ಶಾಲೆ ತೆರೆಯಲು ರಾಜ್ಯ, ಕೇಂದ್ರಗಳ ತಿಕ್ಕಾಟ; ಹೊಸ ಮಾರ್ಗಸೂಚಿಗೆ ಕಸರತ್ತು!
ದೇಶಾದ್ಯಂತ ಸೆಪ್ಟಂಬರ್ 1ರಿಂದ ಶಾಲೆಗಳನ್ನು ಪುನರಾರಂಭಿಸುವ ಚಿಂತನೆಗೆ ಕೇಂದ್ರ ಆರೋಗ್ಯ ಇಲಾಖೆ ಸಹಮತ ವ್ಯಕ್ತಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ. ಈ ಮೊದಲು ಸೆಪ್ಟೆಂಬರ್ 1 ರಿಂದ ಶಾಲೆ ಪುನರಾರಂಭಿಸುವ ಬಗ್ಗೆ ಕೇಂದ್ರ ಮಾನವ ಸಂಪದಭಿವೃದ್ಧಿ ಇಲಾಖೆಯು ಚಿಂತನೆ ನಡೆಸಿತ್ತು, ಆದರೆ ಇದಕ್ಕೆ ಸಹಮತ ವ್ಯಕ್ತಪಡಿಸದ ಕೇಂದ್ರ ಆರೋಗ್ಯ ಇಲಾಖೆಯು ಅಗಸ್ಟ್ 30ರ ವೇಳೆಗೆ ಕೋವಿಡ್-19 ಸೋಂಕಿತರ ಸಂಖ್ಯೆಯು 30 ಲಕ್ಷ ಗಡಿ ಮುಟ್ಟುವ ನಿರೀಕ್ಷೆಯಿದೆ. ಹಾಗಾಗಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ಸೆಪ್ಟೆಂಬರ್ 1ರಿಂದ ಶಾಲೆ ಪುನರಾರಂಭಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯ-ಕೇಂದ್ರಗಳ ನಡುವೆ ತಿಕ್ಕಾಟ ಉಂಟಾಗಿದೆ.
ವಿದೇಶಗಳಲ್ಲಿ ಕೂಡ ಶಾಲೆ, ಕಾಲೇಜು ಪುನರಾರಂಭಿಸಿದ ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸೋಂಕು ಹರಡಿ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಪುನಃ ಶಾಲೆಗಳನ್ನು ಮುಚ್ಚಬೇಕಾಯಿತು. ಈ ರೀತಿಯ ಉದಾಹರಣೆಗಳು ನಮ್ಮ ಮುಂದಿರುವಾಗ ಸೆಪ್ಟೆಂಬರ್ 1 ರಿಂದ ಶಾಲೆ ಪುನರಾರಂಭಿಸುವುದು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಮುಂದಿನ ತಿಂಗಳಿಂದ ಕರ್ನಾಟಕ ರಾಜ್ಯ ಸರಕಾರ ಶಾಲೆಗಳನ್ನು ಪುನರಾರಂಭಿಸಲು ಚಿಂತನೆ ನಡೆಸಿತ್ತು… ಅದಕ್ಕಾಗಿ ಯೋಜನೆ ರೂಪಿಸಲಾಗಿತ್ತು.. ಅದರ ವರದಿ ಇಲ್ಲಿದೆ..
ಕೊರೊನಾ ವೈರಸ್ ಕಾಟದಿಂದ ರಾಜ್ಯ ನಾದಾನವಾಗಿ ಹೊರಬರುತ್ತಿದೆ, ಕಾರ್ಕಾನೆಗಳು ಕಛೇರಿಗಳು ಆರಂಭವಾಗಿವೆ, ಅಂಗಡಿ ಮುಂಗಟ್ಟುಗಳು ತೆರೆದಿವೆ, ಈಗ ಮುಚ್ಚಿದ ಶಾಲೆಗಳ ಪುನಆರಂಭಿಸುವ ಕಾಲ ಹತ್ತಿರವಾಗುತ್ತಿದೆ.. ಅದಕ್ಕಾಗಿ ಸಿದ್ಧವಾಗ್ತಿದೆ ಮಾರ್ಗಸೂಚಿ, ಮೊದಲು SSLC ಮಕ್ಕಳಿಗಾಗಿ ತರಗತಿಗಳು ಆರಂಭವಾಗಲಿವೆ, ನಂತರ ಬಳಿಕ 6-9 ಕ್ಲಾಸ್ ಆರಂಭವಾಗಲಿವೆ..
ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿರುವ ಶಿಕ್ಷಣ ಚಟುವಟಿಕೆಯ ಮರು ಸ್ಥಾಪನೆಯ ಪ್ರಯತ್ನ ಜೋರು ಪಡೆದುಕೊಂಡಿದೆ. ಕೊರೋನಾ ವೈರಸ್ ಕಾರಣ ಬಾಗಿಲು ಮುಚ್ಚಿರುವ ಶಾಲಾ-ಕಾಲೇಜುಗಳ ಪುನಾರಂಭದ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಸಂಬಂಧ ವಿಸ್ತೃತ ಮಾರ್ಗಸೂಚಿ ಸಿದ್ಧವಾಗುತ್ತಿದ್ದು, ಕೇಂದ್ರ ಸರಕಾರದ ಅನ್ಲಾಕ್ 4 ಘೋಷಣೆಯಲ್ಲಿ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ.
