ವಿಜಯಪುರದ ವೃದ್ಧ ಕೊರೊನಾದಿಂದ ಮೃತ : ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ!

ರಾಜ್ಯದಲ್ಲಿ ಕೊರೋನಾದಿಂದಾಗಿ ಸಾಯುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಲಾಕ್ ಡೌನ್ ನನ್ನು ಮೇ 3ರರವರೆಗೂ ಮುಂದುವರೆಸಲಾಗಿದೆ. ಇಂದು ಕೊರೋನಾ ಸೋಂಕಿಗೆ ವಿಜಯಪುರದಲ್ಲಿ 69 ವರ್ಷದ ವ್ಯಕ್ತಿ ಬಲಿಯಾಗಿದ್ದು, ಆ ಮೂಲಕ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಜೊತೆಗೆ 2 ದಿನದ ಅಂತರದಲ್ಲಿ ಮೂರು ಮಂದಿ ಪ್ರಾಣ ತೆತ್ತಿದ್ದಾರೆ. ಈ ಮೂರು ಜನ ಕಲಬುರಗಿ, ಬೆಂಗಳೂರು ಹಾಗೂ ವಿಜಯಪುರದವರಾಗಿದ್ದಾರೆ. ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ವಿಜಯಪುರದ 69 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು. ಪತ್ನಿಗೆ ಕೊರೊನಾ ಬಂದಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈಗ ಪರೀಕ್ಷಾ ವರದಿ ಪ್ರಕಟವಾಗಿದ್ದು ಕೊರೊನಾದಿಂದ ಮೃತಪಟ್ಟಿರುವುದು ದೃಢವಾಗಿದೆ.

ಮುಂಜಾಗೃತವಾಗಿ ರಾಜ್ಯದೆಲ್ಲೆಡೆ ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಸೂಚಿಸಿದ್ದು, ಸೋಂಕು ಪ್ರಕರಣಗಳು ಅಧಿಕವಾಗಿ ಕಂಡುಬಂದಿಲ್ಲಿ ಅಂತಹ ಸ್ಥಳಗಳನ್ನು ಸೀಲ್ಡ್ ಡೌನ್ ಮಾಡಲು ಸೂಚಿಸಿದ್ದಾರೆ.  ಮೇ 3 ರರವೆರೆಗೂ ಹೊಸದಾಗಿ ಯಾವುದೇ ಪ್ರಕರಣಗಳು ಕಂಡುಬರದೇ ಇದ್ದಲ್ಲಿ ಲಾಕ್ ಡೌನ್ ಸಡಿಲಗೊಳಿಸುವುದಾಗಿ  ಮೋದಿ ತಿಳಿಸಿದ್ದಾರೆ. ಇದರಿಂದಾಗಿ ದೇಶದಾದ್ಯಂತ ಅಂತಾರಾಷ್ಟ್ರೀಯ ಮತ್ತು ದೇಶೀಯ ವಾಯು ವಿಮಾನ ಸಾರಿಗೆ ವ್ಯವಸ್ಥೆಯನ್ನು ಮೇ 03 ರ ಮಧ್ಯರಾತ್ರಿ 11.59 ರ ವರೆಗೆ ರದ್ದು ಮಾಡಲಾಗಿದ್ದು, ಭಾರತೀಯ ರೈಲ್ವೆ ಸೇವೆಯನ್ನು ನಿರ್ದಿಷ್ಟ ಅವಧಿಯ ವರೆಗೆ ಬುಕ್‌ ಮಾಡಲಾಗಿದ್ದ ಎಲ್ಲಾ ಟಿಕೆಟ್‌ಗಳನ್ನೂ ರದ್ದು ಮಾಡಲಾಗಿದೆ.

ಒಟ್ಟಿನಲ್ಲಿ ಸರ್ಕಾರ ಕೊರೊನಾ ತಡೆಗೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಆದರೆ ಮುಂದೆ ಲಾಕ್  ಡೌನ್ ಸಡಿಲಗೊಳ್ಳುತ್ತಾ? ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *