಹರಡದಂತೆ ತಡೆಗಟ್ಟುವುದು ಕಷ್ಟ ಸಾಧ್ಯ. ಹೀಗಾಗಿ ಆದಷ್ಟು ಮುಂಜಾಗೃತೆ ವಹಿಸಿ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಸುರಕ್ಷಿತವಾಗಿ ವಾಕ್, ಜಾಗ್ ಮಾಡುವುದು ಒಳಿತು.

ಕೊರೊನ ಇಲ್ಲದೇ ಇದ್ದವರು ಮಾಸ್ಕ್ ಹಾಕಬೇಕಾ..?
ಸೋಂಕು ಇಲ್ಲದವರು ಮಾಸ್ಕ್ ಧರಿಸುತ್ತಿರುವುದರಿಂದ ವಿಶ್ವದಲ್ಲೇ ಮಾಸ್ಕ್ ಕೊರತೆ ಉಂಟಾಗಿದೆ. ಹಾಗಾದ್ರೆ ಮಾಸ್ಕ್ ಯಾರಾರು ಧರಿಸಬೇಕು..? ತಜ್ಞವೈದ್ಯರ ಪ್ರಕಾರ ಹೈರಿಸ್ಕ್ ಜನ ಮಾಸ್ಕ್ ಗಳನ್ನ ಧರಿಸಬೇಕು. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಗಳು, ರೋಗಿಗಳು, ರೋಗಿ ಸಂಬಂಧಿಗಳು, ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ಗಳು, ಅಲ್ಲಿ ಓಡಾಡುವಂತಹ ಜನ ಮಾಸ್ಕ್ ಹಾಕಿಕೊಳ್ಳಬೇಕು. ಹೀಗೆ ಎಲ್ಲಿ ಸೋಕು ಹರಡುವ ಸಾಧ್ಯತೆ ಇರುತ್ತದೆಯೋ ಅಲ್ಲಿ ಜನ ಮಾಸ್ಕ್ ಹಾಕಿಕೊಳ್ಳುವುದು ಉತ್ತಮ. ಜೊತೆಗೆ ಯಾರಿಗೆ ಕೆಮ್ಮು, ಜ್ವರ, ನಗಡಿ, ಶೀತ ಿರುತ್ತದೆಯೋ ಅವರೆಲ್ಲಾ ಮಾಸ್ಕ್ ಹಾಕಿಕೊಂಡರೆ ಒಳ್ಳೆದು. ಎಲ್ಲರೂ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಕೊರೊನಾ ಬಗ್ಗೆ ಮೆಸೇಜ್ ಗಳು ಬಂದ್ರೆ ಏನ್ ಮಾಡಬೇಕು..?
ಇತ್ತೀಚೆಗೆ ಸೋಶೀಯಲ್ ಮೀಡಿಯಾಗಳಲ್ಲಂತೂ ಕೊರೊನಾದಾ ಸುದ್ದಿ. ಬೆಳಿಗ್ಗೆಯಿಂದ ಸಂಜೆವರೆಗೂ ಮಾತ್ರವಲ್ಲದೇ 24/7 ಕೊರೊನಾದ್ದೇ ಸುದ್ದಿ ಹರಿದಾಡಿ ಜನರ ನಿದ್ದೆಗೆಡಿಸಿಬಿಟ್ಟಿದೆ. ಹೀಗಾಗಿ ಪ್ರಾಣಕ್ಕೆ ಕುತ್ತು ತಂದ ಕೊರೊನಾ ಬಗ್ಗೆ ಯಾವ ಮೆಸೇಜ್ ಬಂದ್ರೂ ಜನ ನಂಬಲು ಶುರು ಮಾಡಿದ್ದಾರೆ. ಹೀಗಾಗಿ ನಿಮಗೇನಾದ್ರೂ ಕೊರೊನಾ ಬಗ್ಗೆ ಸುದ್ದಿಗಳು ಬಂದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್ ಸೆಟ್ ನೋಡಿದ್ರೆ ಅಲ್ಲಿ ಖಚಿತ ಮಾಹಿತಿ ಲಭ್ಯವಾಗುತ್ತದೆ. ಇಲ್ಲವಾದರೆ ನುರಿತ ತಜ್ಞರ ಮಾಹಿತಿ ಪಡೆಯಿರಿ. ಫೆಕ್ ನ್ಯೂಸ್ ತುಂಬಾ ಇಂಟ್ರಸ್ಟ್ ಇರುತ್ತೆ. ಫೇಕ್ ಮೆಸೇಜ್ ಟ್ರಸ್ಟ್ ಮಾಡಬೇಡಿ.


