ಸಾಕುಪ್ರಾಣಿ ಸಂಬಂಧವನ್ನ ಸಾರುವ ‘ನಾನು ಮತ್ತು ಗುಂಡ’ ಸಿನಿಮಾ ರಿಲೀಸ್..!!!

ಸಾಕು ಪ್ರಾಣಿಗಳು ಅಂದ್ರೆ ಮನುಷ್ಯರಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಜನ ನಮ್ಮಲ್ಲಿ ಸಾಕಷ್ಟು ಇದ್ದಾರೆ. ಅದ್ರಲ್ಲೂ ನಾಯಿ ಅಂದರೆ ಹೇಳಬೇಕಾ..? ಸಾಕು ಪ್ರಾಣಿ ನಾಯಿಯೊಂದಿಗೆ ಇರುವ ಸಂಬಂಧ ಮನುಷ್ಯರೊಂದಿಗೆ ಇರುವುದಕ್ಕಿಂತ ಹೆಚ್ಚು ಗಟ್ಟಿತನ ಹೊಂದಿರುತ್ತದೆ ಎನ್ನುವ ಪ್ರಾಣಿಪ್ರಿಯರಿಗೆ ‘ನಾನು ಮತ್ತು ಗುಂಡ’ ಸಿನಿಮಾ ಮತ್ತಷ್ಟು ಪುಷ್ಟಿ ನೀಡಲಿದೆ.

ಹೌದು… ಇಂತಹ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಿನಿಮಾವೊಂದು ತೆರೆಗೆ ಬರಲಿದೆ. ಅದುವೇ ‘ನಾನು ಮತ್ತು ಗುಂಡ…’ ಈ ಸಿನಿಮಾದಲ್ಲಿ ಗುಂಡ ಅನ್ನೋದು ಸಾಕು ನಾಯಿಯ ಹೆಸರು.

ನಾನು ಮತ್ತು ಗುಂಡ… ಸ್ಯಾಂಡಲ್ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಿನಿಮಾ. ಫಸ್ಟ್ ಲುಕ್ ನಿಂದ, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಸುದ್ದಿ ಮಾಡಿದ ಸಿನಿಮಾ. ಕಾಮಿಡಿ ಕಿಲಾಡಿಗಳು ಖ್ಯಾತಿ, ಸದ್ಯ ಚಿತ್ರರಂಗದಲ್ಲಿ ಸದ್ಯ ಬ್ಯುಸಿಯೆಸ್ಟ್ ಕಾಮಿಡಿ ನಟನಾಗಿ ಮಿಂಚ್ತಿರೋ ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು ಹಾಗೂ ಸಿಂಬಾ ಅನ್ನೋ ಶ್ವಾನ ಅಭಿನಯಿಸಿರೋ ಸಿನಿಮಾ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ.

ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಕಥಾವಸ್ತುವನ್ನೇ ಹೀರೋವನ್ನಾಸಿಕೊಂಡು ಶ್ವಾನವನ್ನೇ ಕಥಾ ಮುಖ್ಯ ಪಾತ್ರಧಾರಿಯನ್ನಾಗಿಕೊಂಡು ಮಾಡಿರೋ ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದ್ದು, ಚಿತ್ರ ಮೇಲೆ ಭರವಸೆ ಹೆಚ್ಚಿಸಿದೆ.

ನಾನು ಮತ್ತು ಗುಂಡ ಚಿತ್ರ ಸದ್ಯ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ, ನಾನು ಮತ್ತು ಗುಂಡ ಚಿತ್ರವನ್ನ ನೋಡಿ, ಮೆಚ್ಚಿಕೊಂಡಿರೋ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ಕೊಟ್ಟು ಇದು ಎಲ್ಲಾ ವರ್ಗದವರು ನೋಡುವಂತಹ ಸಿನಿಮಾ. ಭಾವನಾತ್ಮಕ ಸಂಬಂಧವಿರೋ ಅದ್ಭುತ ಚಿತ್ರವೆಂದು ಬಣ್ಣಿಸಿದೆ. ಅಂದ್ಹಾಗೆ ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ನ ಜಾಕ್ ಮಂಜು ನಾನು ಮತ್ತು ಗುಂಡ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ.

ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಠ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ಜಾಕ್ ಮಂಜು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾವನ್ನ ತೆಗೆದುಕೊಂಡಿದ್ದು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಹಂಚಿಕೊಳ್ಳೋ ಧಾವಂತದಲ್ಲಿದ್ದು, ಟ್ರೈಲರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ.

 

https://youtu.be/6Yc5AY2z9ng

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights