ರೈತನನ್ನ ಹಿಂಬಾಲಿಸಿದ ಕಳ್ಳರು.. ಕಳ್ಳರನ್ನ ಹಿಂಬಾಲಿಸಿದ ಗ್ರಾಮಸ್ಥರು… ಮುಂದೆ ಡಿಶ್ಯೂಂ… ಡಿಶ್ಯೂಂ..

ರೈತನನ್ನ ಹಿಂಬಾಲಿಸಿದ ಕಳ್ಳರು.. ಕಳ್ಳರನ್ನ ಹಿಂಬಾಲಿಸಿದ ಗ್ರಾಮಸ್ಥರು… ಮುಂದೆ ಡಿಶ್ಯೂಂ… ಡಿಶ್ಯೂಂ..  ಈರುಳ್ಳಿ ಬೆಲೆ ಹೆಚ್ಚಾಗುತ್ತಿದಂತೆ ರೈತರಿಗೆ ಕಳ್ಳರ ಕಾಟ ಶುರುವಾಗಿದೆ.

ಈರುಳ್ಳಿ ಮಾರಾಟ ಮಾಡಿ ಹಣ ಪಡೆದು ವಾಪಸ್ ಆಗುತ್ತಿದ್ದ ರೈತನನ್ನು ಕಳ್ಳರು ಬೆನ್ನಟ್ಟಿ ಹಲ್ಲೆ ಮಾಡಿ ಹಣ ದೋಚುವ ಪ್ರಯತ್ನ ಮಾಡಿದ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಧಾರವಾಡದಿಂದ ವನಳ್ಳಿಗೆ ಹೊರಟ ರೈತನನ್ನು ಹಿಂಬಾಲಿಸಿದ ಕಳ್ಳರು ನಿರ್ಜನ ಪ್ರದೇಶದಲ್ಲಿ ಹೊಡೆದು ಹಣ ಕಿತ್ತುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ಆ ಕಳ್ಳರನ್ನು ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ.

ನಿರ್ಜನ ಪ್ರದೇಶದಲ್ಲಿ ರೈತನಿಗೆ ಹೊಡೆದ ಕಳ್ಳರು ಅವನಲ್ಲಿದ್ದ ೧೦ ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಹಣ ಕಿತ್ತುಕೊಂಡು ಓಡುತ್ತಿರುವಾಗ ಅನುಮಾನ ಬಂದು ಹೆಬ್ಬಳ್ಳಿ ಗ್ರಾಮಸ್ಥರು ಇಬ್ಬರನ್ನು ತಡೆದು ವಿಚಾರಣೆ ಮಾಡಿದ್ದಾರೆ.

ರೈತನಲ್ಲಿನ ಹಣ ಕಿತ್ತುಕೊಂಡು ಹೋಗುತ್ತಿರೊ ಬಗ್ಗೆ ಖಚಿತ ಪಡೆದುಕೊಂಡು ಇಬ್ಬರಿಗೆ ಗೂಸಾ ಕೊಟ್ಟಿದ್ದಾರೆ. ಗೂಸಾ ಕೊಟ್ಟು ಕಳ್ಳರನ್ನ ಗ್ರಾಮದಲ್ಲಿ‌ ಕೂಡಿಹಾಕಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights