ರಾಜ್ಯದಲ್ಲಿಂದು 141 ಹೊಸ ಕೊರೊನಾ ಕೇಸ್ : ಬೆಂಗಳೂರಿನಲ್ಲೇ 33 ಪ್ರಕರಣ ಪತ್ತೆ!
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣ ಸಿಗುತ್ತಿಲ್ಲ. ದಿನ ಕಳೆದಂತೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಇಂದು 141 ಹೊಸ ಕೊರೊನಾ ಕೇಸ್ ದಾಖಲಾಗಿವೆ. ಆ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ನೀಡಿದೆ.
ಹೌದು… ಇಂದು ದಾಖಲಾದ ಸೋಂಕಿತರ ಪೈಕಿ 33 ಕೇಸ್ ಗಳು ಬೆಂಗಳೂರಿನಲ್ಲೇ ದಾಖಲಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆ ಹಾಗೂ ತಂಪಾದ ವಾತಾವರಣವಿದ್ದು ಇನ್ನೂ ಮೂರು ನಾಲ್ಕು ದಿನಗಳವರೆಗೆ ಮಳೆಯಾಗುವ ಮನ್ಸೂಚನೆ ಹವಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ಈ ಮಧ್ಯ 47 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಇಂದು ದಾಖಲಾದ 141 ಹೊಸ ಕೊರೊನಾ ಕೇಸ್ ಗಳಲ್ಲಿ ಬೆಳಗಾವಿ 1, ದಾವಣಗೆಡೆ 4, ಹಾಸನ 13, ಬೀದರ್ 10, ಬೆಂಗಳೂರು 33, ಕಲಬುರಗಿ 2, ಯಾದಗಿರಿ 18, ಉಡುಪಿ 13, ದಕ್ಷಿಣ ಕನ್ನಡ 14, ವಿಯಜಪುರ 11, ಮೈಸೂರು 2, ತುಮಕೂರು 1, ಬೆಂಗಳೂರು ಗ್ರಾಮಾಂತರ 1, ಹಾವೇರಿ 4, ಧಾರವಾಡ 2, ಉತ್ತರ ಕನ್ನಡ 2, ಶಿವಮೊಗ್ಗ 6, ಚಿತ್ರಗುರ್ಗ 1 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆ ಕಂಡಿದ್ದು, ಇವರಲ್ಲಿ ಇಂದು 103 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 49 ಜನ ಮೃತಪಟ್ಟಿದ್ದಾರೆ.