ಸಾಂಪ್ರದಾಯಿಕ ಹಳ್ಳಿ ಸೊಗಡಿನ ಶೈಲಿಯಲ್ಲಿ ರೈತರ ದಿನಾಚರಣೆ…

ದೇಶಕ್ಕೆ ಅನ್ನ ನೀಡುವ ಅನ್ನದಾತ, ದೇಶದ ಬೆನ್ನೆಲುಬು ಶ್ರಮ ಜೀವಿ ರೈತರ ದಿನಾಚರಣೆಯನ್ನು ಬೆಂಗಳೂರು ಹೊರವಲಯ ಆನೇಕಲ್ನಲ್ಲಿ ಸಾಂಪ್ರದಾಯಿಕ ಸೊಗಡಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಇಲ್ಲಿನ ಮಾಯಸಂದ್ರ ಗ್ರಾಮದ ಸಹಜ ಸಾವಯವ ಕೃಷಿ ಸಂಘದ ವತಿಯಿಂದ ಆಚರಣೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ.

ಈ ಹಿಂದೆ ಹೆಚ್ಚು ಬಳಕೆ ಮಾಡುತ್ತಿದ್ದ ಈಗ ಅಪರೂಪವಾದ ರೈತರ ಎತ್ತಿನ ಬಂಡಿ, ರಾಗಿ ಕಣಜ, ನೇಗಿಲು, ಅಲುವೆ, ಕುಂಟೆಗೆ ಪೂಜೆ ಮಾಡುವ ಮೂಲಕ ಆಚರಣೆ ಮಾಡಿದ್ದಾರೆ. ರೈತರ ದಿನಾಚರಣೆ ಅಂಗವಾಗಿ ಕೃಷಿ ಉತ್ಪನ್ನಗಳನ್ನೇ ಬಳಸಿಕೊಂಡು ರೈತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ಸಹ ವಿತರಣೆ ಮಾಡಿದ್ದಾರೆ. ರೈತರು ಕೃಷಿಯಿಂದ ರೈತರು ಅದ್ರಲ್ಲು ಯುವ ಸಮೂಹ ವಿಮುಖರಾಗುತ್ತಿದ್ದಾರೆ. ಜೊತೆಗೆ ರಾಸಾಯನಿಕ ಗೊಬ್ಬರ ಬಳಕೆ ಅಧಿಕವಾಗುತ್ತಿದ್ದು, ನಾವು ಸೇವಿಸುವ ಸೊಪ್ಪು, ತರಕಾರಿ, ಹಣ್ಣು ಗಳು ವಿಷವಾಗುತ್ತಿದೆ.

ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ತಮ್ಮ ಕುಟುಂಬ ಬಳಕೆಗಾದರು ಮನೆ ಅಂಗಳದಲ್ಲಿ ಸಾವಯವ ಕೃಷಿಯಿಂದ ಬೆಳೆದ ಹಣ್ಣು ತರಕಾರಿ ಸೇವಿಸಲಿ ಎಂಬ ಉದ್ದೇಶ ಜೊತೆಗೆ ಕೃಷಿಯಿಂದ ವಿಮುಖವಾಗುತ್ತಿರುವ ರೈತರನ್ನು ಆಕರ್ಷಿಸಲು ಇಂತಹ ದಿನಾಚರಣೆಗಳು ಆಚರಿಸಬೇಕು ಎಂದು ರೈತ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ರೈತ ಮುರುಗೇಶ್, ಕೃಷಿ ತಜ್ಞ ಎನ್ ಆರ್ ಶೆಟ್ಟಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights