ಹೆತ್ತಮ್ಮಳನ್ನ ಬೀದಿಗೆ ತಳ್ಳಿದ ಪಾಪಿ ಪುತ್ರ : ಕೊರೆಯುವ ಚಳಿಯಲ್ಲಿ ಜೀವನ ಸಾಗಿಸುತ್ತಿರುವ ತಾಯಿ..

ಹೆತ್ತ ತಾಯಿಯನ್ನು ದೇವರೆನ್ನುತ್ತಾರೆ ಆದ್ರೆ ಪಾಪಿ ಪುತ್ರ ಹೆತ್ತಮ್ಮಳನ್ನೆ ಬೀದಿಯಲ್ಲಿ ತಳ್ಳಿದ್ದಾನೆ.ಹೀಗಾಗಿ ಹೊನ್ಮಮ್ಮ ಕೊರೆಯುವ ಚಳಿಯಲ್ಲಿಯೇ ಕಣ್ಣೀರು ಹಾಕುತ್ತಾ ನೋವಿನ ಜೀವನ ಸಾಗಿಸುತ್ತಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಎಪಿಎಂಸಿಯಲ್ಲಿ ನಾಲ್ಕು ತಿಂಗಳಿನಿಂದ ಹೊನ್ನಮ್ಮ ಆಶ್ರಯ ಪಡೆದಿದ್ದಾಳೆ.ಕೆಂಭಾವಿಯ ಶಿವಾಜಿನಗರದ ಹೊನ್ಮಮ್ಮಳನ್ನು ಆಕೆಯ ಪುತ್ರ ಸಿದ್ದಪ್ಪ ಎಪಿಎಂಸಿ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ.ಕಳೆದ ನಾಲ್ಕು ತಿಂಗಳಿನಿಂದ ವೃದ್ಧೆ ಕೊರೆಯುವ ಚಳಿಯಲ್ಲಿ ವಾಸ ಮಾಡುತ್ತಿದ್ದಾಳೆ.ನಿತ್ಯವು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ.

ಮಕ್ಕಳಿಗಾಗಿ ತಾಯಿ ಹಂಬಲಿಸುತ್ತಿದ್ದು ಆದ್ರೆ ಪುತ್ರ ಮಾತ್ರ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿಲ್ಲ.ಎಪಿಎಂಸಿ ಆವರಣದಲ್ಲಿ ಸುತ್ತಲಿನ ರೈತರು ಉಪಚಾರ ಮಾಡುತ್ತಿದ್ದಾರೆ.ಹೆತ್ತಮ್ಮಳನ್ನು ಮನೆಯಲ್ಲಿ ಇಟ್ಟುಕೊಂಡು ತಾಯಿಯ ಅರೈಕೆ ಮಾಡಬೇಕಾದ ಪುತ್ರ ಮಾನವೀಯತೆ ಮರೆತು ಬೀದಿಗೆ ತಳ್ಳಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights