ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೋಗಿ ನಾಯಿಪಾಡು ಪ್ರಕರಣ : ಆಸ್ಪತ್ರೆ ಸಿಬ್ಬಂದಿ ವಿವಸ್ತ್ರಗೊಳಿಸಿ ಬಿಟ್ಟಿದ್ದ ರೋಗಿ ಸಾವು…!

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೋಗಿ ಪಾಡು ಅಕ್ಷರಶ: ನಾಯಿಪಾಡಾಗಿ ಹೋಗಿದೆ. ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಹೌದು… ಜಿಲ್ಲಾಸ್ಪತ್ರೆಯಲ್ಲಿ ನ. 18 ರಂದು 230ನೇ ವಾರ್ಡ್ ನಲ್ಲಿ ಬೆತ್ತಲೆಗೊಳಿಸಿ ಮಲಗಿಸಲಾಗಿದ್ದ ರೋಗಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾನೆ. ರೋಗಿ ರಾಜು ಪಾಟೀಲ ಸಾವಿಗೀಡಾದವನು. ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ವಿವಸ್ತ್ರವಾಗಿ ಬಿಟ್ಟು ಮರೆತಿದ್ದು,  ಅದೇ ವಾರ್ಡ್ ನ ಮತ್ತೊಂದು ಬೆಡ್ ನಲ್ಲಿ ನಾಯಿ ಠಿಕಾಣಿ ಹೂಡಿದ್ದ ಕಂಡುಬಂದಿದೆ.

ಲೂಸ್ ಮೋಷನ್(ಅತಿಸಾರ ಬೇದಿ)ಚಿಕಿತ್ಸೆಗಾಗಿ ನ. 14 ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರಾಜು ಪಾಟೀಲನನ್ನು 108 ಸಿಬ್ಬಂದಿ ವಿಜಯಪುರ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದ್ದರು. ಮಾನಸಿಕವಾಗಿ ಬಳಲುತ್ತಿದ್ದ ರವಿ ಪಾಟೀಲನನ್ನು ಧಾರವಾಡಕ್ಕೆ ಕಳುಹಿಸಲು ವೈದ್ಯರು ಸಜ್ಜಾಗಿದ್ದರು. ಅಂದೇ ರಾತ್ರಿ ಉಸಿರಾಟದ ತೊಂದರೆಯಿಂದ ರೋಗಿ ಮೃತಪಟ್ಟಿದ್ದಾನೆ.

ಬೇಜವಾಬ್ದಾರಿ ಪ್ರದರ್ಶಿಸಿದ 8 ಜನ ಸಿಬ್ಬಂದಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶರಣಪ್ಪ ಕಟ್ಟಿ ನೊಟೀಸ್ ನೀಡಿದ್ದಾರೆ. ಉಪಚರಿಸುವಲ್ಲಿ ನಿರ್ಲಕ್ಯ ವಹಿಸಿದ ನರ್ಸ್ ಹಾಗೂ ಸೂಪರವೈಸರ್ ಗಳಿಗೆ ಡಾ. ಶರಣಪ್ಪ ಕಟ್ಟಿ ನೊಟೀಸ್ ಜಾರಿ ಮಾಡಿದ್ದಾರೆ.

ಜಿಲ್ಲಾಸ್ಪತ್ರೆ ಸಿಬ್ಬಂದಿಯಿಂದ ಸೂಕ್ತ ಚಿಕಿತ್ಸೆ ನೀಡದ ಆರೋಪ ಈಗ ಕೇಳಿ ಬರುತ್ತಿದೆ. ಅಮಾನವೀಯ ಘಟನೆಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights