ಒಂದೇ ದಿನಕ್ಕೆ ರಾಜ್ಯದಲ್ಲಿ 12 ಕೊರೊನಾ ಪ್ರಕರಣ ಪತ್ತೆ : 371ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್-19ಗೆ ರಾಜ್ಯದ ಜನ ಕಂಗಾಲಾಗಿದ್ದು ಮತ್ತೆ ಇಂದು ಹೊಸದಾಗಿ 12 ಸೋಂಕಿತರು ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.

ಹೌದು.. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಮಧ್ಯಾಹ್ನ 12ಗಂಟೆ ವೇಳೆಗೆ 12 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ರಾಜ್ಯ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸದ್ಯ ರಾಜ್ಯದಲ್ಲಿ ಒಟ್ಟು 371 ಸೋಂಕಿತರಿದ್ದು ಇವರಲ್ಲಿ 13 ಜನ ಮೃತಪಟ್ಟಿದ್ದು, 92 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಪತ್ತೆಯಾದ 12 ಸೋಂಕಿತರು ಪೈಕಿ ಮೈಸೂರಿನಲ್ಲಿ ಮೂವರಿಗೆ, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ, ಧಾರವಾಡ, ಮಂಡ್ಯ, ಗದಗ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೋಂಕಿತರು ಎಂದು ಹೇಳಲಾಗುತ್ತಿದೆ. ಇವರೆಲ್ಲರಿಗೂ ಸೋಂಕಿನ ಮೂಲವಿದ್ದು ಸೋಂಕಿತರಿಂದಲೇ ಸೋಂಕು ಹರಡಿದೆ.

ಮತ್ತೊಂದು ಆಶ್ಚರ್ಯ ಎಂದರೆ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶದಲ್ಲೇ ಮೊದಲು ಕೊರೊನಾ ಸೋಂಕಿಗೆ ಬಲಿಯಾದವರು ಕಲಬುರಗಿಯ ವೃದ್ಧ. ಹೀಗಿರುವಾಗ ಕಲಬುರಗಿಯ ಆಳಂದದ, ರಾವುರ್ ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದು, ಜಾತ್ರೆಗಳಲ್ಲಿ ನೂರಾರು ಜನ ಭಾಗವಹಿಸುವುದು ಮಾತ್ರವಲ್ಲದೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಲಾಕ್ ಡೌನ್ ನಿಯಮ ಉಲ್ಲಂಘನೆಯಾದರೂ ಇಲ್ಲಿನ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ.

ಇನ್ನೂ ಬೆಂಗಳೂರಿನಲ್ಲಿ ಹೇಳಬೇಕಾ? ನಿನ್ನೆಯಷ್ಟೇ ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರ ಮದುವೆಯಲ್ಲಿ ನೂರಾರು ಜನ ಭಾಗವಹಿಸಿದ್ರು. ಇಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಮಡಿರಲಿಲ್ಲ. ಮಾಸ್ಕ್ ಧರಿಸಲಾಗಿರಲಿಲ್ಲ. ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳೇ ಈ ರೀತಿ ವರ್ತಿಸಿದರೆ ಇನ್ನೂ ಜನಸಾಮಾನ್ಯರ ಪಾಡು ಹೇಲೋಹಾಗೇ ಇಲ್ಲಬಿಡಿ.

ಒಟ್ಟಿನಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತವರಲ್ಲಿ ಆತಂಕ ಹೆಚ್ಚಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights