ರಾತ್ರೋ ರಾತ್ರಿ ನಡು ರಸ್ತೆಯಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು! : ವಿಡಿಯೋ ವೈರಲ್
ರಾತ್ರೋ ರಾತ್ರಿ ನಡು ರಸ್ತೆಯಲ್ಲೇ ಪ್ರೇಮಿಗಳು ಕಿತ್ತಾಡಿಕೊಂಡ ಘಟನೆ ಹಾಸನದ ಆರ್ ಸಿ ರಸ್ತೆಯಲ್ಲಿ ನಡೆದಿದೆ.
ಸಾರ್ವಜನಿಕರು ನೋಡುತ್ತಿದ್ರೂ ಕ್ಯಾರೆ ಎನ್ನದೇ ಮಧ್ಯ ರಸ್ತೆಯಲ್ಲಿ ಜಗಳವಾಡಿದ ಪ್ರೇಮಿಗಳ ದೃಶ್ಯ ಸಾರ್ವಜನಿಕರು ಸೆರೆ ಹಿಡಿದಿದ್ದಾರೆ.
ಯುವತಿಗಾಗಿ ಉತ್ತರ ಭಾರತ ಮೂಲದ ಇಬ್ಬರು ಯುವಕರು ಸ್ವಾಗತ್ ಪಾರ್ಟಿ ಹಾಲ್ ಬಳಿ ಕಿತ್ತಾಡಿಕೊಂಡಿದ್ದಾರೆ. ಯುವತಿ ಜಗಳ ಬಿಡಿಸಿಲು ಮುಂದಾದ್ರು ಜಗಳ ನಿಲ್ಲಿಸದೇ ಇಬ್ಬರು ಯುವಕರು ಗಲಾಟೆ ಮಾಡಿಕೊಂಡಿದ್ದಾರೆ.
ಯುವತಿಗಾಗಿ ಇಬ್ಬರು ಪ್ರೇಮಿಗಳು ಕಿತ್ತಾಡಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ಕಂಡರು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.