ಎಪಿಎಂಸಿ ಕಾಯ್ದೆ ತಿದ್ದುಪಡಿ : ಬಿಜೆಪಿ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ…!
ಎಪಿಎಂಸಿ ತಿದ್ದಪಡಿ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಏಕಪಕ್ಷೀಯ ನಿರ್ಧಾರದ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.
ಇದು ಎಪಿಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಸೇರಿದಂತೆ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಲು ಮುಂದಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧಾರದ ವಿರುದ್ಧದ ಪ್ರತಿಭಟನೆಯಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಎಚ್.ಕೆ ಪಾಟೀಲ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಸೇರಿದಂತೆ ಮತ್ತಲವರು ಭಾಗಿಯಾಗಲಿದ್ದಾರೆ. ಇನ್ನು, ಪ್ರತಿಭಟನೆ ಬಳಿಕ ಗವರ್ನರ್ ಮತ್ತು ರಾಜ್ಯ ಚುನಾವಣಾ ಆಯುಕ್ತರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಲಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂಸರಿಯದಿದ್ದರೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಲಿದೆ.
ಸುಗ್ರೀವಾಜ್ಞೆಯಲ್ಲೇನಿದೆ..?
1.ಎಪಿಎಂಸಿ ಮಾರುಕಟ್ಟೆಗಳಲ್ಲೇ ರೈತರು ಉತ್ಪನ್ನ ಮಾರಬೇಕೆಂದು ನಿಯಮಕ್ಕೆ ತಿದ್ದಪಡಿ ಮಾಡಲಾಗಿದೆ.2. ಎಪಿಎಂಪಿಯಲ್ಲೇ ಖರೀದಿದಾರರು ಖರೀದಿಸಬೇಕು ಎಂಬ ನಿಯಮವೂ ರದ್ದಾಗಿದೆ.3. ರೈತರು ತಮಗೆ ಇಷ್ಟ ಬಂದವರಿಗೆ ಉತ್ಪನ್ನ ಮಾರಾಟ ಮಾಡಬಹುದು. 4. ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಮಾಡಬಹುದು.5 . ಖರೀದಿ, ಮಾರಾಟದ ಮೇಲೆ ಎಪಿಎಂಪಿಗಳಿಗೆ ನಿಯಂತ್ರಣ ಇಲ್ಲ. ಖಾಸಗಿಯವರು ಅರ್ಹತೆ ಇದ್ದರೆ ಸ್ವಂತ ಮಾರುಕಟ್ಟೆ ಸ್ಫಾಪಿಸಿಕೊಳ್ಳಲು ಅವಕಾಶ ನೀಡಲಾಗಿದೆ.6. ಖಾಸಗಿಯವರು ಮಾರುಕಟ್ಟೆ ನಿರ್ದೇಶನಾಲಯದ ಅನುಮತಿ ಪಡೆದು ಖರೀದಿಸಬೇಕು. ಖರೀದಿಗೆ ವಿದ್ಯುನ್ಮಾನ ತೂಕದ ಯಂತ್ರ ಬಳಕೆ ಆಗಬೇಕು.
ತಿದ್ದುಪಡಿಯನ್ನು ನಿರಾಕರಿಸುತ್ತಿರುವುದೇಕೆ..?
1.ಎಪಿಎಂಸಿ ಮಾರುಕಟ್ಟೆಗಳು ನಿಧಾನವಾಗಿ ಬಾಗಿಲು ಹಾಕುವ ಸ್ಥಿತಿಗೆ ಬರಲಿವೆ. 2.ಮಾರುಕಟ್ಟೆ ವ್ಯವಸ್ಥೆ ಕ್ರಮೇಣ ಸರ್ಕಾರದಿಂದ ಖಾಸಗಿಗಳ ಕೈಗಳಿಗೆ ಜಾರಲಿದೆ. 3.ತಾಲೂಕು ಮಟ್ಟದಲ್ಲಿ ಖಾಸಗಿ ವರ್ತಕರಿಂದ ರೈತರ ಮೇಲೆ ಶೋಷಣೆ ಉಂಟಾಗಬಹುದು. 4.ಮಧ್ಯವರ್ತಿಗಳ ಮೂಲಕ ಕಾರ್ಪೋರೇಟ್ ಕಂನಿಗಳು ಹಳ್ಳಿಗಳನ್ನು ನಿಯಂತ್ರಿಸುವಂತಾಗಬಹುದು. 5. ಖಾಸಗಿಯವರೇ ಮಾರುಕಟ್ಟೆ ನಿರ್ಮಿಸಿಕೊಳ್ಳಲು ಅವಕಾಶವಿದೆ. 6. ವರ್ತಕರಿಂದ ಹಣ, ತೂಕ ಮತ್ತಿತರ ವಂಚನೆಗಳು ಉಂಟಾಗಬಹುದು.
ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ರೈತರಿಗೆ ಸಂಕಷ್ಟ ತರುವ ಈ ನಡೆಯನ್ನು ಸರಕಾರ ಕೈಬಿಡಬೇಕು ಇಲ್ಲವಾದರೆ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.
https://twitter.com/hd_kumaraswamy/status/1260812974018531331?s=20

