ಹೆದ್ದಾರಿಯಲ್ಲಿ ಅಡ್ಡಲಾಗಿ ಬಂದ ಬೈಕ್ ಸವಾರ : ಅಪಘಾತ ತಪ್ಪಿಸಲು ಹೊರಟ ಶಾಸಕರ ಕಾರ್ ಅಪಘಾತ

ಅಪಘಾತ ತಪ್ಪಿಸಲು ಹೊರಟ ಶಾಸಕರ ಕಾರಿ ಅಪಘಾತಕ್ಕೀಡಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂದ ಅವರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಇಂದು ಆಲಮಟ್ಟಿಯಲ್ಲಿ ನಡೆಯಲಿರುವ ವಿಧಾನಸಭ ಸಚಿವಾಲಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕಲ್ಯಾಣ ಸಮಿತಿ ಸಭೆಗೆ ಶಾಸಕರು ಆಗಮಿಸುತ್ತಿದ್ದರು.

ವಿಜಯಪುರ ಜಿಲ್ಲೆಯ ಗೊಳಸಂಗಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರ ಹಂಗರಗಿ ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ಶಾಸಕರ ಕಾರು ಹೊರಟಾಗ ಹೆದ್ದಾರಿಯಲ್ಲಿ ಅಡ್ಡಲಾಗಿ ಬೈಕ್ ಸವಾರ ಬಂದಿದ್ದಾನೆ. ಈ ವೇಳೆ ಶಾಸಕರ ಕಾರು ಚಾಲಕ ದಿಢೀರೆಂದು ಬ್ರೆಕ್ ಹಾಕಿದಾಗ ಹಿಂಬದಿಯಿಂದ ಬಂದ ವಿಜಯಪುರ ಮೂಲದ ಮತ್ತೊಂದು ಕಾರು ಶಾಸಕರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಶಾಸಕರ ಕಾರು ಹಿಂಬದಿಯಲ್ಲಿ ಕೊಂಚ ಜಖಂ ಆಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights