ಸಚಿವ ಪ್ರಭು ಚವ್ಹಾಣ್ ಕಾರಿಗೆ ಲಘು ಅಪಘಾತ : ತಪ್ಪಿದ ಭಾರೀ ಅನಾಹುತ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಪಯಣಿಸುತ್ತಿದ್ದ  ಕಾರು ಅಪಘಾತವಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಅಮೃತ್​ ಮಹಲ್​​ ಕಾವಲ್​ಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಚಿವ ಪ್ರಭು ಚವ್ಹಾಣ್​ ಅವರ ಕಾರಿಗೆ ಹಿಂಬದಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ.

ಚನ್ನರಾಯಪಟ್ಟಣದ ರಾಯಸಂದ್ರದ ಬಳಿ ಈ ಘಟನೆ ನಡೆದಿದ್ದು, ಕಾರು ಜಖಂಗೊಂಡಿದ್ದು, ಯಾವುದೇ ಅನಾಹುತ ನಡೆದಿಲ್ಲ.ಅಮೃತ್ ಮಹಲ್ ಕಾವಲ್ ನಲ್ಲಿ 230 ಹಸುಗಳು ಕೆಸರಿಗೆ ಸಿಲುಕಿದ್ದ ಪ್ರಕರಣದ ಹಿನ್ನೆಲೆ ಅವರು, ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಅಮೃತ ಮಹಲ್ ಕಾವಲ್​ಗೆ ಭೇಟಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅವರು, ಹಸುಗಳು ಕೆಸರಿನಲ್ಲಿ ಹೇಗೆ ಸಿಲುಕಿಕೊಂಡವು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ  ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ವಿಶೇಷ ತಳಿಯ ಅಮೃತ್ ಮಹಲ್ ಹಸುಗಳ ಸಂರಕ್ಷಣೆಗೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಕೇಂದ್ರಕ್ಕೆ ಬೇಕಾದ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವುದಾಗಿ ತಿಳಿಸಿದರು.ಇನ್ನು ಬೆಂಗಳೂರಿಗೆ ಹೋದ ತಕ್ಷಣ ಘಟನೆಯಲ್ಲಿ ಬೇಜಾವಬ್ದಾರಿವಹಿಸಿದ ಮೂವರು ಅಧಿಕಾರಿಗಳನ್ನು ಅಮಾನತ್ತುಗೊಳಿಸುವ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights