ಕಾಂಗ್ರೆಸ್‌ನಿಂದ ಇಂದು ಸ್ಪೀಕ್‌ ಅಪ್‌ ಇಂಡಿಯಾ ಅಭಿಯಾನ

ಕೊರೊನಾ ವೈರಸ್‌ ನಿಯಂತ್ರಣ, ಲಾಕ್‌ಡೌನ್‌ನಿಂದಾದ ಸಮಸ್ಯೆಗಳು, ಲಾಕ್‌ಡೌನ್ ಮತ್ತು ಕೊರೊನಾ ಬಿಕ್ಕಟ್ಟಿನಲ್ಲಿ ಸಂದರ್ಭವನ್ನು ನಿಭಾಯಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಫಲತೆಯ ಬಗ್ಗೆ ಸರ್ಕಾರಗಳನ್ನು ನಾಗರಿಕರು ಪ್ರಶ್ನೆ ಮಾಡಬೇಕು ಎಂದು ಕಾಂಗ್ರೆಸ್‌ ಪಕ್ಷವು #SpeakUpIndia ಅಭಿಮಾನಕ್ಕೆ ಇಂದು ಕರೆಕೊಟ್ಟಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರವನ್ನು ಪ್ರಶ್ನಿಸಲು ನಿಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಿಂದ ಲೈವ್‌ ಬಂದು ಸರ್ಕಾರವನ್ನು ಪ್ರಶ್ನಿಸಿ, ನಿಮ್ಮ ದನಿಯನ್ನು ದೇಶದ ದನಿಯನ್ನಾಗಿಸಿ ಎಂದು ರಾಜ್ಯದ ಜನರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ.

ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ,  ಅವರು ಆರೋಗ್ಯವಾಗಿ ತಮ್ಮೂರುಗಳಿಗೆ ಮರಳುವಂತೆ ಸರ್ಕಾರ ನೋಡಿಕೊಳ್ಳಬೇಕು. ನರೇಗಾ ಅಡಿಯಲ್ಲಿ ವಾ‍ರ್ಷಿಕ ಕನಿಷ್ಟ 200 ದಿನಗಳಿಗೆ ಕೆಲಸದ ದಿನಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ #SpeakUpIndia ಅಭಿಯಾನಕ್ಕೆ ಕರೆಕೊಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ಅಭಿಯಾನ ಆರಂಭವಾಗಲಿದ್ದು, ಅಭಿಯಾನಕ್ಕೆ ಎಲ್ಲಾ ಜನರು ಭಾಗಯಾಗಬೇಕು ಎಂದು ಕೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವುದು, ಲಾಕ್‌ಡೌನ್‌ ಮತ್ತು ಕೊರೊನಾದ ಸಂಕಷ್ಟಕ್ಕೆ ಗುರಿಯಾದವರ ಸಂಕಷ್ಟಗಳ ಬಗ್ಗೆ ಮಾತನಾಡಿಸುವುದು, ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಿರುಚಿತ್ರಗಳನ್ನು ಮಾಡಿ ಅಥವಾ ಕೆಪಿಸಿಸಿ ನೀಡುವ ವಿಡಿಯೋಗಳನ್ನು ತಮ್ಮ ಖಾತೆಯಿಂದ ಹಂಚಿಕೊಳ್ಳುವ ಮೂಲಕ ಸರ್ಕಾರವನ್ನು ಪ್ರಶ್ನಿಸಬೇಕು. ದೇಶಕ್ಕಾಗಿ ನಿಮ್ಮ ದನಿಗೂಡಿಸಿ ಎಂದು ಕರೆನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights