ರಥೋತ್ಸವದ ಸಂದರ್ಭದಲ್ಲಿ ರಥಕ್ಕೆ ಹಣ ತೂರಿದ ಸ್ವಾಮಿಜಿ…

ಪಬ್, ಕ್ಲಬ್ ಗಳಲ್ಲಿ ಹಣ ತೋರೋದನ್ನ ನೋಡಿದ್ದೇವೆ. ಅಥವಾ ಖುಷಿ ಹೆಚ್ಚಾದಾಗ ಯಾವುದೋ ಸಾರ್ವಜನಿಕ ಸ್ಥಳಗಳಲ್ಲಿ ಹಣ ತೂರಿದವರಿದ್ದಾರೆ. ಆದರೆ ಧಾರ್ಮಿಕ ಸ್ಥಳಗಳಲ್ಲಿ ನೋಟುಗಳನ್ನ ತೋದವರನ್ನ ನೋಡಿದ್ದೀರಾ…? ನೋಡಿಲ್ಲಾ ಅಂದ್ರೆ ನೋಡಿ ಬಿಡಿ.

ಮಂತ್ರಾಲಯದಲ್ಲಿ ರಥೋತ್ಸವದ ವೇಳೆ ಸ್ವಾಮೀಜಿ ಒಬ್ಬರು ಈ ಕೆಲಸ ಮಾಡಿದ್ದಾರೆ. ಹೌದು… ಮಂತ್ರಾಲಯದಲ್ಲಿ ಆಗಷ್ಟ ೧೮ ರಂದು ಮದ್ಯಾಹ್ನ ರಥೋತ್ಸವ ಕೈಗೊಳ್ಳಲಾಗಿತ್ತು. ಈ‌ ಸಂದರ್ಭದಲ್ಲಿ ಸ್ವಾಮೀಜಿ ರಥದ ಮೇಲಿಂದ ೧೦೦ ಮೌಲ್ಯ ನೋಟುಗಳು ತೂರಿದ್ದರು. ನೋಟು ಪಡೆಯಲು ಜನ ನೂಕುನುಗ್ಗಲಾಗಿತ್ತು. ಸ್ವಲ್ಪ ಹೊತ್ತು ರಥೋತ್ಸವಕ್ಕೆ ತೊಂದರೆಯಾಗಿದೆ. ಈ‌ ಸಂದರ್ಭದಲ್ಲಿ ಮಂತ್ರಾಲಯ ಶಾಸಕ ಬಾಲನಾಗಡ್ಡಿ ಸಹ ಇದ್ದರು. ಸದ್ಯ ಸಾರ್ವಜನಿಕ ಸ್ಥಳದಲ್ಲಿ ಹಣ ತೂರಿದವರ ಮೇಲೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಲಾಗಿದೆ.

ಹಣ ತೂರಿದ ಮಂತ್ರಾಲಯದ ಶ್ರೀರಾಘವೇಂದ್ರ ‌ಸ್ವಾಮಿಗಳ‌ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥರ ಮೇಲೆ ಪ್ರಕರಣ ದಾಖಲಿಸುವಂತೆ ನಾರಾಯಣ ಎಂಬುವವರಿಂದ ಮಂತ್ರಾಲಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.