ರಾಜ್ಯದ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ : ದೇವಸ್ಥಾನಗಳಲ್ಲಿ ನೆರೆದ ಭಕ್ತ ಸಾಗರ
ನಾಡಿನಲ್ಲಿ ಇಂದು ಏಕಾದಶಿ ಆಚರಣೆಗೆಂದು ಜನ ದೇವಸ್ಥಾನಗಳಿಗೆ ತೆರಳಿ ವೈಕುಂಠನ ದರ್ಶನ ಪಡೆಯುತ್ತಿದ್ದಾರೆ. ತಳಿರು ತೋರಣಗಳಿಂದ ಅಲಂಕಾರಗೊಂಡ ದೇವರನ್ನ ಈ ಗಳಿಗೆ ಕಣ್ತುಂಬಿಕೊಳ್ಳುವುದೇ ಭಕ್ತರಿಗೆ ಒಂದು ಆನಂದ. ನಾಡಿನ್ನೆಲೆಡೆ ಉಪವಾಸದೊಂದಿಗೆ ವೈಕುಂಠನ ಆರಾಧನೆ ಮಾಡಿವ ಜನ ದೇವಸ್ಥಾನಗಳಿಗೆ ವೈಕುಂಠನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವೈಕುಂಠ ಏಕಾದಶಿಯ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ..
ವೈಕುಂಠ ಏಕಾದಶಿ ಅಂದರೆ….
ಏಕಾದಶಿ ಎಂದರೆ ಹನ್ನೊಂದು. ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹನ್ನೊಂದು ದಿನಗಳಿಗೆ ಏಕಾದಶಿಯಂದು ಹರಿದಿನವಿದ್ದುದರಿಂದ ಅಂದು ಉಪವಾಸ, ಆಷಾಢ ಏಕಾದಶಿ, ವೈಕುಂಠ ಏಕಾದಶಿ ಹೀಗೆ ವರ್ಷಪೂರ್ತಿ ಬರುವ ಅವುಗಳಿಗೆ ಅದರದ್ದೇ ಆದ ಮಹತ್ವವಿದೆ. ಚೈತ್ರದ ಕಾಮದಾ ಏಕಾದಶಿಯಿಂದ ಫಾಲ್ಗುಣದ ಪಾಪವಿಮೋಚನೀಯವರೆಗೂ ಏಕಾದಶಿಗೆ ಮಹತ್ವದ ಹೆಸರುಗಳಿವೆ. ಆಷಾಢ ಏಕಾದಶಿಯು ದಕ್ಷಿಣಾಯನದಲ್ಲಿ ಪ್ರಾರಂಭವಾಗುವ ಮಹತ್ವದ ವ್ರತ, ದಕ್ಷಿಣಾಯನವು ದೇವತೆಗಳಿಗೆ ರಾತ್ರಿ. ಆಷಾಢ ಏಕದಶಿಯಂದು ಯೋಗ ನಿದ್ರೆಗೆ ಜಾರುವ ಶ್ರೀಹರಿ ಉತ್ಥಾನ ದ್ವಾದಶಿಯಂದು ಏಳುತ್ತಾನೆ. ಅದಕ್ಕಾಗಿ ನಾಲ್ಕು ತಿಂಗಳು ಯಾವುದೇ ಶುಭಕಾರ್ಯಗಳಿಲ್ಲ. ಆದರೆ ಸಾಧನೆಗೆ ಪ್ರಶ್ತವಾದ ಅವಧಿ ಎಂದೆಳಲಾಗುತ್ತದೆ.
ಇನ್ನೂ ನಾಡಿನೆಲ್ಲೆಡೆ ವೈಕುಂಠನ ಆರಾಧನೆ ಬಲೂ ಜೋರಾಗಿದೆ. ಕೆಲ ಜಿಲ್ಲೆಯಲ್ಲಿ ವೈಕುಂಠ ಏಕಾದಶಿಯ ಆಚರಣೆಯ ಕೆಲವೊಂದಿಷ್ಟು ವಿಡಿಯೋ ತುಣುಕುಗಳೊಂದಿಗೆ ಮಾಹಿತಿ ಇಲ್ಲಿದೆ.
ಶಿವಮೊಗ್ಗ :-
ಶಿವಮೊಗ್ಗ ನಗರದಲ್ಲಿ ವೈಕುಂಠ ಏಕಾದಶಿಯ ಹಿನ್ನೆಲೆ, ವಿವಿಧ ಬಡಾವಣೆಯಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲಿ ದೇವರ ಮೂರ್ತಿಗೆ ಆಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಗರದ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವೆಂಕಟ ರಮಣ ದೇವಮಂದಿರಕ್ಕೆ ಭಕ್ತ ಸಾಗರ ಹರಿದು ಬರುತ್ತಿರುವ ದೃಶ್ಯ ಇಲ್ಲಿದೆ.
ವಿಜಯಪುರ- ನಗರದ ಗಚ್ಚಿನಕಟ್ಟಿ ಕಾಲೋನಿಯ ಅಂಬಾಭವಾನಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಚಿಕ್ಕಮಗಳೂರು – ಚಿಕ್ಕಮಗಳೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮಗಿಲು ಮುಟ್ಟಿದೆ. ನಗರದ ಹಿರೇಮಗಳೂರು ಕೊದಂಡ ರಾಮಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಬೆಳಿಗೆಯಿಂದಲೇ ಭೇಟಿ ನೀಡ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಕೋದಂಡರಾಮನಿಗೆ ಕನ್ನಡದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.
ಹಾಸನ-
ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿ ಮೆರವಣಿಗೆಯ ಮಾಡಲಾಗುತ್ತಿದೆ. ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮೈಸೂರು –
ಮೈಸೂರಿನ ಟಿ.ನರಸೀಪುರದ ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಉತ್ಸವ ಮೂರ್ತಿಯ ಮೆರವಣಿಗೆ ಮಾಡಿ ಉತ್ತರ ದ್ವಾರದಲ್ಲಿ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿವಿಧ ಪುಷ್ಪಾಲಂಕಾರದಿಂದ ಕಂಗೊಳಿಸಿದ ಶ್ರೀ ಗುಂಜನರಸಿಂಹ ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ಬ್ರಾಹ್ಮಿ ಮುಹೂರ್ತದಲ್ಲಿ ಸ್ವರ್ಗದ ಬಾಗಿಲು ಪ್ರವೇಶ ಮಾಡಿದರು.
ದಾವಣಗೆರೆ-
ಹರಿಹರೇಶ್ವರನಿಗೆ ಧರ್ನುಮಾಸದ ವೈಕುಂಠ ಏಕಾದಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಕೋಲಾರ-
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಪ್ರಸನ್ನ ವೆಂಕಟೇಶ್ವರ ದೇಗುಲಯಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.
ಹಾವೇರಿ- ನಗರದ ವೆಂಕಟೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಮಂಡ್ಯ- ಮದ್ದೂರಿನ ಇತಿಹಾಸ ಪ್ರಸಿದ್ದ ತೋಪಿನ ತಿಮ್ಮಪ್ಪ ದೇವಾಲಯ ಹಾಗೂ ಕದಲೀಪುರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.ಶ್ರೀರಂಗಪಟ್ಟಣದ ಇತಿಹಾಸ ಪ್ರಸಿಧದ ರಂಗನಾಥ ದೇವಾಲಯದಲ್ಲೂ ವೈಕುಂಠ ಏಕಾದಶಿ ಸಂಭ್ರಮ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು :-
ಬಾಗಲಕೋಟೆ –

