ಆರ್ಥಿಕ ಪ್ಯಾಕೇಜ್ : ಇಂದು ಸಂಜೆ 4 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ..!

ನಿನ್ನೆ ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಆರ್ಥಿಕ ಕುಸಿತ ಕಂಡಿರುವ ಪರಿಣಾಮ ನೆರವಿಗಾಗಿ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದರು. ಅದರ ವಿವರಗಳನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಲಿದ್ದಾರೆ ಎಂದು ಹೇಳಿದ್ದರು.

ನಿನ್ನೆ ಪ್ರಧಾನಿ ಮೋದಿಯವರು ಪ್ರಕಟಿಸಿದ್ದ ಮೊತ್ತ 265 ಬಿಲಿಯನ್ ಡಾಲರ್ ಆಗಿದ್ದು ಇಡೀ ಏಷ್ಯಾ ಖಂಡದಲ್ಲಿ ಜಪಾನ್ ನಂತರ ಇಷ್ಟೊಂದು ಪರಿಹಾರ ಮೊತ್ತವನ್ನು ಪ್ರಕಟಿಸಿದ ದೇಶ ಭಾರತವಾಗಿದೆ.
ಜತೆಗೆ ದೇಶದ ಶ್ರಮಿಕ ವರ್ಗಕ್ಕೆ ಉತ್ತೇಜನ ನೀಡುವ ಸಲುವಾಗಿ ಗೃಹೋದ್ಯಮಗಳ ಅಭಿವೃದ್ಧಿಗಳಿಗಾಗಿ, ಚಿಕ್ಕ ಮತ್ತು ದೊಡ್ಡ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ, ರೈತರಿಗಾಗಿ, ನಿಯತ್ತಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗ ಸಹಿತ ದೇಶದ ಅಭಿವೃದ್ಧಿಗೆ ಆಧಾರ ಸ್ತಂಭವಾಗಿರುವ ಎಲ್ಲ ಕ್ಷೇತ್ರಗಳ ಪುನರುತ್ಥಾನಕ್ಕಾಗಿ ಈ ಪ್ಯಾಕೇಜನ್ನು ಘೋಷಿಸಲಾಗುತ್ತದೆ ಎಂದ ಪ್ರಧಾನಿ ಈ ಕುರಿತಂತೆ ವಿತ್ತ ಸಚಿವರು ಬುಧವಾರದಿಂದ ಹಂತ ಹಂತವಾಗಿ ಪ್ಯಾಕೇಜಿನ ವಿವರಗಳನ್ನು ನೀಡಲಿದ್ದಾರೆ ಎಂದಿದ್ದರು.

ಈ ನಿಟ್ಟಿನಲ್ಲಿ ಇಂದು ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಕರೆದಿದ್ದು ಅದರಲ್ಲಿ ಆರ್ಥಿಕ ಪ್ಯಾಕೇಜ್, ಆತ್ಮನಿರ್ಭಾರ್ ಭಾರತ್ ಅಭಿಯಾನ ಬಗ್ಗೆ ವಿವರ ನೀಡಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights