ಕೊರೊನಾ ನಿಯಂತ್ರಣಕ್ಕೆ ದೆಹಲಿ-ಗಾಜಿಯಾಬಾದ್ ಗಡಿ ಬಂದ್‌; ಟೆಕ್‌ ಪೊಸ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌  

ಕೊರೊನಾ ನಿಯಂತ್ರಣಕ್ಕೆ ದೆಹಲಿಯಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗಿದ್ದು, ದೆಹಲಿ-ಗಾಜಿಯಾಬಾದ್ ಗಡಿಯುದ್ದಕ್ಕೂ ಸಂಚಾರ ನಿಷೇಧಕ್ಕೆ ಅಧಿಕಾರಿಗಳು ಸೋಮವಾರ ಆದೇಶ ನೀಡಿದ್ದಾರೆ. ಇದರಿಂದಾಗಿ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ -9 ರ ಗಾಜಿಪುರ ಗಡಿಯಲ್ಲಿರುವ ಅಂತರರಾಜ್ಯ ಚೆಕ್‌ಪಾಯಿಂಟ್‌ನಲ್ಲಿ ದೆಹಲಿಯೊಂದಿಗೆ ದೈನಂದಿನ ಒಡನಾಟ ಹೊಂದಿರುವ ಹಲವಾರು ಜನರು ಸಿಲುಕಿಕೊಂಡಿದ್ದರು.

ಹಠಾತ್ ನಿಷೇಧದ ಬಗ್ಗೆ ಕೋಪಗೊಂಡ ಪ್ರಯಾಣಿಕರು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡಿದ್ದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ್ದಾರೆ. ಪಾಸ್ ಹೊಂದಿರುವ ಜನರಿಗೆ ಗಡಿಯುದ್ದಕ್ಕೂ ಹೋಗಲು ಅನುಮತಿ ಕೊಡುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.  ಗಡಿಯ ಎರಡೂ ಬದಿಗಳಲ್ಲಿ ವಾಹನಗಳ ಸರತಿ ಸಾಲುಗಳಿವೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಈ ಬಗ್ಗೆ ದೆಹಲಿ ಟ್ರಾಫಿಕ್ ಪೊಲೀಸರು ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದು, “ಯುಪಿ ಪೊಲೀಸರು ಗಡಿಯಲ್ಲಿ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರೀಶಿಸುತ್ತಿರುವ ಕಾರಣ ಗಾಜಿಪುರದಿಂದ ಗಾಜಿಯಾಬಾದ್ಗೆ ಸಾಗುವ ಮಾರ್ಗದಲ್ಲಿ ಸಂಚಾರ ನಿಧಾನವಾಗಿದೆ” ಎಂದು ಹೇಳಿದ್ದಾರೆ.

ದೆಹಲಿಯಿಂದ ಬಂದ ಆರು ಜನರರಲ್ಲಿ ಕೊರೊನಾ ವೈರಸ್‌ ಧೃಡಪಟ್ಟಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಂಡೆ ಏಪ್ರಿಲ್ 20 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಗಾಜಿಯಾಬಾದ್ ಗಡಿಯನ್ನು ಮೊಹರು ಮಾಡುವ ಆದೇಶವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ಸೋಮವಾರ ಹೊರಡಿಸಿದರೂ, ಅನೇಕ ಜನರಿಗೆ ಈ ನಿರ್ದೇಶನದ ಬಗ್ಗೆ ತಿಳಿದಿರಲಿಲ್ಲ.

ಲಾಕ್ ಡೌನ್ ಆದೇಶದ ಪ್ರಕಾರ ಗಾಜಿಯಾಬಾದ್ ಮತ್ತು ದೆಹಲಿ ನಡುವೆ ಜನರ ಸಂಚಾರವನ್ನು ಜಿಲ್ಲಾಡಳಿತ ಮಂಗಳವಾರ ನಿಷೇಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಆದಾಗ್ಯೂ, ಮಾನ್ಯ ಪಾಸ್ ಹೊಂದಿರುವ ಹಾಗೂ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವ ಜನರಿಗೆ ಎರಡು ನಗರಗಳ ನಡುವೆ ಹೋಗಲು ಅವಕಾಶ ನೀಡಲಾಗುವುದು ಎಂದು ಪಾಂಡೆ ಹೇಳಿದರು.

ಲಾಕ್‌ಡೌನ್ ಆದೇಶಗಳಲ್ಲಿ ಯಾವುದೇ ವಿನಾಯತಿ ಇಲ್ಲ, ಜಿಲ್ಲೆಯ ಕೈಗಾರಿಕೆಗಳು ಮತ್ತು ಕಚೇರಿಗಳು ತೆರೆದಿರುವುದಿಲ್ಲ. ಲಾಕ್‌ಡೌನ್ ಘೋಷಿಸಿದಾಗ ಹಿಂದಿನ ಆದೇಶಗಳು ಮತ್ತು ಷರತ್ತುಗಳು ಅದೇ ಸ್ಥಿತಿಯಲ್ಲಿರುತ್ತವೆ ಎಂದು ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights