ಅನುಷ್ಕಾ ಶರ್ಮಾಗೆ ಕೊಹ್ಲಿ ಡಿವೊರ್ಸ್ ಕೊಡಬೇಕು ಎಂದ ಬಿಜೆಪಿ ಶಾಸಕ!

ನಟಿ ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ ಎಂದು ಬಿಜೆಪಿ ಶಾಸಕರೊಬ್ಬರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೇಳಿದ್ದಾರೆ.

ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ಮೊದಲ ವೆಬ್ ಸೀರಿಸ್ ‘ಪಾತಾಳ್ ಲೋಕ್’ನಲ್ಲಿ ಜಾತಿ ನಿಂದನೆ, ಜಾತಿ ದೌರ್ಜನ್ಯಗಳ ಬಗೆಗೆ ಚಿತ್ರೀಕರಿಸಲಾಗಿದೆ. ಪತ್ರಕರ್ತರ ಪತ್ರಿಕಾ ನಿಷ್ಟೆ, ನಿಷ್ಪಕ್ಷಪಾತದಂತಹ ಚರ್ಚೆಗಳನ್ನೂ ಸೀರೀಸ್‌ನಲ್ಲಿ ಮಾಡಲಾಗಿದೆ.

ಜಾತಿ ನಿಂದನೆ ಮತ್ತು ಧರ್ಮದ ಕೋಮುವಾದೀಕರಣದ ಸುತ್ತಲೂ ಕತೆ ಎಣೆಯಲಾಗಿದೆ. ಈ ಕಾರಣಕ್ಕಾಗಿ ಅನುಷ್ಕಾಗೆ ನೋಟಿಸ್ ಕೂಡ ನೀಡಲಾಗಿದೆ.

ನಂದಕಿಶೋರ್ ಗುರ್ಜರ್ ಎಂಬ ಬಿಜೆಪಿ ಎಂಎಲ್‍ಎ ಅನುಷ್ಕಾ ಶರ್ಮಾ ಅವರ ವಿರುದ್ಧ ದೂರು ನೀಡಿದ್ದು, ಅವರಿಗೆ ಡಿವೋರ್ಸ್‌ ನೀಡಿ ಎಂದು ಕೋಯ್ಲಿಯವರಿಗೆ ಹೇಳಿದ್ದಾರೆ. ಇದೆಲ್ಲದರ ನಡುವೆ  ವೆಬ್ ಸೀರೀಸ್ ಬ್ಯಾನ್ ಮಾಡಬೇಕೆಂದು ಅಭಿಯಾನ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights