ಸೆ. 24 ರಂದು ಬೆಳಗಾವಿಯಲ್ಲಿ‌ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – ಎಂ. ಬಿ. ಪಾಟೀಲ್

ಪ್ರವಾಹ ಸಂತ್ರಸ್ತರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಿಲ್ಲ. ಬೆಳಗಾವಿ ಅಧಿವೇಶನಕ್ಕೆ ಪ್ರವಾಹ ಸಂತ್ರಸ್ತರು ಮುತ್ತಿಗೆ ಹಾಕುವ ಭಯವಿದೆ. ಈ ಹಿನ್ನೆಲೆ ಬೆಳಗಾವಿ‌ ಅಧಿವೇಶನವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಈ ಭಾಗದ ಪ್ರವಾಹ ಸಂತ್ರಸ್ತರ ನಿಜವಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದಿತ್ತು. ಪ್ರವಾಹ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ವಿಜಯಪುರದಲ್ಲಿ ಗೃಹ ಇಲಾಖೆ ಮಾಜಿ ಸಚಿವ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ.

ಸೆ. 24 ರಂದು ಬೆಳಗಾವಿಯಲ್ಲಿ‌ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಸರಕಾರ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುವ ಬದಲು ಅಬರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಪ್ರವಾಹ ಸಂತ್ತಸ್ತರಿಗೆ ರೂ. 10 ಸಾವಿರ ಪರಿಹಾರ ನೀಡಿದ್ದು ಯಾವುದಕ್ಕೂ ಸಾಕಾಗುವುದಿಲ್ಲ. ಪ್ರವಾಹದಿಂದಾಗಿ ರೂ.38000 ಕೋ. ನಷ್ಟವಾಗಿದ್ದರೂ ರಾಜ್ಯ ಸರಕಾರ ಕೇವರ ರೂ.1000 ಕೋ. ಪರಿಹಾರ ನೀಡಿ ಕೈ ತೊಳೆದುಕೊಳ್ಳುವಂತಿದೆ.

ಸಿಎಂ. ಬಿ. ಎಸ್. ಯಡಿಯೂರಪ್ಪ ‌ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮತಕ್ಷೇತ್ರದ ‌ಅನುದಾನ ಕೂಡ ತಡೆ ಹಿಡಿಯಲಾಗಿದೆ. ಈಗಿನ ಸರಕಾರಕ್ಕೆ ಗೊತ್ತು ಗುರಿ ಏನೂ ಇಲ್ಲ. ಸಮಿಶ್ರ ಸರಕಾರ ಇದಕ್ಕಿಂತ ನೂರು ಪಟ್ಟು ಚೆನ್ನಾಗಿತ್ತು ಎಂದು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights