ಹಣ ವಸೂಲಿ ಜೊತೆಗೆ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದ ಪೊಲೀಸಪ್ಪನ ವಿಡಿಯೋ ವೈರಲ್‌.‌…

ಹೊರಹೊಲಯದಲ್ಲಿ ಚಾಲಕರಿಂದ ಪೊಲೀಸರು ಹಣ ವಸೂಲಿ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣ ಸಿಗುತ್ತಿವೆ. ಆದರೆ ಇವ್ಯಾವುದಕ್ಕೂ ಶಿಕ್ಷೆ ಆಗಿದೆ ಅನ್ನೋ ವಿಡಿಯೋ ಆಗಲಿ ಸುದ್ದಿಯಾಗಲಿ ಇಲ್ಲಿಯವರೆಗೂ ಸಿಕ್ಕಿಲ್ಲ.

ಚಾಲಕರಿಂದ ಪೊಲೀಸರು ಹಣ ವಸೂಲಿ ಮಾಡುತ್ತಿದ್ದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜಮಖಂಡಿ ನಗರದ ಹೊರವಲಯದ ಬನಹಟ್ಟಿ ರಸ್ತೆಯಲ್ಲಿ ಪೊಲೀಸರು ಹಣ ವಸೂಲಿ ಬಲೂ ಜೋರಾಗಿ ನಡೆಯುತ್ತಿದ್ದು, ಬಾದಾಮಿ ತಾಲೂಕಿನ ಕೆರೂರಿನ ನೊಂದ ಚಾಲಕನಿಂದ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೊಸ ಸಾರಿಗೆ ನಿಯಮದ ನೆಪದಲ್ಲಿ ಹಣ ವಸೂಲಿ ಜೊತೆಗೆ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ಪೊಲೀಸಪ್ಪ ಬೈಯ್ದಿದ್ದಾನೆ. ಅಷ್ಟಕ್ಕೂ ಈ ಪೋಲಿಸಪ್ಪ ಯಾರು ಗೊತ್ತಾ..? ಬಾಗಲಕೋಟೆ ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣಾ ಎಎಸ್ಐ ಭಜಂತ್ರಿ.

ಪೊಲೀಸರಿಗೆ ಧಮ್ಕಿ ಹಾಕಿ ವಿಡಿಯೋ ಅಪ್ಲೋಡ್ ಮಾಡಿದ ಯುವಕನನ್ನು 24 ಘಂಟೆಯಲ್ಲಿ ಪತ್ತೆ ಹಚ್ಚೋ ಪೊಲೀಸರಿಗೆ ಠಾಣೆಯಲ್ಲೇ ಇರೋ ವಸೂಲಿ ಕಳ್ಳರನ್ನ ಪತ್ತೆ ಹಚ್ಚಲು ಕಷ್ಟವಾಗುತ್ತಿದೆಯೇ..? ಅಥವಾ ನಮ್ಮವರೇ ಎಂದು ಕ್ಷಮಿಸಲಾಗುತ್ತಿದೆಯೋ ಗೊತ್ತಾಗುತ್ತಿಲ್ಲ.

Spread the love

Leave a Reply

Your email address will not be published. Required fields are marked *