ಆಂಗ್ಲ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಸಾವು : ಡಿ.ಟಿ ಲಸಿಕೆ ಹಾಕಿಸುವ ಮುನ್ನ ಹುಷಾರ್..!

ಶಾಲೆಯಲ್ಲಿ ಡಿ.ಟಿ ಲಸಿಕೆ ಹಾಕಿಸಿದ ಬಳಿಕ ವಿದ್ಯಾರ್ಥಿಯೊಬ್ಬಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಚೇತನ ಆಂಗ್ಲ ಶಾಲೆಯಲ್ಲಿ ನಡೆದಿದೆ.

5ನೇ ತರಗತಿ ವಿಧ್ಯಾರ್ಥಿ 11ವರ್ಷದ ನವೀನ್ ಮೃತ ಬಾಲಕ. ತಾಲ್ಲೂಕಿನ ಪುರವರ ಹೋಬಳಿಯ ಗೊಂವಿಂದನ ಹಳ್ಳಿ ಗ್ರಾಮದ ನರೇಂದ್ರ ಎಂಬುವರ ಮಗ. ಶಾಲೆಯಲ್ಲಿ ಇಂದು ಮಕ್ಕಳಿಗೆ ಡಿ.ಟಿ ಲಸಿಕೆಯನ್ನು ನೀಡಲಾಗಿತ್ತು. ಈ ಲಸಿಕೆ ಇಂದಲೆ ಮಗು ಮೃತ ಪಟ್ಟಿದೆ ಎಂದು ಪೋಷಕರ ಆರೋಪ ಮಾಡಿದ್ದಾರೆ.

ಶಾಲೆ ಮುಗಿಸಿ ಮನೆಗೆ ತೆರಳಿದ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ.  ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲೆಗೆ ಹೋಗಿ ಲಸಿಕೆ ಪಡೆದಿದ್ದ ಮಕ್ಕಳ ಪೋಷಕರಲ್ಲಿ ಅತಂಕ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights