ರಾಜ್ಯದಲ್ಲಿ ಕ್ಯಾಸಿನೋ ಅಡ್ಡೆ ತೆರೆಯುವ ಯೋಜನೆಯ ವಿರುದ್ಧ ರಾಮನಗರದಲ್ಲಿ ಪ್ರತಿಭಟನೆ…
ಪ್ರವಾಸೋದ್ಯಮ ಇಲಾಖೆಯನ್ನ ಅಭಿವೃದ್ಧಿಪಡಿಸುವ ದೃಷ್ಟಿಯಿಂದಾಗಿ ರಾಜ್ಯದಲ್ಲಿ ಕ್ಯಾಸಿನೋ ಅಡ್ಡೆಗಳನ್ನ ತೆರೆಯುವ ಬಗ್ಗೆ ಮಾತನಾಡಿದ್ದ ಸಚಿವ ಸಿ.ಟಿ.ರವಿ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಕಾವೇರಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಪ್ಪುಪಟ್ಟಿ ಪ್ರದರ್ಶನ ಮಾಡುವ ಮೂಲಕ ಸಚಿವ ಸಿ.ಟಿ.ರವಿ ವಿರುದ್ಧ ಆಕ್ರೋವ್ಯಕ್ತಪಡಿಸಿದರು. ಈ ಹಿಂದೆ ಮನೆಮನೆಗೂ ಮದ್ಯವನ್ನ ಪೂರೈಕೆ ಮಾಡುತ್ತೇವೆಂದು ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ರಾಜ್ಯದಲ್ಲಿ ದೊಡ್ಡಮಟ್ಟದ ವಿರೋಧವ್ಯಕ್ತವಾದ ಹಿನ್ನೆಲೆ ಸಚಿವರು ತೆಪ್ಪಗಾಗಿದ್ದರು.
ಈಗ ಮತ್ತೆ ಬಿಜೆಪಿಯ ಮತ್ತೊಬ್ಬ ಸಚಿವ ಸಿ.ಟಿ.ರವಿ ರಾಜ್ಯದಲ್ಲಿ ಜೂಜು ಅಡ್ಡೆಗಳ ಕೇಂದ್ರಗಳನ್ನ ತೆರೆದರೆ ರಾಜ್ಯದ ಬೊಕ್ಕಸ ತುಂಬಲಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗಲಿದೆ. ಹಾಗಾಗಿ ಸಿಎಂ ಯಡಿಯೂರಪ್ಪನವರು ಇಂತಹ ಬೇಜಾಬ್ದಾರಿ ಹೇಳಿಕೆಗಳನ್ನ ನೀಡುವ ಸಚಿವರನ್ನ ಸಂಪುಟದಿಂದ ಕೈಬಿಡಬೇಕೆಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದ್ದಾರೆ.