ರಾಜ್ಯದಲ್ಲಿಂದು ಹೊಸದಾಗಿ 10 ಕೊರೊನಾ ಕೇಸ್ : ಸೋಂಕಿತರ ಸಂಖ್ಯೆ 858ಕ್ಕೇರಿಕೆ!

ಕರ್ನಾಟದಲ್ಲಿ ಇಂದು ಕೊರೊನಾ ಸಂಖ್ಯೆ ಸ್ವಲ್ಪ ಸಮಾಧಾನ ತಂದಿದ್ದು, ಇಂದು ಹೊಸದಾಗಿ 10 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆ  858ಕ್ಕೇರಿಕೆಯಾಗಿದೆ.

ಹೌದು…  ಇಂದು ರಾಜ್ಯದಲ್ಲಿ 10 ಕೊರೊನಾ ಕೇಸ್ ಪತ್ತೆಯಾಗಿದೆ. ದಾವಣೆಗೆರೆಯಲ್ಲಿ 3, ಕಲ್ಬುರ್ಗಿ, ಹಾವೇರಿ, ವಿಜಯಪುರದಲ್ಲಿ ತಲಾ ಒಂದು, ಬಾಗಲಕೋಟೆ, ಬೀದರ್ ನಲ್ಲಿ ತಲಾ 2 ಕೇಸ್ ದಾಖಲಾಗಿವೆ. ಈ ಸಂಖ್ಯೆ ರಾಜ್ಯದಲ್ಲಿ ಸ್ವಲ್ಪ ಸಮಾಧಾನ ತಂದಿದೆ. ನಿನ್ನೆಗೆ ಹೋಲಿಸಿದೆ ಇಂದು ಕಡಿಮೆ ಕೇಸ್ ಗಳು ದಾಖಲಾಗಿವೆ.  ಇಂದು ದಾಖಲಾದ 10 ಜನ ಸೋಂಕಿತರ ಸಂಪರ್ಕದಲ್ಲಿದ್ದವರು ಎಂದೇಳಲಾಗುತ್ತಿದೆ.

ಈವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858 ಕ್ಕೇರಿಕೆಯಾಗಿದೆ. ಈವರಲ್ಲಿ ಸಾವಿನ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.

ಭಾತರದಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದಿವರಿಸಿದ್ದು, ಕಳೆದ 24 ಗಂಟೆಗಳಲ್ಲಿ 4,213 ಕೊರೊನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ 4,213 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ 97 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಇಡೀ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 2,206ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ 67,152ಕ್ಕೆ ಕೊರೊನಾ ಸೋಂಕಿತರ ಪೈಕಿ 20,917 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೇಶದಲ್ಲಿ 44,029 ಮಂದಿ ಕೊರೊನಾ ಸೋಂಕಿನಿಂದ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಹಾಟ್‍ಸ್ಟಾಟ್ ಆದ ಮಹಾರಾಷ್ಟ್ರದಲ್ಲಿ ಇದುವರೆಗೂ 22,171 ಮಂದಿಗೆ ಕೊರೊನಾ ದೃಢವಾಗಿದೆ. ಇನ್ನೂ ಗುಜರಾತ್‍ನಲ್ಲಿ 8,194, ತಮಿಳುನಾಡಿನಲ್ಲಿ 7,204 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

 

 

Spread the love

Leave a Reply

Your email address will not be published. Required fields are marked *