ಹಾಸನ ಜಿಲ್ಲೆಯಲ್ಲಿ ಜೀತಪದ್ದತಿ ಇನ್ನೂ ಜೀವಂತ : 16 ಮಂದಿ ರಕ್ಷಣೆ

ಹಾಸನ ಜಿಲ್ಲೆಯಲ್ಲಿ ಜೀತಪದ್ದತಿ ಇನ್ನೂ ಜೀವಂತವಾಗಿದ್ದು  ಭದ್ರಾವತಿ ಮತ್ತು ತಮಿಳುನಾಡು ಮೂಲದ 16 ಮಂದಿ ಬಡ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಹೌದು… ಹೊಳೆನರಸೀಪುರ ತಾಲೂಕಿನ ಮುಂಡನಹಳ್ಳಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕಾರ್ಮಿಕರಲ್ಲಿ ನಾಲ್ವರು ಮಕ್ಕಳು ನಾಲ್ವರು ಮಹಿಳೆಯರು ಸೇರಿ ಎಂಟು ಮಂದಿ‌ ಪುರುಷರನ್ನ ಜೀತಪದ್ಧತಿಯಿಂದ ರಕ್ಷಿಸಲಾಗಿದೆ.  ಈ ಮಾನವ ಕಳ್ಳಸಾಗಣೆ ಜಾಲವನ್ನು ತಾಲೂಕು ಆಡಳಿತ ಪತ್ತೆ ಮಾಡಿದೆ.

ಮಾನವ ಕಳ್ಳ ಸಾಗಣೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಜೀತ ಪದ್ದತಿಯಿಂದ ಬಾಲ ಕಾರ್ಮಿಕರನ್ನ ಮುಕ್ತಗೊಳಿಸಲಾಗಿದೆ. ಸೋಮಶೇಖರ್ ಎಂಬುವರ ಜಮೀನಿನಲ್ಲಿ ಕಾರ್ಮಿಕರು ಜೀತಪದ್ದತಿಗೆ ಒಳಗಾಗಿದ್ದರು. ಅಲ್ಪ ಹಣ ನೀಡಿ 15 ಗಂಟೆ ಕೆಲಸ ಮಾಡಿಸಿಕೊಂಡಿದ್ದ ಜಮೀನು ಮಾಲೀಕ ಸೋಮಶೇಖರ್ ಮತ್ತು ಬದ್ಯಾನಾಯಕ್ ಇಬ್ಬರನ್ನು ಬಂಧಿಸಲಾಗಿದೆ. ತಾಲೂಕು ಸರ್ಕಾರಿ ಹಾಸ್ಟೆಲ್ ನಲ್ಲಿ ಸಂತ್ರಸ್ತರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಒದಗಿಸಲಾಗಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.