ಇದರಂತೆ ಮುಂದಿನ ತಿಂಗಳಿಂದ ಮೊದಲು SSLC ಮತ್ತು PUC ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಇದಾಗಿ ಒಂದೆರಡು ವಾರಗಳ ಬಳಿಕ 6-9ನೇ ತರಗತಿಗಳು ಆರಂಭಿಸಲು ಕೇಂದ್ರ ಸರಕಾರ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಸದ್ಯದ ಸಂದರ್ಭದಲ್ಲಿ ಪ್ರೈಮರಿ ಮತ್ತು ಪ್ರೈಮರಿ ಪೂರ್ವ ಶಾಲೆಗಳು ಆರಂಭವಾಗದು, ಅದೇನಿದ್ದರೂ ನವೆಂಬರ್ ತಿಂಗಳಲ್ಲಿ ಕೈಗೂಡಬಹುದು ಎನ್ನಲಾಗುತ್ತಿದೆ.
ಈ ಮಧ್ಯೆ ತರಗತಿಗಳ ಅವಧಿ ತಲಾ ಮುರು ಗಂಟೆ ಇರಲಿದ್ದು ದಿನಕ್ಕೆ ಎರಡು ಸೆಕ್ಷೆನ್ಗಳ ಅರ್ಧ ವಿದ್ಯಾರ್ಥಿಗಳಿಗಷ್ಟೇ ಬೋಧನೆ ಇರಲಿದೆ. ಪ್ರತಿ ಮೂರು ಗಂಟೆಗೊಮ್ಮ ತರಗತಿಗಳನ್ನು ಸಿಂಪಡಿಕೆಗೆ ಒಳಪಡಿಸಲಾಗುತ್ತದೆ. ಒಂದು ಕ್ಲಾಸಿನಲ್ಲಿ ನಾಲ್ಕು ವಿಭಾಗಗಳಿದ್ದರೇ (ಸೆಕ್ಷನ್) ಒಂದು ವಿಭಾಗದ ಅರ್ಧದಷ್ಟು ವಿದ್ಯಾರ್ಥಿಗಳು ಒಂದು ಬ್ಯಾಚ್ (ಬೆ. 8-11 ಗಂಟೆ) ಹಾಗೂ ಮತ್ತೊಂದು ವಿಭಾಗದ ಅರ್ಧ ವಿದ್ಯಾರ್ಥಿಗಳು ಎರಡನೇ ಬ್ಯಾಚಿನಲ್ಲಿ (12-3 ಗಂಟೆ) ಕಲಿಯಲಿದ್ದಾರೆ.
ಇದು ಆವರ್ತನಗೊಳ್ಳಲಿದ್ದು ಮಾರನೇ ದಿನ ಮತ್ತೆರಡು ವಿಭಾಗಗಳ ವಿದ್ಯಾರ್ಥಿಗಳು ಇದೇ ರೀತಿ ಶಾಲೆಗೆ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ಶಾಲೆಗಳು ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳ ಮಾರ್ಗಸೂಚಿಯನ್ನಷ್ಟೇ ಹೊರಡಿಸಲಿದೆ. ಶಾಲಾ ಕಾಲೇಜು ಆರಂಭದ ಸಮಯ ಸಂದರ್ಭವನ್ನು ನಿರ್ಧರಿಸುವ ಹಕ್ಕನ್ನು ಆಯಾ ರಾಜ್ಯಗಳಿಗೆ ಬಿಡಲಾಗುವುದು ಎಂದು ವರದಿ ತಿಳಿಸಿದೆ.
ಈ ಮಧ್ಯೆ ಆಂಧ್ರ ಪ್ರದೇಶ, ಅಸ್ಸಾಂ ಸೇರಿದಂತೆ ಕೆಲವು ರಾಜ್ಯಗಳು ಮುಂದಿನ ತಿಂಗಳಿಂದ ಶಾಲಾ ಕಾಲೇಜು ಆರಂಭಕ್ಕೆ ಅನುಮತಿ ನೀಡಿವೆ. ಇನ್ನು ಕೇಂದ್ರ ಮಾರ್ಗಸೂಚಿ ಆಧರಿಸಿ ಉಳಿದ ರಾಜ್ಯಗಳೂ ಮುಂದಡಿ ಇಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಸೋಮವಾರ SSLC ಪರೀಕ್ಷಾ ಪಲಿತಾಂಶ ಹೊರಬಿಳಲಿದೆ...
ಇದನ್ನೂ ಓದಿ: ಹಳ್ಳಿಗಳಲ್ಲಿ ಸಿಗಲಿದೆ 10 ರೂಗೆ ಎಲ್ಇಡಿ ಬಲ್ಪ್