ಕೊರೊನಾಗೆ ಔಷಧಿ ಇದಿಯಾ..?
ಕೊರೊನಾ ವೈರಸ್ ತಡೆಗಟ್ಟಲು ನಾನಾ ಜನ ಔಷಧಿ ಕೊಡ್ತೀವಿ ಅಂತ ಬೋರ್ಡ್ ಹಾಕಿಕೊಂಡು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಂದ ಸರಿಯಾಗೆ ತರಾಟೆಗೆ ಒಳಪಟ್ರು. ಕೊರೊನಾದಿಂದ ದೂರವಾದ್ರೆ ಸಾಕಪ್ಪ ಅಂತ ಜನ ಔಷಧಿ ಹುಡಿಕೊಂಡು ಹೋಗ್ತಾರೆ. ಇಂತವರಿಗೆ ಒಂದು ಕಿವಿ ಮಾತು. ವೈರಸ್ ಗೆ ಟ್ರೀಟ್ ಮೆಂಟ್ ಕಂಡು ಹಿಡಿಯುವುದು ಕಷ್ಟ. ಆಂಟಿ ವೈರಲ್ ಕಂಡು ಹಿಡಿಯಲು ತುಂಬಾ ಸಮಯ ಬೇಕು. ಒಂದು ಬಾರಿ ಮೆಡಿಷನ್ ಬಂದ್ರುನೂ ಮುನುಷ್ಯನಿಗೆ ಕೊಡಬಹುದಾ..? ಎನ್ನುವುದು ಖಚಿತವಾಗಬೇಕು. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಈ ಸೀಸನ್ ನಲ್ಲಿ ಬರುತ್ತೆ ಅನ್ನೋದು ಅನುಮಾನವೇ. ತಿಂಗಳುಗಳೇ ಆಗಬಹುದು. ಹೀಗಾಗಿ ಔಷಧಿ ಕಂಡು ಹಿಡಿಯಲಾಗಿಲ್ಲ. ಹೀಗೆ ಕೊರೊನಾ ಅಲ್ಲಿ ಬಂದಿದೆ, ಇಲ್ಲಿ ಬಂದಿದೆ, ಅವರಿಗಿದೆ ಇವರಿಗಿದೆ, ಅದನ್ನ ಮಾಡಿ ಇದನ್ನ ಮಾಡಿ, ಪ್ರಾಣಿಗಳನ್ನ ಸಾಯಿಸಿ, ಅವರು ಈ ರೀತಿ ಹೇಳಿದ್ದಾರೆ ಇಂತೆಲ್ಲಾ ಸಂದೇಶಗಳು ನಿಮ್ಮ ಮೊಬೈಲ್ ಫೋನ್ ಗೆ ಬರುತ್ತಲೇ ಇರುತ್ತವೆ. ಯಾವುದೇ ಸೂಕ್ತ ಮಾಹಿತಿ ಇಲ್ಲದೇ ಇದನ್ನ ನಂಬಬೇಡಿ.

ಹೀಗಾಗಿ ಕೊರೊನಾ ಸೋಂಕಿನ ಬಗ್ಗೆ ಸುಳ್ಳು ವದಂತಿಗಳನ್ನು ನಂಬಬೇಡಿ. ಅನುಮಾನವಿದ್ದರೆ ನುರಿತರಲ್ಲಿ ಕೇಳಿ ತಿಳಿದುಕೊಳ್ಳಿ. ಆರೋಗ್ಯ ವಿಶ್ವಸಂಸ್ಥೆ ಅಧಿಕೃತ ವೆಚ್ ಸೆಟ್ ಗೆ ಹೋಗಿ ಮಾಹಿತಿ ಸಂಗ್ರಹ ಮಾಡಿ. ಸೂಕ್ತ ಊಹಾಪೋಹಕ್ಕೆ ಕಿವಿಗೊಡದಿರಿ. ನಿಮ್ಮ ಬಗ್ಗೆ ಜಾಗೃತರಾಗಿರಿ. ಜಾಗೃತಿ ಬಗ್ಗೆ ಮಾಹಿತಿ ನೀಡಿ. ಸುಳ್ಳು ಮಾಹಿತಿಗಳನ್ನ ಹಬ್ಬಿಸಬೇಡಿ, ನಂಬಬೇಡಿ. ಕೊರೊನಾ ತಡೆಗೆ ಕೈಜೋಡಿಸಿ ಎನ್ನುವುದೇ ಎಲ್ಲರ ಆಶಯ.

