‘ವಿಶ್ವನಾಥ್ ನೀವು ಬ್ಲೂ ಬಾಯ್.!! ನೀವೂ ಆ ಬ್ಲೂ ಫಿಲ್ಮ್‌ಹೀರೋ.!’ ಸಾ.ರಾ. ಮಹೇಶ್ ಕೆಂಡಾಮಂಡಲ
ಅನರ್ಹ ಶಾಸಕ ಹೆಚ್. ವಿಶ್ವನಾಥ್ ವಿರುದ್ದ ಮಾಜಿ ಸಚಿವ ಸಾ.ರಾ. ಮಹೇಶ್ ಕೆಂಡಾಮಂಡಲಗೊಂಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿರುವ ಅವರು, ವಿಶ್ವನಾಥ್ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ತಿರಸ್ಕೃತಗೊಂಡಿದ್ದ ವಿಶ್ವನಾಥ್ ಅವರಿಗೆ ಜೆಡಿಎಸ್ ಪುನರ್ವಸತಿ ಕಲ್ಪಿಸಿತ್ತು ಎಂದಿರುವ ಅವರು, 70 ನೇ ವಯಸ್ಸಿನಲ್ಲಿ ನಟಿಯೊಂದಿಗೆ ಮಾತನಾಡಿದ್ದ ಕುರಿತು ವಿಶ್ವನಾಥ್ ಯಾಕೆ ಬಾಯ್ಬಿಡುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಬ್ಲೂ ಬಾಯ್ ಅಲ್ಲ ಬ್ಲೂ ಫಿಲಂ ಹೀರೋ ಎಂದು ಹೇಳಿದ ಸಾ.ರಾ. ಮಹೇಶ್, ವಿಶ್ವನಾಥ್ ಯೋಗ್ಯತೆ ಏನೆಂದು ಎಲ್ಲರಿಗೂ ಗೊತ್ತು ಎಂದಿದ್ದಾರೆ.
ಯಾರ ವಿರುದ್ದವೂ ನಾನು ವೈಯಕ್ತಿಕ ಟೀಕೆ ಮಾಡುವುದಿಲ್ಲವೆಂದು ಹೇಳುತ್ತಲೇ ವಿಶ್ವನಾಥ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ ಸಾ.ರಾ. ಮಹೇಶ್, ವಿಶ್ವನಾಥ್ ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಂತೆ ಜೀವಿಸಿದ್ದರೆ ನಾನು ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಕುಟುಕಿದ್ದಾರೆ.