ರಾಹುಲ್ ಗಾಂಧಿ ಓರ್ವ ಮೂರ್ಖ, ಪಾಕಿಸ್ತಾನದ ಏಜಂಟ್ – ಯತ್ನಾಳ್

ರಾಹುಲ್ ಗಾಂಧಿ ಓರ್ವ ಮೂರ್ಖ. ಪಾಕಿಸ್ತಾನದ ಏಜಂಟ್ ನಂತೆ ಮಾತನಾಡುತ್ತಾರೆ. ರಾಹುಲ್ ಗಾಂಧಿ ಇಂಥ ವರ್ತನೆ, ಹೇಳಿಕೆಯಿಂದಲೇ ಕಾಂಗ್ರೆಸ್ ಇಂದು ಅಧೋಗತಿಗೆ ಬಂದಿದೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬನಸಗೌಡ ರಾ. ಪಾಟೀಲ ಯತ್ನಾಳ ಹರಿಹಾಯ್ದಿದ್ದಾರೆ.

ಎರಡು ತಿಂಗಳು ಜೈಲಿಗೆ ಹೋಗಿ ಬಂದರೂ ಪಿ. ಚಿದಂಬರಂ ಮತ್ತೆ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಈಗ ಭಾರತೀಯ ಕಾಂಗ್ರೆಸ್ ಆಗಿ ಉಳಿದಿಲ್ಲ. ಕಾಂಗ್ರೆಸ್ ಈಗ ಪಾಕಿಸ್ತಾನ ಕಾಂಗ್ರೆಸ್ ಆಗಿದೆ. ಬೈ ಎಲೆಕ್ಷನ್ ನಲ್ಲಿ ಮತದಾರರು ಸ್ಥಿರ ಸರಕಾರಕ್ಜಾಗಿ ಯಡಿಯೂರಪ್ಪ ಅವರಿಗೆ ಮತ ಹಾಕಿದ್ದಾರೆ.

ಕೆ. ಆರ್. ಪೇಟೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಗೆದ್ದಿದ್ದು ಯಡಿಯೂರಪ್ಪ ಅವರ ಸಾಮರ್ಥ್ಯಕ್ಜೆ ಸಾಕ್ಷಿ. ಡಿಸಿಎಂ ಹುದ್ದೆಯ ಅವಶ್ಯಕತೆ ಇಲ್ಲ. ಇದರಿಂದ ಪೊಲೀಸರಿಗೆ ಝೀರೊ ಟ್ರಾಫಿಕ್ ಕಲ್ಪಿಸಲು, ಜನರಿಗೆ ಸುಗಮ ಸಂಚಾರಕ್ಕೆ ತೊಂದರೆಯಿದೆ. ಮೂರ್ನಾಲ್ಕು ಜನ ಡಿಸಿಎಂ ಇರುವುದರಿಂದ ಸಾರ್ವಜನಿಕರಿಗೂ ಕಸಿವಿಸಿಯಾಗುತ್ತದೆ. ಉತ್ತರ ಕರ್ನಾಟಕ ಭಾಗದವರಿಗೆ ಜಲಸಂಪನ್ಮೂಲ ಖಾತೆ ನೀಡಬೇಕು ಎಂದರು.

ಬೈ ಎಲೆಕ್ಷನ್ ಫಲಿತಾಂಶ ಕುರಿತು ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೋದಿ, ಅಮಿತ ಶಾ ಜೊತೆಗೆ ರಾಜ್ಯಕ್ಕೆ ಯಡಿಯೂರಪ್ಪ ಶಕ್ತಿಯೂ ಪ್ರಮುಖವಾಗಿದೆ.

ಬಿಜೆಪಿಯನ್ನು ಈ ಸ್ಥಾನಕ್ಜೆ ತಂದವರು ವಾಜಪೇಯಿ ಮತ್ರು ಅಡ್ವಾಣಿ. ಆದರೆ, ಈ ವಿಷಯದಲ್ಲಿ ಕೇವಲ ಅಧಿಕಾರದಲ್ಲಿರುವವರನ್ನು ಹೊಗಳುವುದು ಸರಿಯಲ್ಲ. ಒಂದು ಸೋಲಿನಿಂದ ಸಿದ್ಧರಾಮಯ್ಯ ಯುಗಾಂತ್ಯವಾಗಿಲ್ಲ. ಸಿದ್ಧರಾಮಯ್ಯ ಅವರ ಶಕ್ತಿ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಸ್ವಾಗತಾರ್ಹ. ಪ್ರಧಾನಿ, ಕೇಂದ್ರ ಗೃಹ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಪ್ರವಾಹ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಮತ್ತೆ ಧ್ವನಿ ಎತ್ತುತ್ತೇನೆ. ಕೇಂದ್ರ ಸರಕಾರ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕೂಡಲೇ ರೂ‌. 5000 ಕೋ. ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅಥಣಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಡ್ಯಾಷ್..ಡ್ಯಾಷ್..ಡ್ಯಾಷ್… ಹೇಳಿಕೆ ವಿಚಾರಕ್ಕೆ ಖಾರವಾಘಿ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಡ್ಯಾಷ್..ಡ್ಯಾಷ್..ಡ್ಯಾಷ್… ತುಂಬಿದರೆ ನಾನೂ ತುಂಬುತ್ತೇನೆ. ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತೇನೆ. ಸ್ಥಾನ ಕೊಡದಿದ್ದರೂ ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತೇನೆ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights