ರಾಜ್ಯದಲ್ಲಿಂದು 23 ಹೊಸ ಕೊರೊನಾ ಕೇಸ್ : ಬೆಂಗಳೂರಿನಲ್ಲೇ 14 ಪ್ರಕರಣ ಪತ್ತೆ!
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಹೊಸದಾಗಿ 23 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೌದು…. ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದವರೆಗಿನ ಹೆಲ್ತ್ ಬುಲಿಟಿನ್ ನಲ್ಲಿ ಹೊಸದಾಗಿ 23 ಕೊರೊನಾ ಕೇಸ್ ದಾಖಲಾಗಿವೆ. ಇವರಲ್ಲಿ ಬೆಂಗಳೂರು 14, ಬಾಗಲಕೋಟೆಯಲ್ಲಿ 1, ಹಾಸನದಲ್ಲಿ 3, ದಾವಣಗೆರೆಯಲ್ಲಿ 1, ಮಂಡ್ಯದಲ್ಲಿ 1, ಬಳ್ಳಾರಿ 1, ಉಡುಪಿ 1,ಧಾರವಾಡ 1 ಕೇಸ್ ಗಳು ದಾಖಲಾಗಿವೆ. ಇಂದು ಬಿಡುಗಡೆಯಾದ ವರದಿಯಲ್ಲಿ ಬಹುಪಾಲು ಬೆಂಗಳೂರು ಪಡೆದಿದ್ದು, ಸಿಲಿಕಾನ್ ಸಿಟಿಯಲ್ಲಿ ಆತಂಕ ಹೆಚ್ಚಾಗಿದೆ.
ಸೋಂಕಿತರ ಸಂಪರ್ಕದಿಂದ ಮತ್ತೋರ್ವರಿಗೆ ಸೋಂಕು ಹರಡಿರುವ ಪ್ರಕರಣಗಳೊಂದಿಗೆ, ಬೇರೆ ರಾಜ್ಯಗಳಿಂದ ಬಂದವರಿಂದಲೂ ಸೋಂಕು ಹರಡಿದೆ. ಇದರ ಜೊತೆಗೆ ಬೇರೆ ಬೇರೆ ರಾಜ್ಯಗಳಿಂದ ವಲಸಿಗರು ರಾಜ್ಯಕ್ಕೆ ಪಾವಾಸ್ ಆಗುತ್ತಿರುವುದರಿಂದ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1079 ದಾಖಲಾಗಿದ್ದು, 494 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 36 ಜನ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.