ಸ್ಟಾರ್ ವಾರ್ ಬಗ್ಗೆ ಮಾತ್ನಾಡಿದ ಉಪೇಂದ್ರ : ಉಪ್ಪಿ ಬರ್ತ್ ಡೇಗೆ ಸಮಾಜಮುಖಿ ಕೆಲಸ ಮಾಡಿದ ಅಭಿಮಾನಿ

ಬರ್ತ್ ಡೇ ಸಂಭ್ರಮದಲ್ಲಿ ಸ್ಟಾರ್ ವಾರ್ ಬಗ್ಗೆ ಮಾತ್ನಾಡಿದ ನಟ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾರಂಗದಲ್ಲಿ ಸ್ಟಾರ್ ವಾರ್ ಇರಬೇಕು ಎಂದಿದ್ದಾರೆ. ದರ್ಶನ್, ಸುದೀಪ್ ಫ್ಯಾನ್ ಗಳ ನಡುವೆ ನಡೀತಿರೋ ಜಗಳ ಅವ್ರಿಗೂ ಗೊತ್ತು. ಅದೇನು ದೊಡ್ಡ ವಿಚಾರ ಅಲ್ಲ, ಅದನ್ನ ತುಂಬಾ ತಲೆಕೆಡಿಸಿಕೊಂಡು ದೊಡ್ಡದು ಮಾಡೋ ಅಗತ್ಯ ಇಲ್ಲ ಎಂದಿದ್ದಾರೆ.

ಇಂದು ಹುಟ್ಟುಹಬ್ಬದ ಸಂಭ್ರದಲ್ಲಿರುವ ಉಪ್ಪಿ ದಾದನ ಅಭಿಮಾನಿಯೊಬ್ಬರು ಸಮಾಜಮುಖಿ ಕೆಲಸ ಮಾಡಿದ್ದಾರೆ. ಉಪ್ಪಿ ಬರ್ತ್ ಡೇ  ಕೇಕ್ ಬದಲಿಗೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ 10 ಸಾವಿರ ರೊಪಾಯಿ ಸಹಾಯ ಮಾಡಿದ್ದಾರೆ ಭದ್ರಾವತಿ ನಾಗ.

ಕಾರ್ ವಾಶ್ ಮಾಡಿಕೊಂಡು ಜೀವನ ಮಾಡುತ್ತಿರೋ ಉಪ್ಪಿ ಅಭಿಮಾನಿ, ತನ್ನ ಒಂದು ತಿಂಗಳ ಸಂಬಳವನ್ನು ಸಹಾಯವಾಗಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೇಕ್ ಹಾರ ತರಬೇಡಿ ಎಂದಿದ್ದ ನಟ ಉಪೇಂದ್ರ ಈ ಮೊದಲೇ ತಿಳಿಸಿದ್ದರು. ಅದರಂತೆ ಕೆಲ ಅಭಿಮಾನಿಗಳು ನಡೆದುಕೊಂಡಿದ್ದಾರೆ. ಬೆಂಗಳುರಿನ ಕತ್ರಿಗುಪ್ಪೆ ನಿವಾಸದಲ್ಲಿನ ಉಪ್ಪಿ ಬರ್ತಡೇ ಆಚರಣೆ ಮಾಡಿಕೊಂಡರು. ಪ್ರತಿ ವರ್ಷವೂ ಅದ್ದೂರಿಯಾಗಿ ಉಪ್ಪಿ ಜನ್ಮದಿನ ಆಚರಿಸೋ ಅಭಿಮಾನಿಗಳು, ಈ ವರ್ಷವೂ ಬರ್ತಡೇ ಆಚರಿಸೋಕೆ ಬೆಳ್ಳಂ ಬೆಳಗ್ಗೆ ಉಪ್ಪಿ ಮನೆ ಮುಂದೆ ಜಮಾಯಿಸಿ ಶುಭಕೋರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights