ಆನ್​ಲೈನ್​ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ? ಬಿಗ್ ಬಾಸ್ ಪ್ರಥಮ್ ಪ್ರಶ್ನೆ..

‘ಬಿಗ್ ಬಾಸ್ ಕನ್ನಡ ಸೀಸನ್ 4’ ರ ವಿಜೇತ ಒಳ್ಳೆ ಹುಡುಗ ಪ್ರಥಮ್ ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ ಒಂದಿಲ್ಲಾ ಒಂದು ಸುದ್ದಿ ಮಾಡುತ್ತಲೇ ಇರುತ್ತಾರೆ. ಕೊರೊನಾ ಲಾಕ್ ಡೌನ್ ನಿಂದಾಗಿ ಆಹಾರ ಮತ್ತು ತರಕಾರಿ ಹಂಚುವ ಮೂಲಕ ಸುದ್ದಿಯಾಗಿದ್ದ ಪ್ರಥಮ್ ಸದ್ಯ ಸರ್ಕಾರಕ್ಕೆ ಪ್ರಶ್ನೆಯೊಂದನ್ನ ಹಾಕಿದ್ದಾರೆ.

ಹೌದು…. ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಕೆಲವು ಕಡೆ ಆನ್ ಲೈನ್ ಕ್ಲಾಸ್ ಗಳನ್ನ ಮಾಡಲಾಗುತ್ತಿದೆ ಕೂಡ. ಆದರೆ ಈ ಬಗ್ಗೆ ಬಿಗ್ ಬಾಸ್ ಪ್ರಥಮ್ ಪ್ರಶ್ನೆಯೊಂದನ್ನ ಹಾಕಿದ್ದಾರೆ. ‘ನೇರವಾಗಿ ಮಕ್ಕಳಿಗೆ ಪಾಠ ಹೇಳಿದರೆನೇ ತಲೆಗೆ ಹೋಗುವುದು ಕಷ್ಟ ಇದೆ. ಅಂಥದ್ರಲ್ಲಿ ಆನ್ ಲೈನ್ ಪಾಠ ಹೇಗೆ ತಲೆಗೋಗುತ್ತಾ..? ಇನ್ನು ಆನ್​ಲೈನ್ ಕ್ಲಾಸ್ ಕೇಳಿ ಪರೀಕ್ಷೆ ಬರೆದರೆ ದೇವ್ರಿಗೇ ಪ್ರೀತಿ. ಹಳ್ಳಿಯಲ್ಲಿ ನೆಟ್​ವರ್ಕ್ ಸಮಸ್ಯೆ ಇರುತ್ತೆ. ಆನ್​ಲೈನ್​ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?’ ಎಂದು ಒಳ್ಳೆ ಹುಡುಗ ವ್ಯಂಗ್ಯವಾಗಿ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

ಸದ್ಯ ಈ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಒಳ್ಳೆ ಹುಡುಗನ ಮಾತಿಗೆ ಅಭಿಮಾನಿಗಳು ಜೈ ಎಂದಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ‘ನಟಭಯಂಕರ’ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights