ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ ಬೃಹತ್ ಬೈಸಿಕಲ್…!

ಮುಂದೆ ನಿಂತರೆ ಕಾಣೋ ಬೈಸಿಕಲ್ ಅನ್ನು ಆಕಾಶದೆತ್ತರಕ್ಕೆ ತಲೆ ಎತ್ತಿ ನೋಡಬೇಕು ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು. ಆಶ್ಚರ್ಯ ಆದ್ರೂ ಇಂಥಹದ್ದೊಂದು ಬೈಸಿಕಲ್ ಸಾಕಷ್ಟು ವೈರಲ್ ಆಗಿದೆ.

ಹೌದು..  ವ್ಯಕ್ತಿಯೊಬ್ಬರು ತಯಾರಿಸಿರುವ ಬೃಹತ್ ಬೈಸಿಕಲ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಟ್ವಿಟರ್ ನಲ್ಲಿ 55 ಸೆಕೆಂಡ್ ಗಳ ಈ ವಿಡಿಯೋ ಹಂಚಿಕೆಯಾಗಿದೆ. ಇದರಲ್ಲಿ ಅತಿ ಎತ್ತರದ ಸೈಕಲ್‌ ಇದ್ದು ವ್ಯಕಿಯೊಬ್ಬರು ಇದನ್ನು ಬಹು ಸುಲಭವಾಗಿ ಹತ್ತುವ, ಇಳಿಯುವ ಮತ್ತು ತುಳಿಯುವ, ತಿರುಗಿಸುವ ಸಾಹಸ ಪ್ರದರ್ಶಿಸಿರುವುದು ನೋಡುಗರ ಮೆಚ್ಚುಗೆ ಪಡೆದಿದೆ. ಇಷ್ಟು ಎತ್ತರದ ಬೈಸಿಕಲ್ ಏರುವುದು ಈತನಿಗೆ ಸುಲಭದ ಕೆಲಸ.

ಅಷ್ಟೇ ಅಲ್ಲ ಇದನ್ನು ಅನ್ವೇಷಣೆ ಮಾಡಿರುವುದು ಕೂಡಾ ಹೊಗಳಿಕೆಗೆ ಪಾತ್ರವಾಗಿದೆ. ನವೆಂಬರ್ 29ರಂದು ಟ್ವಿಟರ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ ಒಂದು ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 39 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಗಿನ್ನಿಸ್ ದಾಖಲೆ ಪ್ರಕಾರ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ರಿಚಿ ಟ್ರಿಂಬಲ್ ಎಂಬುವರು 6.15 ಮೀಟರ್ ಎತ್ತರದ ಬೈಸಿಕಲ್ ನಿರ್ಮಿಸಿದ್ದರು.

Basikal tu style satu hal , cara dia naik tu lagi satu hal bapak ahhh

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights