Fact Check: ಈ ವೀಡಿಯೊ ಸಿಎಂ ಕೇಜ್ರಿವಾಲ್ ಅವರ ಗೃಹಬಂಧನಕ್ಕೆ ಸಂಬಂಧಿಸಿದಿಯಾ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿಯಾದ ಸಂದರ್ಭದಲ್ಲಿ ದೆಹಲಿ ಪೊಲೀಸರು ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಡಿಸೆಂಬರ್ 8 ರಂದು ಆರೋಪಿಸಿದೆ. ಆದರೆ ದೆಹಲಿ ಪೊಲೀಸರು ಎಎಪಿ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. ಅವುಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ಕರೆದಿದ್ದಾರೆ.

ಈ ಮಧ್ಯೆ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ರಾಘವ್ ಚಾಧಾ ಮತ್ತು ಇತರರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಎತ್ತುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೇಜ್ರಿವಾಲ್ ಅವರ ಗೃಹಬಂಧನದ ವಿರುದ್ಧ ಎಎಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಇದೇ ಎಂದು ಹೇಳಲಾಗುತ್ತಿದೆ.

ವೈರಲ್ ವೀಡಿಯೊದ ಶೀರ್ಷಿಕೆ, “ಮೋದಿಯವರು ಭಯಭೀತರಾದಾಗಲೆಲ್ಲಾ ಪೊಲೀಸರನ್ನು ಮುಂದಿಡುತ್ತಾರೆ. ಸೋಲಿನ ಭೀತಿಯಿಂದಾಗಿ ನಾವು ಅಂತಹ ಗೂಂಡಾಗಿರಿಯನ್ನು ಸಹಿಸುವುದಿಲ್ಲ” ಎಂದಿದೆ.

https://www.facebook.com/watch/RajivGoelAAP/

 

ಆದರೆ ವೈರಲ್ ವೀಡಿಯೋ ಪಕ್ಷದ ಕಾಲ್ ಸೆಂಟರ್ಗಳಲ್ಲಿ ದೆಹಲಿ ಪೊಲೀಸರು ನಡೆಸಿದ ಆರೋಪದ ವಿರುದ್ಧ ಎಎಪಿ 2019 ರಲ್ಲಿ ನಡೆಸಿದ ಪ್ರತಿಭಟನೆಯಿಂದ ತೆಗೆಯಲಾಗಿದೆ. ಇದನ್ನು ಮಾರ್ಚ್ 15, 2019 ರಂದು ಎಎಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವೈರಲ್ ವೀಡಿಯೊದಿಂದ ಸ್ಕ್ರೀನ್‌ಶಾಟ್ ಮತ್ತು ಎಎಪಿಯ ಟ್ವಿಟರ್ ಪೋಸ್ಟ್‌ನ ಚಿತ್ರದ ನಡುವಿನ ಚಿತ್ರ ಹೋಲಿಕೆ ಇಲ್ಲಿದೆ.

ಆದರೆ ಟ್ವೀಟ್‌ನಲ್ಲಿ ಪ್ರತಿಭಟನೆಯ ಬಗ್ಗೆ ಯಾವುದೇ ವಿವರ ನೀಡಿಲ್ಲ. ಪಾಲ್ ಪಾಲ್ ನ್ಯೂಸ್‌ನ ಪರಿಶೀಲಿಸಿದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಸಹ ನಾವು ಕಾಣಬಹುದು. ಪಕ್ಷದ ಕಾಲ್ ಸೆಂಟರ್ಗಳಲ್ಲಿ ಪೊಲೀಸ್ ಪಡೆ ನಡೆಸಿದ ದಾಳಿಗಳಿಗೆ ಸಂಬಂಧಿಸಿದಂತೆ ಎಎಪಿ ನಾಯಕರು ಕೆಲವು ಅಧಿಕಾರಿಗಳೊಂದಿಗೆ ಮಾತನಾಡುವುದನ್ನು ಕೇಳಬಹುದು.

ಪಾಲ್ ಪಾಲ್ ನ್ಯೂಸ್ ನ ಪ್ರಧಾನ ಸಂಪಾದಕ ಖುಸ್ಬೂ ಅಕ್ತರ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿಡಿಯೋವನ್ನು ಅವರ ಸಿಬ್ಬಂದಿ ಚಿತ್ರೀಕರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. “ಈ ವಿಡಿಯೋ ಮೇ 2019 ರಂದು ತೆಗೆಯಲಾಗಿದೆ. ಎಎಪಿ ನಾಯಕರು ದೆಹಲಿಯ ಚುನಾವಣಾ ಆಯೋಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದಾಗ ಅದನ್ನು ನಮ್ಮ ಸಿಬ್ಬಂದಿಯೊಬ್ಬರು ಸೆರೆಹಿಡಿದಿದ್ದಾರೆ. ದೆಹಲಿ ಪೊಲೀಸರು ತಮ್ಮ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ಮೂಲ ವೀಡಿಯೊದ ಕೊನೆಯಲ್ಲಿ, ಎಎಪಿ ನಾಯಕರು ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದನ್ನು ನೀವು ನೋಡಬಹುದು, ”ಎಂದು ಅಕ್ತರ್ ಹೇಳಿದರು.

ಕೇಜ್ರಿವಾಲ್ ಅವರ ಗೃಹಬಂಧನದ ನಂತರ, ಡಿಸೆಂಬರ್ 8 ರಂದು ಎಎಪಿ ಮುಖಂಡರು ತಮ್ಮ ನಿವಾಸದ ಹೊರಗೆ ಧರಣಿ ಪ್ರತಿಭಟನೆ ನಡೆಸಿದ್ದರು. ಸುದ್ದಿ ಸಂಸ್ಥೆ ಎಎನ್‌ಐ ಅಪ್‌ಲೋಡ್ ಮಾಡಿದ ಈ ಪ್ರತಿಭಟನೆಯ ವೀಡಿಯೊವನ್ನು ಕೆಳಗೆ ನೋಡಬಹುದು.

ಹೀಗಾಗಿ, ವೈರಲ್ ವಿಡಿಯೋ ಒಂದು ವರ್ಷಕ್ಕಿಂತ ಹಳೆಯದಾಗಿದೆ. ಇದು ದೆಹಲಿ ಸಿಎಂ ಕೇಜ್ರಿವಾಲ್ ಅವರ ಗೃಹಬಂಧನಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights